ಬಿಜೆಪಿ ಬೆಂಬಲಿತರ ಪರ ಸುರೇಶ್ ಪ್ರಚಾರ
Team Udayavani, Dec 16, 2020, 3:46 PM IST
ಗುಂಡ್ಲುಪೇಟೆ: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಮತ್ತು ಶಾಸಕಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
ತಾಲೂಕಿನ ಹಸಗೂಲಿ ಗ್ರಾಮದ ಮನೆ ಮನೆಗಳಿಗೆ ತೆರಳಿದ ಸಚಿವರು, ಪಂಚಾಯತ್ ರಾಜ್ ಜಾರಿಗೆ ಬರಲು ತಾಲೂಕಿನವರೇ ಆದ ಮಾಜಿ ಸಚಿವ ಅಬ್ದುಲ್ ನಜೀರ್‌ಸಾಬ್ ಅವರು ಕಾರಣರಾಗಿದ್ದರು. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಶಕ್ತಿ ತುಂಬುತ್ತಿದ್ದಾರೆ. ಶಾಸಕ ಹಾಗೂ ಸಂಸದರಿ ಗಿಂತಲೂ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಅವಕಾಶ ವಿದೆ. ಆದ್ದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಮೂಲಕ ಗ್ರಾಮಸ್ವರಾಜ್‌ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಮತ ದಾರರಲ್ಲಿ ಮನವಿ ಮಾಡಿದರು.
ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಕ್ಷೇತ್ರದ 34 ಗ್ರಾಮ ಪಂಚಾಯ್ತಿ ಗಳಿಗೆ ಉತ್ತಮ ಅಭ್ಯರ್ಥಿಗಳನ್ನು ಬಿಜೆಪಿ ಬೆಂಬಲಿತರನ್ನಾಗಿ ಕಣಕ್ಕಿಸಿದ್ದು, ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಮತ್ತುಉತ್ತಮ ಸೇವೆಗಾಗಿ ನಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಮನವಿ ಮಾಡಿದರು. ಈ ವೇಳೆ ಮುಖಂಡರಾದ ಕೊಡಸೋಗೆ ಶಿವಬಸಪ್ಪ, ಜಗ ದೀಶ್, ಪ್ರಣಯ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾಲ ವಾಪಸ್ ಕೇಳಿದ ವೃದ್ಧೆಯನ್ನೇ ಕೊಂದು ಬಾವಿಗೆ ಎಸೆದ್ರು : ಇಬ್ಬರು ಆರೋಪಿಗಳು ಸೆರೆ
ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿ
ಭಯಪಡುವ ಅವಶ್ಯಕತೆ ಇಲ್ಲ: ಚಾಮರಾಜನಗರದಲ್ಲಿ ಮೊದಲ ಲಸಿಕೆ ಪಡೆದ ಮಂಜುನಾಥ್ ಅವರ ಅಭಿಪ್ರಾಯ
ಚಾಮರಾಜನಗರ: 8 ಕೋವಿಡ್ ಪ್ರಕರಣ ದೃಢ
ಸಿಎಂಗೆ ಧೈರ್ಯ ಇದ್ದರೆ ಚಾಮರಾಜನಗರದಲ್ಲಿ ಪ್ರಗತಿ ಪರಿಶೀಲನಾಸಭೆ ನಡೆಸಲಿ :ಧ್ರುವನಾರಾಯಣ ಸವಾಲು