ಆಟೋ ಪಲ್ಟಿ: 8 ತಿಂಗಳ ತುಂಬು ಗರ್ಭಿಣಿ ಸಾವು
Team Udayavani, May 1, 2021, 12:54 PM IST
ಗುಂಡ್ಲುಪೇಟೆ: ಪ್ಯಾಸೆಂಜರ್ ಆಟೋ ಪಲ್ಟಿಯಾಗಿ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಅಣ್ಣೂರು ರಸ್ತೆಯ ತಿರುವಿನಲ್ಲಿ ಸಂಭವಿಸಿದೆ.
ಪೂರ್ಣಿಮಾ (20) ಮೃತ ದುರ್ದೈವಿ. ಪತಿ ಅಖೀಲೇಶ್ ಜೊತೆ ಆಟೋದಲ್ಲಿ ಆರೋಗ್ಯ ತಪಾಸಣೆಗೆ ತೆರಳುವ ವೇಳೆ ಅವಘಡ ಸಂಭವಿಸಿದ್ದು, ಆಕೆ 8 ತಿಂಗಳ ಗರ್ಭಿಣಿಯಾಗಿದ್ದಳು ಎಂದು ತಿಳಿದು ಬಂದಿದೆ.
ಘಟನೆ ನಂತರ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗುಂಡ್ಲುಪೇಟೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತ್ಯ ಸಂಸ್ಕಾರಕ್ಕೆ ಹಿಂದೇಟು: ಗರ್ಭಿಣಿ ಪೂರ್ಣಿಮಾ ಮಲ್ಲಯ್ಯನಪುರದವರಾಗಿದ್ದು, ಈಕೆಯ ಪತಿ ಅಖೀಲೇಶ್ ಅಣ್ಣೂರು ಗ್ರಾಮದವರು. 8 ತಿಂಗಳ ಗರ್ಭಿಣಿ ಸಾವನ್ನಪಿರುವ ಹಿನ್ನೆಲೆ 2 ಗ್ರಾಮದಗ್ರಾಮಸ್ಥರು ಶವ ಸಂಸ್ಕಾರಕ್ಕೆ ಹಿಂದೇಟು ಹಾಕಿದ್ದರು.ನಂತರ ಪೋಲಿಸರ ಮಧ್ಯೆ ಪ್ರವೇಶದಿಂದ ಅಣ್ಣೂರಿನಲ್ಲಿ ಅಂತ್ಯಕ್ರಿಯೆ ನಡೆಯಿತು.