ಸರ್ವರ್‌ ಸಮಸ್ಯೆ: ಆರೋಗ್ಯ ಕಾರ್ಡ್‌ ವಿತರಣೆ ವಿಳಂಬ

Team Udayavani, Sep 6, 2019, 12:52 PM IST

ಸಂತೆಮರಹಳ್ಳಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನ್‌ ಆರೋಗ್ಯ ಯೋಜನೆ ಜಾರಿಯಲ್ಲಿ ತಾಲೂಕಿನ ಎಲ್ಲರಿಗೂ ಕಾರ್ಡ್‌ ವಿತರಿಸಲು ಸರ್ವರ್‌ ಅಸಹಕಾರವೇ ದೊಡ್ಡ ತೊಡಕಾಗಿದೆ. ಇದರಿಂದ ಬಡ ರೋಗಿಗಳಿಗೆ ಚಿಕಿತ್ಸೆಗೆ ದೊಡ್ಡ ಸಮಸ್ಯೆಯಾಗಿದೆ.!

ತಾಲೂಕಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಕೇಂದ್ರದಲ್ಲಿ ಕಳೆದ 15 ದಿನಗಳಿಂದಲ್ಲೂ ಇಂಟೆರ್‌ ನೆಟ್ ಹಾಗೂ ಸರ್ವರ್‌ ಸಮಸ್ಯೆಯಿಂದ ಕಾರ್ಡ್‌ ನೋಂದಣಿ ನಿಲ್ಲಿಸಲಾಗಿದೆ. ಇದರಿಂದ ಬಡ ಜನರಿಗೆ ಆರೋಗ್ಯ ಕಾರ್ಡ್‌ ಇಲ್ಲದೇ ಚಿಕಿತ್ಸೆಗಳಿಗೆ ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆರೋಗ್ಯ ಕಾರ್ಡ್‌ ವಿತರಣೆ: ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬ ಹಾಗೂ ಎಪಿಎಲ್ಗೆ ಸೇರಿದವರಿಗೂ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತದೆ. ಹಲವು ತಿಂಗಳ ಹಿಂದೆ ದಿನ ತಲಾ 80 ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸ ಲಾಗುತ್ತಿತ್ತು. ಮೊದಲು ಬಂದವರಿಗೆ ಆದ್ಯತೆ ನೀಡಲಾ ಗುತ್ತಿತ್ತು. ಇದಕ್ಕಾಗಿ ಜನ ಬೆಳ್ಳಂಬೆಳಗ್ಗೆ ಕೇಂದ್ರ ಗಳ ಎದುರು ಕಾದು ನಿಂತು ಟೋಕನ್‌ ಪಡೆಯುತ್ತಿದ್ದರು.

ಸಾರ್ವಜನಿಕರ ಪರದಾಟ: ಕಾರ್ಡ್‌ದಾರರ ಕುಟುಂಬದ ಎಲ್ಲಾ ಸದಸ್ಯರ ಬಯೋಮೆಟ್ರಿಕ್‌ ಪಡೆದು ವಿವರಗಳನ್ನು ಅಪ್‌ಲೋಡ್‌ ಮಾಡಿ ಕಾರ್ಡ್‌ ವಿತರಿಸಲಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ತಲಾ ಕಾರ್ಡ್‌ಗೆ 10 ರೂ. ಶುಲ್ಕ ನಿಗದಿಯಾಗಿದೆ. ಆಯು ಷ್ಮಾನ್‌ ಭಾರತ ಕಾರ್ಡ್‌ ಪಡೆಯಲು ಕನಿಷ್ಠ ಒಂದು ದಿನವಾದರೂ ಬೇಕು. ಸರ್ವರ್‌ ಸಮಸ್ಯೆಯಿಂದಾಗಿ ಇದಕ್ಕಿಂತ ಹೆಚ್ಚು ಸಮಯ ತೆಗೆದು ಕೊಳ್ಳುವುದೂ ಇದೆ ಆದರೆ ಇದು ಈಗ ನಿಂತಿರುವುದರಿಂದ ಸಾರ್ವ ಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂಟರ್‌ನೆಟ್ ಸಮಸ್ಯೆ: ತಾಲೂಕಿನಲ್ಲಿ ಕಾರ್ಡ್‌ ವಿತರಣೆಗೆ ಇಂಟರ್‌ನೆಟ್ ಸೌಲಭ್ಯದ ತೊಂದರೆ ಯಿಂದ ಹಲವು ಸಮಸ್ಯೆ ಎದುರಾಗಿವೆ. ತಾಲೂಕಿನ ಆಸ್ಪತ್ರೆಯಲ್ಲಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲು ಪ್ರತ್ಯೇಕ ಕೊಠಡಿಯಿಲ್ಲ. ಪಟ್ಟಣ ಹಾಗೂ 33 ಹಳ್ಳಿಗಳ ಜನರು ನಿತ್ಯ 15-20 ಜನರು ಹೆಸರು ನೋಂ ದಾಯಿಸಿಕೊಳ್ಳುತ್ತಿದ್ದಾರೆ.

10 ಸಾವಿರಕ್ಕೂ ಹೆಚ್ಚು ಕಾರ್ಡ್‌ ವಿತರಣೆ: ಸರ್ಕಾರದ ಅಧಿಕೃತ ಕೇಂದ್ರ ಬೇರೆ ಯಾವ ಸ್ಥಳಗಳಲ್ಲಿ ಇಲ್ಲ ಇದರಿಂದ ಹೆಚ್ಚು ನೋಂದಣಿಯು ವಿಳಂಬವಾ ಗುತ್ತಿದೆ. ಇನ್ನೂ ಹೆಚ್ಚು ಜನರಿಗೆ ಕೊಡಬಹುದು ಆದರೆ ಸರ್ವರ್‌ ಸಮಸ್ಯೆಯಿಂದ ಕಳೆದ 15 ದಿನಗಳಿಂದಲ್ಲೂ ಕಾರ್ಡ್‌ ನೋಂದಾಣಿ ಪಕ್ರಿಯೆಯು ನಿಧಾನವಾಗಿತ್ತು. ಇದರಿಂದ ತಾಲೂಕಿನ ಜನರಿಗೆ ಆರೋಗ್ಯ ಕಾರ್ಡ್‌ನ್ನು ಪಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಜನವರಿ ತಿಂಗಳಿಂದ ಪ್ರಾರಂಭವಾದ ಕೇಂದ್ರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಡ್‌ನ್ನು ವಿತರಿಸಲಾಗಿದೆ. ಇನ್ನೂ ಬಾಕಿ ಉಳಿದಿರುವ ಫ‌ಲಾನುಭವಿಗಳಿಗೆ ಆದಷ್ಟು ಬೇಗ ಕಾರ್ಡ್‌ನ್ನು ವಿತರಿ ಸುವ ನಿಟ್ಟಿನಲ್ಲಿ ಹೆಚ್ಚು ಕೇಂದ್ರಗಳಲ್ಲಿ ತೆರೆಯಬೇಕೆಂದು ಸಾರ್ವಜನಿಕರು ಆಗ್ರಹಿದ್ದರು.

ಆರೋಗ್ಯ ಕಾರ್ಡ್‌ ಇಲ್ಲದೆ ಸಾರ್ವಜನಿಕರ ಪರದಾಟ: ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ಕೇಂದ್ರವು ಕಳೆದ ಹಲವು ದಿನಗಳಿಂದ ನೋಂದಣಿ ಮಾಡುತ್ತಿಲ್ಲ. ಇದರಿಂದ ಬಡ ಜನರಿಗೆ ಆರೋಗ್ಯ ಕಾರ್ಡ್‌ ಇಲ್ಲದೆ ಪರದಾಡುವ ಪರಿಸ್ಥಿತಿ ಇದೆ. ತಾಲೂಕಿನಲ್ಲಿ ಒಂದೇ ಕೇಂದ್ರ ಇರುವುದರಿಂದ ಸಾಕಷ್ಟು ಜನರು ಕಾರ್ಡ್‌ಗಾಗಿ ಮುಗಿ ಬೀಳುತ್ತಿ ದ್ದಾರೆ. ಆದ್ದರಿಂದ ಮತ್ತಷ್ಟು ಕೇಂದ್ರಗಳನ್ನು ತೆರೆ ಯುವ ಮೂಲಕ ಜನ ಸಾಮಾ ನ್ಯರಿಗೆ ಅನುಕೂಲ ಮಾಡಬೇಕು ಎಂಬುದು ಕಂದ ಹಳ್ಳಿ ಗ್ರಾಮದ ನಾರಾಯಣ ಅವರ ಆಗ್ರಹವಾಗಿದೆ.

 

● ಫೈರೋಜ್‌ ಖಾನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ