ಸರ್ಕಾರದ ಹಸಿರೀಕರಣದ ಕನಸು ಹುಸಿ


Team Udayavani, May 26, 2019, 3:00 AM IST

sarakarada

ಕೊಳ್ಳೇಗಾಲ: ಸರ್ಕಾರಿ ಜಮೀನುಗಳಲ್ಲಿ ಮತ್ತು ವಿವಿಧ ಗುಡ್ಡ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಟ್ಟು ಹಸಿರೀಕರಣ ಮಾಡುವ ಸಲುವಾಗಿ ಸರ್ಕಾರ ನೆಡುತೋಪು ಯೋಜನೆಯಡಿಯಲ್ಲಿ ನೆಡಲಾಗಿದ್ದ ಸಸಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಸೂಕ್ತ ನೀರು ಪೂರೈಕೆಯಾಗದೆ ಗಿಡಗಳು ಒಣಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಅರಣ್ಯಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅರಣ್ಯ ನಾಶವಾಗಿದೆ. ಅದೇ ರೀತಿ ರಸ್ತೆ ನಿರ್ಮಾಣಗಳ ಸಂದರ್ಭದಲ್ಲಿ ನೂರಾರು ವರ್ಷಗಳಿಂದ ಬೆಳೆದಿದ್ದ ಹಳೆಯ ಮರಗಳನ್ನು ಕಡಿದು ನೆಲಸಮ ಮಾಡಲಾಗಿದೆ. ಅದೇ ರೀತಿ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ನೆಡಲಾಗಿದ್ದ ಮರಗಳು ರಸ್ತೆ ನಿರ್ಮಾಣಕ್ಕಾಗಿ ಹವನ ಆಗಿವೆ.

ಅರಣ್ಯ ಮತ್ತು ರಸ್ತೆ ಬದಿಗಳಲ್ಲಿ ದಿನದಿಂದ ದಿನಕ್ಕೆ ಮರಗಳ ಕಟಾವಿನಿಂದಾಗಿ ವಾತವರಣದಲ್ಲಿ ಕಲುಷಿತ ಉಂಟಾಗಿ ಬರಬೇಕಾಗಿದ್ದ ಮಳೆಯು ಬಾರದೆ ರೈತರು ಕಾಡುಪ್ರಾಣಿಗಳು ಮತ್ತು ಅರಣ್ಯ ನೀರಿಲ್ಲದೆ ವಿವಿಧ ರೀತಿಯ ಅನಾನುಕೂಲಗಳಿಗೆ ಒಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯೋಜನೆ ನೆಲಕಚ್ಚಿದೆ: ನೆಡುತೋಪು ಯೋಜನೆಯಡಿಯಲ್ಲಿ ನಗರದ ಮುದುಮಲೈ ಗುಡ್ಡದ ಆಸುಪಾಸಿನಲ್ಲಿರುವ ಜಮೀನಿನಲ್ಲಿ 200 ಸಸಿಗಳನ್ನು ನೆಡಲಾಗಿದೆ. ಅದೇ ರೀತಿ ತಾಲೂಕಿನ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿಯಲ್ಲಿರುವ ಜಮೀನಿನಲ್ಲಿ ನೆಡುತೋಪು ಯೋಜನೆಯಡಿಯಲ್ಲಿ ಸಸಿಗಳನ್ನು ನೆಡಲಾಗಿದೆ.

ಜಾಥಾ: ಅರಣ್ಯ ಇಲಾಖೆ ಸಸಿಗಳನ್ನು ಹೆಚ್ಚು ನಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಹಲವಾರು ರೀತಿಯ ಜಾಥಗಳನ್ನು ನಡೆಸಿ ಅರಿವುಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಅರಣ್ಯ ರಕ್ಷಣೆ: ಸರ್ಕಾರ ಅರಣ್ಯವನ್ನು ಉಳಿಸುವ ಸಲುವಾಗಿ ಮತ್ತು ಅರಣ್ಯದಲ್ಲಿ ವಾಸ ಮಾಡುವ ಕಾಡುಪ್ರಾಣಿಗಳ ರಕ್ಷಣೆ ಮಾಡುವ ಸಲುವಾಗಿ ಅಲ್ಲಲ್ಲಿ ಗಿಡಮರಗಳನ್ನು ನೆಡುತೋಪು ಯೋಜನೆಯಡಿಯಲ್ಲಿ ಸಾವಿರಾರು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಕಾಡು ಬೆಳೆಸುವ ಯೋಜನೆಗೆ ಮುಂದಾಗಿದೆ. ಕಾಡು ಬೆಳೆದರೆ ಮಳೆಯು ಸುರಕ್ಷಿತವಾಗಿ ಬರುವುದರಿಂದ ಕಾಡುಪ್ರಾಣಿಗಳ ರಕ್ಷಣೆ ಮಾಡಬಹುದೆಂಬ ಯೋಜನೆಯನ್ನು ಜಾರಿಗೆ ತಂದಿದೆ.

ಒತ್ತಾಯ: ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ನೆಡುತೋಪು ಯೋಜನೆಯಡಿಯಲ್ಲಿ ನೆಟ್ಟಿರುವ ಸಸಿಗಳನ್ನು ಕೂಡಲೇ ರಕ್ಷಣೆ ಮಾಡಿ ಅದನ್ನು ಉತ್ತಮ ರೀತಿಯಲ್ಲಿ ಬೆಳೆಯುವಂತೆ ಮಾಡಿ, ಕುಲುಷಿತಗೊಂಡಿರುವ ಪರಿಸರವನ್ನು ಸರಿಪಡಿಸಿ ಸಕಾಲದಲ್ಲಿ ಮಳೆ ಬರುವಂತೆ ಮಾಡಬೇಕು ಎಂದು ರೈತ ಮುಖಂಡ ಎಂ.ನಾಗರಾಜು ಒತ್ತಾಯಿಸಿದ್ದಾರೆ.

ಮೇಲೇಳದ ಸಸಿಗಳು: ನೆಡುತೋಪು ಯೋಜನೆಯಡಿಯಲ್ಲಿ ಸುಮಾರು 1.50 ಲಕ್ಷ ರೂ ಅಂದಾಜಿನಲ್ಲಿ ಜಮೀನುಗಳಲ್ಲಿ ಸಸಿಗಳನ್ನು ನೆಡಬೇಕು. ಮತ್ತು ನೆಟ್ಟ ಬಳಿಕ ಗಿಡಗಳಿಗೆ ಪೋಷಣೆಯನ್ನು ಅರಣ್ಯ ಇಲಾಖೆಯಿಂದಲೇ ರಕ್ಷಣೆ ಮಾಡಿ ಪೋಷಿಸಿ ಬೆಳೆಸುವಂತೆ ಸರ್ಕಾರದ ಸೂಕ್ತ ನಿರ್ದೇಶನ ಇದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ನೆಪಮಾತ್ರಕ್ಕೆ ಸಸಿಗಳನ್ನು ನೆಟ್ಟು ಅದನ್ನು ಸರಿಯಾಗಿ ಪೋಷಣೆ ಮಾಡದೆ ಇರುವುದರಿಂದ ಸಸಿಗಳು ಬೆಳೆಯಲಾಗದೆ ಮೊಳಕೆಯಲ್ಲಿಯೇ ಮೇಲೆ ಬರದಂತೆ ಆಗಿದೆ.

ನೆಡುತೋಪು ಯೋಜನೆಯಡಿಯಲ್ಲಿ ಅರಣ್ಯ ಬೆಳೆಸುವ ಸಲುವಾಗಿ ನೆಟ್ಟಿರುವ ಸಸಿಗಳ ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ಗಿಡಗಳು ಉತ್ತಮ ರೀತಿಯಲ್ಲಿ ಬೆಳೆಯುವಂತೆ ಮಾಡಲಾಗುವುದು.
-ಏಳುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ

* ಡಿ.ನಟರಾಜು

ಟಾಪ್ ನ್ಯೂಸ್

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.