ಹೋಟೆಲ್‌ ಉದ್ಯಮಕ್ಕೆ 2ನೇ ಅಲೆ ಹೊಡೆತ


Team Udayavani, Apr 21, 2021, 2:17 PM IST

The 2nd wave hit the hotel industry

ಗುಂಡ್ಲುಪೇಟೆ: ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿರುವ ಪರಿಣಾಮ ಕೇರಳ – ತಮಿಳುನಾಡಿನಿಂದಗುಂಡ್ಲುಪೇಟೆಗೆ ಆಗಮಿಸುವ ಪ್ರತಿಯೊಬ್ಬಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್‌ವರದಿ ತರಬೇಕಿರುವ ಹಿನ್ನೆಲೆ ತಾಲೂಕಿಗೆ ಬರುವಪ್ರವಾಸಿಗರ ಸಂಖ್ಯೆ ತೀರ ಇಳಿಮುಖ ಕಂಡಿದೆ.

ಇದುಹೋಟೆಲ್‌ ಉದ್ಯಮ ಹಾಗೂ ಪಾಸ್ಟ್‌ಫ‌ುಡ್‌,ಅಂಗಡಿಗಳ ಮೇಲೆ ಭಾರಿ ಹೊಡೆತ ಬಿದ್ದಿದೆ.ಗುಂಡ್ಲುಪೇಟೆ ಎರಡು ರಾಜ್ಯದ ಗಡಿಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತಿದಿನ ಕೇರಳ,ತಮಿಳುನಾಡಿಗೆ ಸಾವಿರಾರು ಜನರು ಸಂಚರಿಸುತ್ತಿದ್ದರು. ಪ್ರಸ್ತುತ ಕೋವಿಡ್‌ 2ನೇ ಅಲೆ ಹೆಚ್ಚಾಗುತ್ತಿರುವಕಾರಣಕ್ಕೆ ಹೆಚ್ಚಿನ ಮಂದಿ ಇತ್ತ ಸುಳಿಯುತ್ತಿಲ್ಲ.

ಇದರಿಂದ ಗುಂಡ್ಲುಪೇಟೆಯಿಂದ ಕೇರಳ ಮಾರ್ಗವಾಗಿಕೂತನೂರು, ಭೀಮನಬೀಡು ರಸ್ತೆ ಬದಿಯಲ್ಲಿ ಇಟ್ಟುಕೊಂಡಿರುವ ತರಕಾರಿ ವ್ಯಾಪಾರಿಗಳು, ಹೋಟೆಲ್‌ಗಳತ್ತ ಜನರು ಬರುತ್ತಿಲ್ಲ. ಪಟ್ಟಣದಲ್ಲಿ ಸಂಜೆಯಾಗುತ್ತಿದ್ದಂತೆ ಜನರ ಸಂಖ್ಯೆ ಕಡಿಮೆಯಾಗುತ್ತಿರುವಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದಪಾನಿಪುರಿ, ಗೋಬಿ ಮಂಚೂರಿ, ಟೀ ಅಂಗಡಿಗಳಲ್ಲಿಯೂ ಸಹ ವ್ಯಾಪಾರ ಕುಸಿದಿದೆ.

ಬೆರಳೆಣಿಕೆ ವಾಹನಗಳ ಸಂಚಾರ: ಕೇರಳದಿಂದಕರ್ನಾಟಕಕ್ಕೆ ನಿತ್ಯ ಸಹಸ್ರಾರು ವಾಹನಗಳುಸಂಚರಿಸುತ್ತಿದ್ದರು. ಆದರೆ, ಇದೀಗ ಕೋವಿಡ್‌ನೆಗೆಟಿವ್‌ ವರದಿ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿಮೂಲೆಹೊಳೆ ಚೆಕ್‌ ಮೂಲಕ ಸಂಚರಿಸುತ್ತಿರುವಕಾರು, ಬೈಕ್‌ಗಳ ಸಂಖ್ಯೆ ಕಡಿಮೆಯಾಗಿದೆ.ಕೆಲ ಹೋಟೆಲ್‌ಗ‌ಳಲ್ಲಿ ಸಿಬ್ಬಂದಿ,

ಸಂಬಳ ಕಡಿತ:ಪಟ್ಟಣದಲ್ಲಿರುವ ದೊಡ್ಡ ಹೋಟೆಲ್‌ಗ‌ಳನ್ನುನಡೆಸುವ ಮಾಲಿಕರು ಬಾಡಿಗೆ ಕಟ್ಟಲಾಗದ ಪರಿಸ್ಥಿತಿಗೆಬಂದೊದಗಿದ್ದು, ಬಾಗಿಲು ಮುಚ್ಚಬಾರದು ಎಂಬಉದ್ದೇಶದಿಂದ ಕಡಿಮೆ ಸಿಬ್ಬಂದಿಗಳನ್ನು ಕೆಲಸಕ್ಕೆತೆಗೆದುಕೊಂಡು, ಕಡಿಮೆ ಸಂಬಳ ನೀಡಲುಮುಂದಾಗಿದ್ದಾರೆ.

ಲಾಡ್ಜ್ಗಳು ಗ್ರಾಹಕರಿಲ್ಲದೇ ಖಾಲಿಹೊಡೆಯುತ್ತಿವೆ. ಸಣ್ಣ ಪುಟ್ಟ ಹೋಟೆಲ್‌ಗ‌ಳು, ತರಕಾರಿಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ವ್ಯಾಪಾರಕುಸಿದಿದೆ. ಕೋವಿಡ್‌ ಮೊದಲ ಅಲೆ ಕ್ಷೀಣಿಸುತ್ತಿದ್ದಂತೆಗರಿಗೆದರಿದ್ದ ಆರ್ಥಿಕ ಚಟುವಟಿಕೆಗಳು ಇದೀಗ 2ನೇಅಲೆ ಪರಿಣಾಮ ಮತ್ತೆ ಕುಸಿತ ಕಂಡಿವೆ.

ನಿತ್ಯ ಸಾವಿರಾರು ರೂಪಾಯಿ ತರಕಾರಿವ್ಯಾಪಾರ ಮಾಡುತ್ತಿದ್ದೆವು. ಆದರೆ,ಕೇರಳದಿಂದ ಗುಂಡ್ಲುಪೇಟೆಗೆ ಆಗಮಿಸುವ ವಾಹನಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ300ರಿಂದ 400 ರೂ. ಮಾತ್ರ ವ್ಯಾಪಾರಆಗುತ್ತಿದೆ. ಇದರಿಂದ ಹಾಕಿದ ಬಂಡವಾಳವೂ ಸಹ ಬರದ ಪರಿಸ್ಥಿತಿ ಬಂದೊದಗಿದೆ.

ಮಹದೇವಸ್ವಾಮಿ, ತರಕಾರಿ ಅಂಗಡಿ ಮಾಲಿಕ

 

ಬಸವರಾಜು ಎಸ್‌.ಹಂಗಳ

ಟಾಪ್ ನ್ಯೂಸ್

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.