ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

ಮಂಡಳಿಯಿಂದ ಈಗಾಗಲೆ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ

Team Udayavani, May 27, 2022, 6:12 PM IST

ಎಸ್‌ಒಪಿ ರಸಗೊಬ್ಬರ ಚೀಲದಲ್ಲಿ ರಂಗೋಲಿಪುಡಿ!

ಹುಣಸೂರು: ತಂಬಾಕು ಮಂಡಳಿಯಿಂದ ಹೊಗೆಸೊಪ್ಪು ಬೆಳೆಗಾರರಿಗೆ ವಿತರಿಸಿರುವ ಎಸ್‌ಒಪಿ (ಪೊಟಾಷ್‌)ಗೊಬ್ಬರವು (ರಂಗೋಲಿಪುಡಿ) ನಕಲಿಯಾಗಿದ್ದು, ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಸಕ್ತ ಸಾಲಿನ ಆರಂಭದಲ್ಲಿ ಉತ್ತಮ ಮಳೆಯಾಗಿದ್ದು, ತಂಬಾಕು ಬೆಳೆಗಾರರು ತಮ್ಮ ಜಮೀನಿಗೆ ತಂಬಾಕು ಸಸಿ ನಾಟಿ ಮಾಡಿದ್ದಾರೆ. ತಂಬಾಕು ಮಂಡಳಿಯಿಂದ ಸಕಾಲದಲ್ಲೇ ರಸಗೊಬ್ಬರ ವಿತರಣೆಗೆ ಕ್ರಮಕೈಗೊಂಡು ಪ್ರತಿ ಹೊಗೆಸೊಪ್ಪು ಬೆಳೆಗಾರನಿಗೆ ಎರಡು ಚೀಲ ಡಿಎಪಿ, ಎ.ಎಸ್‌ 6 ಚೀಲ ಹಾಗೂ ಎರಡು ಚೀಲ ಎಸ್‌ಒಪಿ ರಸಗೊಬ್ಬರ ವಿತರಿಸಿದೆ.

ಆದರೆ ಮಂಡಳಿಯಿಂದ ವಿತರಿಸಿರುವ ಎರಡು ಚೀಲದಲ್ಲಿ ಒಂದು ಚೀಲ ಗುಣಮಟ್ಟದಿಂದ ಕೂಡಿದ್ದರೆ ಮತ್ತೂಂದು ಚೀಲ ರಂಗೋಲಿ ಪುಡಿಯಂತಿದೆ. ತಂಬಾಕು ಸಸಿ ನಾಟಿ ಮಾಡಿ ಗೊಬ್ಬರ ಹಾಕಲು ಸಜ್ಜಾಗುತ್ತಿದ್ದಂತೆ ಚೀಲ ಸುರಿದು ಪರಿಶೀಲಿಸಿದಾಗಲಷ್ಟೇ ರಂಗೋಲಿ ಪುಡಿ ಇರುವುದು ಪತ್ತೆಯಾಗಿದೆ.

2019ರಿಂದೀಚೆಗೆ ಬರಗಾಲ, ಅತಿವೃಷ್ಟಿಯ ಸುಳಿಗೆ ಸಿಲುಕಿರುವ ತಂಬಾಕು ಬೆಳೆಗಾರರು, ಈ ಬಾರಿಯ ಮಳೆಗೆ ಸಸಿ ಉಳಿಸಿಕೊಳ್ಳಲು ಹೆಣಗಾಡಿ, ಅಳಿದುಳಿದ ಸಸಿಗಳೊಂದಿಗೆ ಸಾಲಸೋಲ ಮಾಡಿ ಮತ್ತೆ ನಾಟಿ ಮಾಡಿದ್ದು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾನೆ. ಆದರೆ ಕೆಲ ಅನಧಿಕೃತ ಏಜೆನ್ಸಿಯವರು ಮಂಡಳಿ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ಗೊಬ್ಬರ ವಿತರಿಸಿ ರೈತರ ಬದುಕನ್ನೇ ಮೂರಾಬಟ್ಟೆ ಮಾಡಲು ಮುಂದಾಗಿದ್ದಾರೆ.

ತಂಬಾಕು ಮಂಡಳಿ ವಿತರಣೆ ಮಾಡಿರುವ ಗೊಬ್ಬರ ಚೀಲದಲ್ಲಿ ಇಂತಿಷ್ಟು ಪ್ರಮಾಣದ ಸಾರಜನಕ, ರಂಜಕ, ಪೊಟಾಷಿಯಂ ಇರಬೇಕೆಂಬ ಮಾನದಂಡ ನಮೂದಿಸಿ ದ್ದಾರೆ. ಆದರೆ ಚೀಲದೊಳಗೆ ಮಾತ್ರ ರಂಗೋಲಿ ಪುಡಿಯ ನಕಲಿ ಗೊಬ್ಬರವಿದೆ. ಇದ್ಯಾವುದನ್ನೂ ಗಮನಿಸದ ರೈತರು ತಂಬಾಕು ಸಸಿಗಳಿಗೆ ಗೊಬ್ಬರ ಹಾಕಿದ್ದು, ರಂಗೋಲಿ ಎಂಬುದನ್ನು ಕಂಡಿದ್ದು, ಲಕ್ಷಾಂತರ ರೂ. ಸಾಲ ಮಾಡಿ ಹಾಕಿದ್ದ ಹಣ ಸಿಗುವುದೋ ಇಲ್ಲವೋ ಎಂಬ ಭೀತಿಯಲ್ಲಿ ರೈತರಿದ್ದಾರೆ.

ವರದಿಗಾಗಿ ಕಾಯುತ್ತಿದ್ದೇವೆ
ಹರಾಜು ಮಾರುಕಟ್ಟೆ ಅಧೀಕ್ಷಕ ಡಾ.ಬ್ರಿಜ್‌ ಭೂಷಣ್‌ ಮಾತನಾಡಿ, ಮಂಡಳಿಯಿಂದ ವಿತರಿಸಿರುವ ಗೊಬ್ಬರವನ್ನು ತಂಬಾಕು ಹರಾಜು ಮಾರುಕಟ್ಟೆ ರೈತಸಮಿತಿಯವರೇ ಶಿಫಾರಸು ಮಾಡಿರುವ ಟ್ರಾನ್ಸ್‌ವಲ್ಡ್‌ ಹಾಗೂ ಐಪಿಎಲ್‌ ಕಂಪನಿಯ ಪೊಟಾಷ್‌ಅನ್ನು ವಿತರಣೆ ಮಾಡಲಾಗಿದೆ. ಟ್ರಾನ್ಸ್‌ ವಲ್ಡ್‌ ಕಂಪನಿ ಸರಬರಾಜು ಮಾಡಿರುವ ಪೊಟಾಷ್‌ ಕಲ್ಲರ್‌ ಸ್ಪಲ್ಪ ವ್ಯತ್ಯಾಸ ಕಂಡುಬಂದಿದ್ದು, ಆದರೆ ಅದರಲ್ಲಿರುವ ಖನಿಜಾಂಶ ಸಮ ಪ್ರಮಾಣದಲ್ಲಿದೆ. ಕೆಲವರು ರಂಗೋಲಿಪುಡಿ ಬಗ್ಗೆ ದೂರು ನೀಡಿದ್ದಾರೆ. ಮಂಡಳಿಯಿಂದ ಈಗಾಗಲೆ ಗೊಬ್ಬರವನ್ನು ಪ್ರಯೋಗಾ ಲಯಕ್ಕೆ ಕಳುಹಿಸಲಾಗಿದೆ. ನಕಲಿಗೊಬ್ಬರವಾಗಿದ್ದರೆ ಈಗಾಗಲೇ ಪ್ರಯೋಗಾಲಯದಿಂದ ತಕ್ಷಣವೇ ಮಾಹಿತಿ ನೀಡುತ್ತಿದ್ದರು, ಆದರೂ ವರದಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.

ನನಗೆ ಎರಡು ಚೀಲ ಡಿಎಪಿ, ಆರು ಚೀಲ ಎಎಸ್‌, ಎರಡು ಚೀಲ ಪೊಟಾಷ್‌ ವಿತರಿಸಿದ್ದಾರೆ. ಒಂದರಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರವಿದೆ. ಮತ್ತೂಂದು ಚೀಲ ಬಿಚ್ಚಿ ನೋಡಿದ ವೇಳೆ ರಂಗೋಲಿಪುಡಿ ಇದ್ದು, ಯಮಗುಂಬ ಗ್ರಾಮದ 16 ರೈತರಿಗೆ ವಿತರಣೆ ಮಾಡಿರುವ ಗೊಬ್ಬರದ ಸ್ಥಿತಿಯೂ ಇದೇ ಆಗಿದೆ.
ಮಹದೇವಪ್ಪ, ಯಮಗುಂಬ ರೈತ

ಈಗಾಗಲೆ ಕಟ್ಟೆಮಳಲವಾಡಿಯ ಮೂರು ಹರಾಜು ಮಾರುಕಟ್ಟೆ ಹಾಗೂ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಎಸ್‌ಒಪಿ ಮಾದರಿಯನ್ನು ಸಂಗ್ರಹಿಸಿದ್ದು, ಮೇಲ್ನೋಟಕ್ಕೆ ಗುಣಮಟ್ಟ ಇದೆ. ಆದರೂ ಮಂಡ್ಯದ ಕೃಷಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ.
ವೆಂಕಟೇಶ್‌, ಹಿರಿಯ ಸಹಾಯಕ ಕೃಷಿ ನಿರ್ದೇಶಕ,
ಹುಣಸೂರು.

*ಸಂಪತ್‌ ಕುಮಾರ್‌ ಹುಣಸೂರು

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

ಚಾಮರಾಜನಗರ ಕ್ಷೇತ್ರದ ಜನರ ಧ್ವನಿಯಾಗುವೆ : ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.