ಮತ್ತೆ ಯರಗಂಬಳ್ಳಿ ಗ್ರಾಪಂಗೆ ಪುರಸ್ಕಾರ


Team Udayavani, Oct 2, 2020, 12:41 PM IST

cn-tdy-1

ಯಳಂದೂರು ತಾಲೂಕಿನಯರಗಂಬಳ್ಳಿ ಗ್ರಾಮ ಪಂಚಾಯ್ತಿ.

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಪಂಗೆ 2019-20 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭ್ಯವಾಗಿದ್ದು ಸತತ 2 ನೇ ಬಾರಿ ಈ ಪುರಸ್ಕಾರ ಲಭಿಸಿದೆ ಎಂದು ಪಿಡಿಒ ವೆಂಕಟಾಚಲಮೂರ್ತಿ ಮಾಹಿತಿ ನೀಡಿದರು.

ಈ ಪಂಚಾಯ್ತಿ ಯರಗಂಬಳ್ಳಿ, ಗಂಗವಾಡಿ, ದಾಸನಹುಂಡಿ, ದೇವರಹಳ್ಳಿ ಗ್ರಾಮಗಳನ್ನು ಒಳಗೊಂಡಿದೆ. ಈ ಪ್ರಶಸ್ತಿ ರಾಜ್ಯಮಟ್ಟದ ಪ್ರಶಸ್ತಿಯಾಗಿದೆ. 2011ರ ಜನಗಣತಿ ಪ್ರಕಾರ ಪಂಚಾಯ್ತಿಯಲ್ಲಿ ಒಟ್ಟು 5345 ಸಾವಿರ ಜನಸಂಖ್ಯೆ ಇದೆ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ 2019-20 ನೇ ಸಾಲಿನಲ್ಲಿ 25,198 ಮಾನವ ದಿನ ಸೃಜಿಸಲಾಗಿದ್ದು, ಗುರಿಗಿಂತ ಹೆಚ್ಚಾಗಿ ಶೇ.128 ಪ್ರಗತಿ ಸಾಧಿಸಲಾಗಿದೆ.

ಹಸಿರೀಕರಣಕ್ಕೆ ಒತ್ತು: ವಿಶೇಷವಾಗಿ ಈ ಪಂಚಾಯ್ತಿ ಯಲ್ಲಿ ಕಳೆದ ವರ್ಷ ಹಾಕಲಾಗಿದ್ದ2100 ಗಿಡಗಳನ್ನು ಪೋಷಿಸಲಾಗಿದ್ದು. ಶೇ.98 ಗಿಡಗಳನ್ನು ಜೀವಂತವಾಗಿ ಕಾಯ್ದುಕೊಳ್ಳಲಾಗಿದೆ. ಜತೆಗೆ 138 ವೈಯುಕ್ತಿಕ ಹಾಗೂ 1 ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಈ ಸಾಲಿನಲ್ಲೇ ಶೇ.100 ಕಂದಾಯ ವಸೂಲಿ ಮಾಡಲಾಗಿದ್ದು ಒಟ್ಟು 44318 ರೂ.ಗಳ ಸಂಗ್ರಹಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದಿವ್ಯಾಂಗರಿಗೆ ಸಹಾಯಧನ, ಕ್ರೀಡಾ ಸಾಮಗ್ರಿಗಳ ವಿತರಣೆಯನ್ನೂ ಮಾಡಲಾಗಿದೆ ಎಂದು ಹೇಳಿದರು.

ಭಾರತ್‌ ನಿರ್ಮಾಣ್‌ ರಾಜೀವ್‌ ಗಾಂಧಿ ಸೇವಾ ಕೇಂದ್ರದ ಕಾಮಗಾರಿ ಪೂರ್ಣಗೊಳಿಸಿ ಗ್ರಾಪಂ ಕಚೇರಿಯನ್ನು ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಹಾಗೆಯೇಕುಡಿಯುವ ನೀರು, ಸುಗಮ ಆಡಳಿತದ ಸಾಧನೆ, ಗ್ರಾಮಸಭೆಗಳ ಆಯೋಜನೆ, ಸ್ವತ್ಛ ಭಾರತ್‌, ತೆರಿಗೆ ವಸೂಲಾತಿ, ಆರ್ಥಿಕ ಪ್ರಗತಿ, ವಿಶೇಷ ವಾರ್ಡ್‌, ಗ್ರಾಮ ಸಭೆ, ಜಮಾಬಂಧಿ, ಸಾಮಾಜಿಕ ಲೆಕ್ಕ ತಪಾಸಣೆ, ವಾರ್ಷಿಕ ವರದಿಯಲ್ಲಿ ಗ್ರಾಪಂ ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು. ಪಂಚಾಯ್ತಿಯ ಈ ಸಾಧನೆಗೆ ಇಒ ಬಿ.ಎಸ್‌.ರಾಜು, ಆಡಳಿತಾಧಿಕಾರಿ ಎಸ್‌.ಎಚ್‌. ಶ್ರೀಧರ್‌ ಸೇರಿದಂತೆ ಸಾರ್ವಜನಿಕರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

6 ವಿಭಾಗಗಳಲ್ಲಿ 100 ಪ್ರಶ್ನೆ ಕೇಳಲಾಗಿತ್ತು :  ಈ ಬಾರಿ ಈ ಪುರಸ್ಕಾರಕ್ಕೆ ಜೀವನ ಗುಣಮಟ್ಟ, ಹಣಕಾಸಿನ ವಿಷಯ, ಮೂಲಸೌಕರ್ಯ, ಉತ್ತಮ ಆಡಳಿತ, ಗ್ರಾಪಂ ಸೇವೆ,ವಿನೂತನಪ್ರಯೋಗಸೇರಿದಂತೆ 6 ವಿಭಾಗಗಳಲ್ಲಿ 100 ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಬಹುತೇಕ ಮಾನದಂಡಗಳಲ್ಲಿ ಪಂಚಾಯ್ತಿ ಪ್ರಗತಿ ಸಾಧಿಸಿದೆ ಎಂದು ಗ್ರಾಪಂ ಪಿಡಿಒ ವೆಂಕಟಾಚಲಮೂರ್ತಿ ತಿಳಿಸಿದರು. ಕೇಂದ್ರ, ರಾಜ್ಯ ತಂಡಗಳು ಪರಿಶೀಲನೆ ನಡೆಸಿವೆ. ಕಳೆದ ಬಾರಿಯ ಗ್ರಾಮ ಪುರಸ್ಕಾರದ 5 ಲಕ್ಷ ರೂ. ಹಣದಲ್ಲಿ ಪಂಚಾಯ್ತಿಗೆ ಆದಾಯ  ಬರಲು 2 ಅಂಗಡಿ ಮಳಿಗೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಪ್ರಶಸ್ತಿಯಿಂದ ಕೆಲಸ ಮಾಡಲು ಮತ್ತಷ್ಟು ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಾಗುವುದು ಎಂದು ಹೇಳಿದರು.

ಟಾಪ್ ನ್ಯೂಸ್

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23shreeganda

ಶ್ರೀಗಂಧ ಚೋರನ ಬಂಧನ, 13 ಕೆ.ಜಿ ಹಸಿ ಗಂಧದ ತುಂಡುಗಳ ವಶ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಲಾಸರ್‍ದೊಡ್ಡಿಯಲ್ಲಿ ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ: ತಪ್ಪಿದ ಭಾರೀ ಅನಾಹುತ

ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆ

ಅರವಳಿಕೆ ಚುಚ್ಚುಮದ್ದು ನೀಡಿ ಹುಲಿ ಸೆರೆ

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

ಸಾರ್ವಜನಿಕರೇ, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿ

chamarajanagara news

ಹಾವು ಕಡಿದು ಯುವಕ ಸಾವು

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

6dharmasthala

ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.