Udayavni Special

ಕೋವಿಡ್‌ ನಿಯಂತ್ರಣಕ್ಕಾಗಿ ಕಣ್ಗಾವಲು


Team Udayavani, Jul 7, 2020, 5:47 AM IST

Surveillance,

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಕಣ್ಗಾವಲು ಹಾಗೂ ಸಾರ್ವಜನಿಕ ಸುರಕ್ಷತಾ ಕ್ರಮಗಳ ಕಾರ್ಯ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಡಾ. ಎಂ. ಆರ್‌. ರವಿ ಆದೇಶಿಸಿದ್ದಾರೆ. ಕೋವಿಡ್‌-19 ಅನ್ನು  ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ ಸಂಪರ್ಕ ಪತ್ತೆ ಹಚ್ಚುವಿಕೆ, ಮಾದರಿ ಪರೀಕ್ಷೆ ಮತ್ತು ಪ್ರಯೋಗಾಲಯ, ಕಂಟೈನ್‌ಮೆಂಟ್‌ಜೋನ್‌ ನಿರ್ವಹಣೆ, ಗ್ರಾಪಂ ಟಾಸ್ಕ್  ಫೋರ್ಸ್‌, ನಗರಸಭೆ,

ಪುರಸಭೆ ಪಟ್ಟಣ ಪಂಚಾಯಿತಿ  ವಾರ್ಡ್‌ ವಿಪತ್ತು ನಿರ್ವಹಣಾ ಸಮಿತಿ, ಕ್ವಾರಂಟೈನ್‌ ನಿಗಾವಣೆ, ಪಥ್ಯಾಹಾರ ಪೂರೈಕೆ, ಗಂಟಲುದ್ರವ ಸಂಗ್ರಹಣಾ ಕೇಂದ್ರಗಳ ನಿರ್ವಹಣೆ, ಕೋವಿಡ್‌ ಸೋಂಕಿತರ ದಾಖಲಿಸುವಿಕೆ ಹಾಗೂ ಅಂಬುಲೆನ್ಸ್‌ ನಿರ್ವಹಣೆ, ಕೋವಿಡ್‌ ಆರೈಕೆ  ಕೇಂದ್ರಗಳು, ಮೃತದೇಹಗಳ ನಿರ್ವಹಣೆ ಹಾಗೂ ಮಾತೃ ಮತ್ತು ಮಗುವಿನ ಸೇವಾ ಕಾರ್ಯಕ್ರಮ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಗಳಲ್ಲಿಯೂ ಕರ್ತವ್ಯಗಳ ನಿರ್ವಹಣೆಗಾಗಿ ಒಬ್ಬರು ನೋಡೆಲ್‌ ಅಧಿಕಾರಿ ಇದ್ದು, ಇವರಿಗೆ  ಸಹಾಯಕ ಅಧಿಕಾರಿಗಳು ನೆರವಾಗಲಿದ್ದಾರೆ.

ನೋಡೆಲ್‌ ಅಧಿಕಾರಿ: ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯತಂಡಕ್ಕೆ ಜಿಪಂ ಸಿಇಒ ನಾರಾಯಣರಾವ್‌ (ಮೊ: 9480858000) ನೋಡೆಲ್‌ ಅಧಿಕಾರಿಯಾಗಿದ್ದು, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಕಾಂತರಾಜು, ಎಲ್ಲಾ ತಾಲೂಕು  ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಮತ್ತು ಚಾಮರಾಜನಗರ ಹಾಗೂ ಕೊಳ್ಳೇಗಾಲ ಪೊಲೀಸ್‌ ಉಪ ಅಧೀಕ್ಷಕರು ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಮಾದರಿ ಪರೀಕ್ಷೆ: ಮಾದರಿ ಪರೀಕ್ಷೆ ಮತ್ತು ಪ್ರಯೋಗಾಲಯ ತಂಡಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ನೋಡೆಲ್‌ ಅಧಿಕಾರಿಯಾಗಿದ್ದು, ಎಲ್ಲಾ ತಾಲೂಕು ತಹಶೀಲ್ದಾರರು, ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಎಲ್ಲಾ  ತಾಲೂಕು ವೈದ್ಯಾಧಿಕಾರಿಗಳು ಮತ್ತು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಯೋಗಾಲಯ ಮುಖ್ಯಸ್ಥರಾದ ಡಾ. ಜೆ.ವಿ.ಸತೀಶ್‌ ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕಂಟೈನ್ಮೆಂಟ್‌ ಝೋನ್‌ ನಿರ್ವಹಣೆ: ಕಂಟೈನ್‌ ಮೆಂಟ್‌ ಝೋನ್‌ಗಳ ನಿರ್ವಹಣೆ ತಂಡದಲ್ಲಿ ಉಪವಿಭಾಗಾಧಿಕಾರಿ ನಿಖೀತಾ (ಮೊ. 9742164846) ಅವರು ನೋಡೆಲ್‌  ಅಧಿಕಾರಿಯಾಗಿದ್ದು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ  ವ್ಯಾಪ್ತಿ ಪ್ರದೇಶದ ತಹಶೀಲ್ದಾರರು ಹಾಗೂ ಇನ್ಸಿಡೆಂಟ್‌ ಕಮಾಂಡರ್‌, ಎಲ್ಲಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇನ್ಸಿಡೆಂಟ್‌ ಕಮಾಂಡರ್‌ (ಗ್ರಾಪಂ ವ್ಯಾಪ್ತಿ ಪ್ರದೇಶ) ಸಹಾಯಕ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಸಹಾಯಕ ಅಧಿಕಾರಿಗಳು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡ್‌ ವಿಪತ್ತು ನಿರ್ವಹಣಾ ತಂಡಕ್ಕೆ ಜಿಲ್ಲಾ ನಗರಾಭಿವೃಧಿ ಕೋಶದ ಯೋಜನಾ ನಿದೇಶಕರಾದ ಕೆ.ಸುರೇಶ್‌ (ಮೊ:7406127698) ನೋಡೆಲ್‌  ಅಧಿಕಾರಿಯಾಗಿದ್ದು, ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ಪೌರಾಯುಕ್ತರು ಹಾಗೂ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರು ಸಹಾಯಕ  ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕೋವಿಡ್‌ ಆರೈಕೆ ಕೇಂದ್ರಗಳ ತಂಡಕ್ಕೆ ಜಿಲ್ಲಾ ಅಸ್ಪತ್ರೆಯ ಹೃದ್ರೋಗ ತಜ್ಞ ಡಾ. ರವಿಶಂಕರ್‌ (ಮೊ. 9449204640) ಅವರು ನೋಡೆಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಟಾಪ್ ನ್ಯೂಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

House washed away amid heavy rains in Mundakayam

ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

ಆತ್ಮಹತ್ಯೆ – ಉಪ್ಪಿನಂಗಡಿ

ಕಣ್ಣಿಗೆ ಬಟ್ಟೆಕಟ್ಟಿ ನೇತ್ರಾವತಿ ನದಿಗೆ ಹಾರಿದ ವ್ಯಕ್ತಿ

fire

5 ಅಂತಸ್ತಿನ ಕಟ್ಟದಲ್ಲಿ ಬೆಂಕಿ ಅವಘಡ : 2 ಬಲಿ,70 ಮಂದಿ ರಕ್ಷಣೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

230 ದಿನಗಳಲ್ಲಿ ಭಾರೀ ಇಳಿಕೆ;ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 13,596 ಕೋವಿಡ್ ಪ್ರಕರಣ ಪತ್ತೆ

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಸಿನಿಮಾಗಳು ಗೆದ್ದರೂ ಸಂಭ್ರಮಿಸುವ ಮೂಡ್‌ನಿಂದ ದೂರ ..

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger Capture After 21 Days of Operation – issue at chikkaballapur

21 ದಿನ ಕಾರ್ಯಾಚರಣೆ ಬಳಿಕ ಹುಲಿ ಸೆರೆ

ಸದಾಶಿವ ವರದಿಗೆ ವಿರೋಧ

ಸದಾಶಿವ ವರದಿ ಜಾರಿಗೆ ಬೃಹತ್‌ ಪ್ರತಿಭಟನೆ

gftyryt

ಚಾ.ನಗರ:  ಜಿ.ಪಂ. ಸಿಇಒ ಹರ್ಷಲ್ ನಾರಾಯಣರಾವ್ ವರ್ಗಾವಣೆ| ಕೆ.ಎಂ. ಗಾಯತ್ರಿ ನೂತನ ಸಿಇಒ

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಹುಲಿ ರಕ್ಷಿತಾರಣ್ಯದಲ್ಲಿ ಅಕ್ರಮ ಕಂದಕ ನಿರ್ಮಾಣ!

ಚಾ.ನಗರ ದಸರಾ ಮಹೋತ್ಸವ

ಚಾ.ನಗರ ದಸರಾ ಮಹೋತ್ಸವ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

6

ಯುವಕನ ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು

online classes

ಆನ್‌ಲೈನ್‌-ಆಫ್ಲೈನ್‌ ಗೊಂದಲದಲ್ಲಿ ಮಕ್ಕಳು

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

House washed away amid heavy rains in Mundakayam

ಭಾರೀ ಮಳೆಗೆ ಹೊಳೆಯಲ್ಲಿ ಕೊಚ್ಚಿಹೋಯ್ತು ಮನೆ; ವಿಡಿಯೋ ವೈರಲ್

5

ಪ್ರಾಧ್ಯಾಪಕರ ಬಡ್ತಿ ಅನ್ಯಾಯ ಸರಿಪಡಿಸಲು ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.