Udayavni Special

ಶಿವರಾತ್ರಿ ಜಾತ್ರೆಯಲ್ಲಿ ಮಾದಪ್ಪನ ವೈಭವದ ಉತ್ಸವ


Team Udayavani, Mar 13, 2021, 12:26 PM IST

ಶಿವರಾತ್ರಿ ಜಾತ್ರೆಯಲ್ಲಿ ಮಾದಪ್ಪನ ವೈಭವದ ಉತ್ಸವ

ಹನೂರು: ಹಳೇ ಮೈಸೂರು ಭಾಗದ ಆರಾಧ್ಯ ದೈವ ಮಲೆ ಮಹದೇಶ್ವರನ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಎಣ್ಣೆಮಜ್ಜನ ಸೇವೆ ಮತ್ತು ಅಮಾವಾಸ್ಯೆ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳೊಂದಿಗೆ ಸಾಂಪ್ರದಾಯಿಕವಾಗಿ ನೆರವೇರಿದವು.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರು ವಾರ ತಡರಾತ್ರಿ ಮಲೆ ಮಾದಪ್ಪನಿಗೆ ತ್ರಿಕಾಲ ಅಭಿಷೇಕ ಪೂಜಾ ಕೈಂಕರ್ಯಗಳನ್ನು ನೆರ ವೇರಿಸಿ ಎಳ್ಳುಕುಟ್ಟಿದ ಎಣ್ಣೆ ಹಾಗೂ ಇನ್ನಿತರ ತೈಲ ಗಳಿಂದ ತೈಲಾಭಿಷೇಕ ನೆರವೇರಿಸಲಾಯಿತು. ಬಳಿಕ ಮಾದಪ್ಪನಿಗೆ ವಿಭೂತಿ ಅಭಿಷೇಕ, ರುದ್ರಾಭಿ ಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅಭಿಷೇಕ ಪೂಜಾ ಕೈಂಕರ್ಯಗಳನ್ನು ಬೇಡಗಂಪಣ ಅರ್ಚಕರಿಂದ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.

ಬಳಿಕ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸ‌ಲಾಗಿದ್ದ ತೆರೆದ ವಾಹನದಲ್ಲಿ ಮಾದಪ್ಪನ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ವೀರಗಾಸೆ ಕುಣಿತ ತಂಡ, ನಂದಿಕಂಬ, ಸತ್ತಿಗೆ ಸುರ ಪಾನಿ ಸಮೇತ ದೇವಾಲಯದ ಆವರಣ ದಿಂದ ತಂಬಡಗೇರಿಯವರೆಗೆ ಮೆರವಣಿಗೆ ನಡೆಸ ಲಾಯಿತು. ಬಳಿಕ ಶುಕ್ರವಾರ ಮುಂಜಾನೆ ವೇಳೆಗೆ ಉತ್ಸವಮೂರ್ತಿಯನ್ನು ದೇವಾಲಯಕ್ಕೆ ತಂದು ಅಮಾವಾಸ್ಯೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಶಿವರಾತ್ರಿ ಜಾಗರಣೆಯಿಲ್ಲ: ಕೋವಿಡ್‌-19 ಹಿನ್ನೆಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿರಿವ್ಯಾಪ್ತಿಯ ಭಕ್ತಾದಿಗಳನ್ನು ಹೊರತುಪಡಿಸಿ ಜಿಲ್ಲೆ,ಅಂತರ ಜಿಲ್ಲೆ ಮತ್ತು ಅಂತರರಾಜ್ಯ ಭಕ್ತಾದಿಗಳಿಗೆ ನಿಷೇಧ ಹೇರಿದ್ದ ಹಿನ್ನೆಲೆ ಶಿವರಾತ್ರಿ ಹಬ್ಬದ ಜಾಗ ರಣೆ ಆಚರಣೆ ಜರುಗಲಿಲ್ಲ, ಪ್ರತಿವರ್ಷ ಶಿವ ರಾತ್ರಿಯಂದು ವಿವಿಧ ಕಲಾತಂಡಗಳು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಪ್ರಾಧಿಕಾರದ ವತಿಯಿಂದ ಹಲವಾರು ಕಾರ್ಯ ಕ್ರಮಗಳನ್ನು ಏರ್ಪಡಿಸಿ ಭಕ್ತಾದಿಗಳ ಜಾಗ ರಣೆಗೆ ಅವಕಾಶ ಕಲ್ಪಿಸಿಕೊಡಲಾಗುತಿತ್ತು. ಆದರೆ, ಈ ಬಾರಿ ಜಿಲ್ಲಾಡಳಿತ ನಿಷೇಧ ವಿಧಿಸಿ ದ್ದರ ಹಿನ್ನೆಲೆ ಈ ಆಚರಣೆಗೆ ಬ್ರೇಕ್‌ ಬಿದ್ದಿತ್ತು.

ನಾಳೆ ಮಹಾ ರಥೋತ್ಸವ :

ಶ್ರೀ ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 9.45ರಿಂದ 11:30ರ ಶುಭವೇಳೆಯಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾ ರಥೋತ್ಸವವು ಜರುಗಲಿದೆ. ಅಲ್ಲದೆ ಅದೇ ದಿನ ತಡರಾತ್ರಿ ಅಭಿಷೇಕ ಪೂಜಾಕೈಂಕರ್ಯಗಳು ಪೂರ್ಣಗೊಂಡ ಬಳಿಕ ಕೊಂಡೊತ್ಸವ ಜರುಗಲಿದ್ದು, ಈ ಮೂಲಕಮಲೆ ಮಾದಪ್ಪನ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ತೆರೆಬೀಳಲಿದೆ

ಟಾಪ್ ನ್ಯೂಸ್

gjjsddgdf

ಮರಾಠಿಗರು ಪಾಕ್‌ನವರಲ್ಲ,ಲಷ್ಕರಿಗಳಲ್ಲ : ಸಂಜಯ ರಾವುತ್‌

ಸದವದ್

ರಾಜ್ಯದಲ್ಲಿ ಕೋವಿಡ್ ಮಹಾಸ್ಪೋಟ : ಇಂದು 14738 ಪ್ರಕರಣಗಳು

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಖಾಸಗೀಕರಣದ ಹೆಸರಿನಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ಲಕ್ಷ್ಯ : ಐವನ್‌ ಡಿ’ಸೋಜಾ ಆರೋಪ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ: ಅನುಮೋದನೆಯೊಂದೇ ಬಾಕಿ

ಉಡುಪಿ-ಮಣಿಪಾಲವನ್ನು ದೇಶಕ್ಕೆ ಮಾದರಿ ನಗರವನ್ನಾಗಿಸಲು ಯತ್ನ : ಅನುಮೋದನೆಯೊಂದೇ ಬಾಕಿ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹುನ್ನಾರ ನಡೆಸಿದೆ :ಬೈರೇಗೌಡ

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಖಾಲಿ ಸಿಲಿಂಡರಿಗೆ ಅಡುಗೆ ಅನಿಲ ತುಂಬಿಸಿ ಮಾರಾಟ : ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆ

ಹರಿದ್ವಾರ ಕುಂಭಮೇಳ; ಕಳೆದ ಐದು ದಿನಗಳಲ್ಲಿ 1,701 ಕೋವಿಡ್ ಪ್ರಕರಣ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambedkar Day at Yelandur

ಯಳಂದೂರು ವಿವಿದೆಡೆ ಅಂಬೇಡ್ಕರ್‌ ದಿನ

dc’

ಸಂವಿಧಾನ ಶಿಲ್ಪಿಯ ಹಾದಿಯಲ್ಲಿ ಸಾಗೋಣ

PDO not attended Ambedkar jayanthi

ಅಂಬೇಡ್ಕರ್‌ ಜಯಂತಿಗೆ ಪಿಡಿಒ ಗೈರು: ಗ್ರಾಪಂ ಸದಸ್ಯರ ಪ್ರತಿಭಟನೆ

17ಕ್ಕೆ 35 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

17ಕ್ಕೆ 35 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

ಲಸಿಕೆ ಪಡೆದು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ

MUST WATCH

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

udayavani youtube

ವಾಹನ ಅಡ್ಡಗಟ್ಟಿ ಸುಲಿಗೆ ಪ್ರಕರಣ: ಮಂಗಳೂರಿನಲ್ಲಿ ಮತ್ತೆ ಆರು ಖದೀಮರ ಬಂಧನ

ಹೊಸ ಸೇರ್ಪಡೆ

15-3

ಡಾ|ಅಂಬೇಡ್ಕರ್‌ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ

ಬಜನಗಹ

ರಾಹುಲ್‌ ಕಾಲಿಟ್ಟ ಕಡೆ ಕಾಂಗ್ರೆಸ್‌ ಸೋಲು ಖಚಿತ

15-2

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಪಷ್ಟ ರೂಪ ನೀಡಿದ ಚೇತನ: ಜೋಶಿ

fdgdd

ಬಾಲಚಂದ್ರ ಪ್ರಚಾರದಿಂದ ಬಿಜೆಪಿಗೆ ಆನೆಬಲ : ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ

15-2

ಡಾ|ಅಂಬೇಡ್ಕರ್‌ ಜೀವನ ಮೌಲ್ಯಗಳು ಸ್ಫೂರ್ತಿದಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.