ವಿಚಿತ್ರ ಜ್ವರದಿಂದ ಬಳಲುತ್ತಿರುವ ತಾಂಡ ಜನರು

Team Udayavani, Jun 13, 2019, 3:00 AM IST

ಕೊಳ್ಳೇಗಾಲ: ಸುತ್ತ ಕಾಡು ಬೆಟ್ಟ-ಗುಡ್ಡಗಳ ನಡುವೆ ಅರಣ್ಯ ವಲಯದಲ್ಲಿ ನೆಲೆಸಿರುವ ತಾಲೂಕಿನ ಜಾಗೇರಿ ಸಮೀಪದ ಆರ್‌.ಬಿ.ತಾಂಡ ಮತ್ತು ಬಿ.ಜಿ.ದೊಡ್ಡ ಗ್ರಾಮದಲ್ಲಿರುವ ನೂರಾರು ಗ್ರಾಮಸ್ಥರು ವಿಚಿತ್ರ ಜ್ವರಕ್ಕೆ ಸಿಲುಕಿ ನರಳುತ್ತಿದ್ದು, ಆಶ್ರಯದಾತರಿಗಾಗಿ ಅವಣಿಸುತ್ತಿದ್ದಾರೆ.

ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಜಾಗೇರಿ ಸಮೀಪದಲ್ಲಿ ಹಳೇಕೋಟೆ, ಶಾಂತಿನಗರ, ಟಿ.ಜಿ.ದೊಡ್ಡಿ, ಆರ್‌.ಬಿ.ತಾಂಡ, ಫಾಸ್ಕಲ್‌ನಗರ, ಸೆಲ್ವಿಪುರ, ಸಿ.ಆರ್‌.ನಗರ ಎಂದು ಏಳು ಗ್ರಾಮಗಳಿದ್ದು ಸುತ್ತ ಅರಣ್ಯ ಮಧ್ಯೆ ಗ್ರಾಮವಿದ್ದು, ಆರ್‌.ಬಿ.ತಾಂಡ ಮತ್ತು ಬಿ.ಜಿ.ದೊಡ್ಡಿ ಎರಡು ಗ್ರಾಮಗಳಿಂದ ಸುಮಾರು 180ಕ್ಕೂ ಹೆಚ್ಚು ಜನರಿಗೆ ವಿಚಿತ್ರ ಜ್ವರ ಕಾಣಿಸಿಕೊಂಡು ಯಾವುದೇ ಔಷಧಿಗೆ ಜಗ್ಗದೆ ಕಳೆದು ನಾಲ್ಕು ತಿಂಗಳಿನಿಂದ ಬಳಲುತ್ತಿದ್ದಾರೆ.

ಭಯದಲ್ಲೇ ಜೀವನ: ಪಟ್ಟಣದಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಜಾಗೇರಿ ಸುತ್ತಮುತ್ತಲಿನ ಗ್ರಾಮಸ್ಥರು ವ್ಯವಸಾಯವನ್ನೇ ಅವಲಂಭಿಸಿದ್ದಾರೆ. ಮತ್ತೆ ಕೆಲವರು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ. ದಿನನಿತ್ಯ ಕೂಲಿ ನಂಬಿ ಬದುಕುತ್ತಿರುವ ಇವರಿಗೆ ಜ್ವರ ಬಂದು ನಾಲ್ಕು ತಿಂಗಳೇ ಕಳೆದರೂ ಯಾವುದೇ ಔಷಧಿಗೂ ಜಗ್ಗದ ಜ್ವರದಿಂದ ಗ್ರಾಮಸ್ಥರು ಪ್ರತಿನಿತ್ಯ ಭಯದಿಂದ ದಿನ ಕಳೆಯುತ್ತಿದ್ದಾರೆ.

ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಮೊರೆ: ಮನೆಯ ಕುಟುಂಬಸ್ಥರೆಲ್ಲರೂ ಜ್ವರಕ್ಕೆ ಬಿದ್ದಿದ್ದು, ಎಲ್ಲರೂ ಚಿಕಿತ್ಸೆಗೆಂದು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ತೆರಳಬೇಕು. ಮತ್ತೆ ಕೆಲವರು ಖಾಸಗಿ ಆಸ್ಪತ್ರೆಗೆ ತೆರಳಿ ಹೆಚ್ಚು ಹಣ ನೀಡಿ ಚಿಕಿತ್ಸೆ ಪಡೆದುಕೊಳ್ಳಲಾಗುತ್ತಿದೆ. ಕೂಲಿಯನ್ನೇ ನಂಬಿರುವ ನಾವು ಮುಂದೆ ಏನು ಮಾಡಬೇಕು ಎಂಬುದು ದಿಕ್ಕು ತೋಚದಾಗಿದೆ. ಕೂಡಲೇ ಸಂಬಂಧಿಸಿದ ಚುನಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ತುರ್ತಾಗಿ ಗ್ರಾಮಸ್ಥರ ಅನಾರೋಗದ ಬಗ್ಗೆ ವಿಚಾರಣೆ ಮಾಡಿ ಗುಣಪಡಿಸುವರೇ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.

ಗ್ರಾಮದ ಮಹದೇವ, ಮೈಲ್‌ಸ್ವಾಮಿ, ಮಲ್ಲಿಗಾ ಬಾಯಿ, ಮಹದೇವ, ಎಂಜಿ, ಶೆಟ್ಟಿ, ಬಂಗಾರಿ, ಮಂಗಮ್ಮ, ಸಾಲು, ಅಮ್ಮ, ಲಕ್ಷ್ಮಿ, ಭೈರ, ಕಾವ್ಯ, ಸುಬ್ರಮಣ್ಯ, ಪಳನಿಯಮ್ಮ, ಪುಷ್ಪ, ಕೌಶಲ್ಯ, ಜಯಂತಿ, ಭೀಮಬಾಯಿ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿ ದಿನ ಆಸ್ಪತ್ರೆಗೆ ತೆರಳಿ ವೈದ್ಯರು ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಿದರೂ ಸಹ ಯಾವುದಕ್ಕೂ ಜ್ವರ ಬಗ್ಗದೆ ಹಾಸಿಗೆ ಹಿಡಿಯುವಂತೆ ಮಾಡುತ್ತಿದ್ದು, ಕಾಯಿಲೆಯಿಂದ ಅಪಾರ ಭಯಭೀತ ರಾಗಿರುವುದಾಗಿದ್ದಾರೆ.

ಯಾವುದೇ ಚೇತರಿಕೆ ಇಲ್ಲ: ಅದೇ ಗ್ರಾಮದ ಪಳನಿಯಮ್ಮ ಅಪಾರ ಜ್ವರದಿಂದ ಹಾಸಿಗೆ ಹಿಡಿದಿದ್ದು, ಹಾಸಿಗೆ ಯಿಂದ ಮೇಲೆ ಏಳಲು ಶಕ್ತಿಹೀನರಾಗಿರುವುದಾಗಿ ತಿಳಿಸಿರುವ ಅವರು ಈಗಾಗಲೇ ರಕ್ತ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳನ್ನು ಮಾಡಿಸಿದ್ದರೂ ಸಹ ಕಾಲು, ತಲೆ, ಕಾಲಿನ ಪಾದ, ಮಂಡಿ ಸೇರಿದಂತೆ ವಿವಿಧ ಭಾಗಗಳ ನೋವಿನಿಂದ ಬಳಲುತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆ ಯಾವುದೇ ತರಹದ ಚೇತರಿಗೆ ಕಾಣದಂತೆ ಆಗಿದೆ ಎಂದು ಕಣ್ಣೀರಿಟ್ಟರು.

ವೈರಲ್‌ ಫೀವರ್‌ ಎಂದ ವೈದ್ಯರು: ಗ್ರಾಮದಲ್ಲಿ ನೂರಾರು ಜನರಿಗೆ ಬಂದ ಜ್ವರದಿಂದಾಗಿ ಇಡೀ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸಂಬಂಧಿಸಿದ ಸರ್ಕಾರಿ ವೈದ್ಯರಿಗೆ ವಿಷಯ ಮುಟ್ಟಿಸಿದರೂ ಸಹ ವೈದ್ಯರು ಇದು ಚಿಕ್ಯೂನ್‌ ಗುನ್ಯಾ ಅಲ್ಲ, ಇದು ವೈರಲ್‌ ಜ್ವರ ಆಗಿದ್ದು, ಭಯಪಡಬಾರದು ಎಂದು ಹೇಳಿದರೇ ಹೊರತು ಕಾಯಿಲೆ ಮಾತ್ರ ಗುಣ ಆಗಿಲ್ಲ ಎಂದು ಗ್ರಾಮಸ್ಥರು “ಉದಯವಾಣಿ’ಗೆ ತಿಳಿಸಿದ್ದಾರೆ.

ಗ್ರಾಮದಲ್ಲಿ ನೂರಾರು ಜನರಿಗೆ ಜ್ವರ ಕಾಣಿಸಿಕೊಂಡ ಬಗ್ಗೆ ವೈದ್ಯರ ತಂಡವೊಂದನ್ನು ಕಳುಹಿಸಿ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲಿ ಗರಾಮಸ್ಥರೆಲ್ಲರೂ ಗುಣಮುಖರಾಗುತ್ತಾರೆ.
-ಪ್ರಸಾದ್‌, ಜಿಲ್ಲಾ ಆರೋಗ್ಯಾಧಿಕಾರಿ

ಗ್ರಾಮಸ್ಥರು ವಿಪರೀತಿ ಜ್ವರದಿಂದ ಕಳೆದ 4 ತಿಂಗಳಿನಿಂದ ಬಳಲುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿ ಕಾಯಿಲೆಯಿಂದ ಗುಣಮುಖರಾಗುವಂತೆ ಮಾಡುವುದು ನನ್ನ ಕರ್ತವ್ಯ.
-ಆರ್‌.ನರೇಂದ್ರ, ಶಾಸಕ

* ಡಿ.ನಟರಾಜು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ