Udayavni Special

ಗುರುಭವನಕ್ಕೆ ಗುರುಬಲ ಕೂಡಿಲ್ಲ

ಸಮಸ್ಯೆ ಪರಿಹರಿಸಲು ವಿಫ‌ಲ, ಶಿಕ್ಷಕರ ಕಾರ್ಯಕ್ರಮಕ್ಕೆ ಶಾಲೆ ಆಶ್ರಯಿಸುವ ಪರಿಸ್ಥಿತಿ

Team Udayavani, Sep 4, 2020, 1:12 PM IST

ಗುರುಭವನಕ್ಕೆ ಗುರುಬಲ ಕೂಡಿಲ್ಲ

ಯಳಂದೂರು ಪ್ರವಾಸಿ ಮಂದಿರದ ಬಳಿ ಗುರುಭವನ ನಿರ್ಮಾಣಕ್ಕೆ ನಿಗದಿ ಮಾಡಿದ್ದ ಸ್ಥಳ ಪಾಳು ಬಿದ್ದಿದೆ.

ಯಳಂದೂರು: ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಅತ್ಯಂತ ಚಿಕ್ಕ ತಾಲೂಕಾಗಿದೆ. ಇಲ್ಲಿ ಪ್ರತ್ಯೇಕ ಶೈಕ್ಷಣಿಕ ಬ್ಲಾಕ್‌ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬ್ಲಾಕ್‌ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆದರೆ, ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ನೂರಾರು ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಗುರು ಭವನ ವೇ ಯಳಂದೂರು ತಾಲೂಕಿನಲ್ಲಿ ಇಲ್ಲ.

ಶಿಕ್ಷಕರಿಗೆ ನಿರೀಕ್ಷೆ: ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಬಂದಾಗ ಇಲ್ಲಿನ ಶಿಕ್ಷಕರಿಗೆ ಗುರುಭವನ ನಿರ್ಮಾಣ ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ. ಮಾಜಿ ಶಿಕ್ಷಣ ಸಚಿವರಾಗಿದ್ದ ಹಾಲಿ ಶಾಸಕ ಎನ್‌. ಮಹೇಶ್‌ ಹಾಗೂ ಹಾಲಿ ಶಿಕ್ಷಣ ಸಚಿವರಾ ಗಿರುವ ಸುರೇಶ್‌ಕುಮಾರ್‌ ಜಿಲ್ಲಾ ಉಸ್ತುವಾರಿ ಯನ್ನು ವಹಿಸಿದ್ದು, ಈ ಬಗ್ಗೆ ಕಾಳಜಿ ತೋರುವರೆ ಎಂಬ ಸಣ್ಣ ನಿರೀಕ್ಷೆ ಶಿಕ್ಷಕರ ಮನದಲ್ಲಿ ಈ ವರ್ಷವೂ ಮೂಡಿದೆ.

ನಿರ್ಮಾಣಕ್ಕೆ ತಾಂತ್ರಿಕ ತೊಡಕು: ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 257 ಹಾಗೂ ಪ್ರೌಢಶಾಲೆಯಲ್ಲಿ 90 ಶಿಕ್ಷಕರು ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2003ರಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಳಿ ಇರುವ ಸ್ಥಳದಲ್ಲಿ ಗುರುಭವನವನ್ನು ನಿರ್ಮಾಣ ಮಾಡಲು ಅಂದಿನ ಕೇಂದ್ರ ಸಚಿವರೂ ಆಗಿದ್ದ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಈಗ ಹಾಲಿ ಅವರೇ ಸಂಸದರೂ ಆಗಿದ್ದಾರೆ. ಆದರೆ, ಈ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದು. ಇಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಹಲವು ತಾಂತ್ರಿಕ ತೊಡಕುಗಳು ಆದವು. ಈ ಹಿನ್ನೆಲೆಯಲ್ಲಿ ಇದು ನೆನೆಗುದಿಗೆ ಬಿತ್ತು. ನಂತರ ಅನೇಕ ಶಾಸಕರು ಹಾಗೂ ಸಂಸದರು ಆಗಿ ಹೋಗಿದ್ದರೂ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫ‌ಲರಾಗಿದ್ದಾರೆ.

ಶಾಲೆಗಳಲ್ಲೇ ಆಚರಣೆ :  ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಶಿಕ್ಷಕ ಭವನಗಳಿದ್ದರೂ ಯಳಂದೂರಿಗೆ ಈ ಯೋಗ ಇನ್ನೂ ಕೂಡಿ ಬಂದಿಲ್ಲ. ಶಿಕ್ಷಕರ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೂ ಶಾಲೆಯನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಕೆಲವೊಂದು ಸೌಲಭ್ಯಗಳುಳ್ಳ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಇದಲ್ಲದೆ ಬೇರೆ ಸಭೆ, ಸಮಾರಂಭಗಳನ್ನು ನಡೆಸಲು ಖಾಸಗಿ ಅಥವಾ ಸರ್ಕಾರಿ ಶಾಲೆಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ.

ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲೂ 350ಕ್ಕೂ ಹೆಚ್ಚು ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕಾರ್ಯಕ್ರಮಗಳ ಆಯೋಜನೆಗೆ ಭವನದ ಅವಶ್ಯವಿದೆ. ಈ ಹಿಂದೆ ಇದಕ್ಕೆ ಹಲವು ಪ್ರಯತ್ನಗಳು ನಡೆದಿದೆ. ಆದರೆ, ಸೂಕ್ತ ಸ್ಥಳದ ಅಭಾವವಿದ್ದು ಇದನ್ನು ನೀಗಿಸಲು ಕ್ರಮ ವಹಿಸಬೇಕಿದೆ. ವಿ. ತಿರುಮಲಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಯಳಂದೂರು

ಜಿಲ್ಲೆಯಲ್ಲಿ ಪುಟ್ಟ ಶೈಕ್ಷಣಿಕ ಬ್ಲಾಕ್‌ನ್ನು ಹೊಂದಿದೆ. ಆದರೆ, ಇಲ್ಲಿಗೆ ಸುಸಜ್ಜಿತ ಗುರುಭವನ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಕೂಡ ಯಾವೊಬ್ಬ ಜನಪ್ರತಿನಿಧಿ ಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ನಮಗೆ ಜಾಗವನ್ನು ದೊರಕಿಸಿಕೊಟ್ಟು ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕು.  ರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು

 

ಫೈರೋಜ್‌ ಖಾನ್‌

ಟಾಪ್ ನ್ಯೂಸ್

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

fcgrdtr

ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

1ರಿಂದ 5ನೇ ತರಗತಿ ಸದ್ಯಕ್ಕಿಲ್ಲ: ಸಚಿವ ನಾಗೇಶ್‌

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿರುದ್ಧ ಎಫ್ಐಆರ್‌?

fgtytryr

ಮುಂಡರಗಿ:  ಹರ್ಮುಖ್‌ ಪರ್ವತ ಏರಿದ ಕಕ್ಕೂರು ತಾಂಡಾ ಯುವಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಗಮದಿಂದ ಗ್ರಾಮದಲ್ಲೇ ಕೌಶಲ್ಯ ತರಬೇತಿ ನೀಡಲು ಚಿಂತನೆ

ನಿಗಮದಿಂದ ಗ್ರಾಮದಲ್ಲೇ ಕೌಶಲ್ಯ ತರಬೇತಿ ನೀಡಲು ಚಿಂತನೆ

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸಾವು

ರಸ್ತೆ ಅಪಘಾತ ಇಬ್ಬರು ಬೈಕ್ ಸವಾರರು ಸಾವು

ಭೂಗರ್ಭವನ್ನೇ ಬಗೆಯುತ್ತಿರುವ ಕರಿಕಲ್ಲು ಗಣಿಗಾರಿಕೆ

ಭೂಗರ್ಭವನ್ನೇ ಬಗೆಯುತ್ತಿರುವ ಕರಿಕಲ್ಲು ಗಣಿಗಾರಿಕೆ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು ಶಿಕ್ಷೆ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: 20 ವರ್ಷ ಜೈಲು ಶಿಕ್ಷೆ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಆರ್‌ಸಿಬಿ ನಾಯಕತ್ವಕ್ಕೂ ವಿರಾಟ್‌ ವಿದಾಯ

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶ ಈಗ ಗಲಭೆಮುಕ್ತ: ಸಿಎಂ ಯೋಗಿ ಆದಿತ್ಯನಾಥ್‌

Children’s education

ಆದಿವಾಸಿ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :ಡಿವೈಎಸ್ ಪಿ ರವಿಪ್ರಸಾದ್ ಮನವಿ

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

ಹೈದರಾಬಾದ್‌ ಲಯಕ್ಕೆ ಮರಳಲಿದೆ: ಲಕ್ಷ್ಮಣ್‌

ಹೈದರಾಬಾದ್‌ ಲಯಕ್ಕೆ ಮರಳಲಿದೆ: ಲಕ್ಷ್ಮಣ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.