ಎಚ್ಚೆತ್ತ ಪಟ್ಟಣ ಪಂಚಾಯಿತಿ: ಒಡೆದ ಪೈಪ್ ಬದಲಾವಣೆ
Team Udayavani, Feb 12, 2021, 4:29 PM IST
ಯಳಂದೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10 ನೇ ವಾರ್ಡಿನಲ್ಲಿ ಒಡೆದಿದ್ದ ಕುಡಿಯುವ ನೀರಿನ ಪೈಪ್ ಅನ್ನು ಪಪಂ ಅಧಿಕಾರಿಗಳು ಗುರುವಾರ ಬದಲಿಸಿದ್ದಾರೆ. ಈ ಬಗ್ಗೆ ಫೆ.10ರಂದು “ಉದಯವಾಣಿ’ಯಲ್ಲಿ “ಮಕ್ಕಳಲ್ಲಿ ಜಾಂಡಿಸ್, ಟೈಫಾಯ್ಡ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.
ಈ ಬಗ್ಗೆ ಎಚ್ಚೆತ್ತ ಅಧಿಕಾರಿಗಳು ಪಪಂ ಆರೋಗ್ಯಾಧಿಕಾರಿ ಮಹೇಶ್‌ಕುಮಾರ್, ರಾಜಸ್ವ ನಿರೀಕ್ಷಕ ನಂಜುಂಡಶೆಟ್ಟಿ ನೇತೃತ್ವದಲ್ಲಿ ಸಿಬ್ಬಂದಿ 10ನೇ ವಾರ್ಡಿನ ಮುಸ್ಲಿಂ ಬೀದಿ ಯಲ್ಲಿ ಪೈಪ್ ಒಡೆದಿರುವ ಬಗ್ಗೆ ಪರಿಶೀಲನೆ ನಡೆಸಿದರು. ಕಾಂಕ್ರಿಟ್ ರಸ್ತೆಯಲ್ಲೇ ಹೂತು ಹೋಗಿದ್ದ ನೀರಿನ ಪೈಪ್ ಹಾಗೂ ಖಾಸಗಿ ಮನೆಯವರು ಕಲುಷಿತ ನೀರು ಹೊರ ಹಾಕಲು ಹಾಕಿದ್ದ ಪೈಪ್ ಎರಡೂ ಭಾರವಾದ ವಾಹನ ಚಲಿಸಿದ್ದ ಹಿನ್ನೆಲೆಯಲ್ಲಿ ಒಡೆದು ಕಲುಷಿತ ನೀರು ಮಿಶ್ರಿತವಾಗಿ ನಲ್ಲಿಗಳಲ್ಲಿ ಬರುತ್ತಿತ್ತು. ಈ ನೀರನ್ನೇ ಬಳಸಲಾಗುತ್ತಿತ್ತು. ಈಗ, ಸಿಬ್ಬಂದಿ ಪೈಪ್ ಬದಲಿಸಿದ್ದು ನಾಗರೀಕರು ನಿಟ್ಟುಸಿರು ಬಿಟ್ಟಂತಾಗಿದೆ.
ಆಸ್ಪತ್ರೆಗೆ ಭೇಟಿ, ಮಕ್ಕಳ ಆರೋಗ್ಯ ವಿಚಾರಣೆ: ಈ ಸಂಬಂಧ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ನೋಡಲು ಖುದ್ದು ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಆರೋಗ್ಯಾಧಿಕಾರಿ ಮಹೇಶ್‌ಕುಮಾರ್, ಕೆಲ ಸದಸ್ಯರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
ಬಳೇಪೇಟೆ 10 ನೇ ವಾರ್ಡಿನಲ್ಲಿ ಈ ಹಿಂದೆ 3 ಕಡೆ ಸಣ್ಣದಾಗಿ ನೀರಿನ ಪೈಪ್ ಒಡೆದಿತ್ತು. ಇದನ್ನು ಈಗಾಗಲೇ ದುರಸ್ತಿ ಮಾಡಲಾಗಿತ್ತು. ಆದರೆ, ಮುಸ್ಲಿಂ ಬೀದಿಯಲ್ಲಿ ಕಾಂಕ್ರಿಟ್ ರಸ್ತೆಗೆ ಅಡ್ಡಲಾಗಿ ಹಾಕಿದ್ದ ನೀರಿನ ಪೈಪ್ ಹಾಗೂ ಇಲ್ಲಿನ ಮನೆಯ ವ್ಯಕ್ತಿಯೊಬ್ಬರು ಚರಂಡಿಗೆ ಬಿಟ್ಟಿದ್ದ ಕಲುಷಿತ ನೀರಿನ ಪೈಪ್ ಒಳಗಡೆಯೇ ಒಡೆದಿತ್ತು. ಹೀಗಾಗಿ ಕಲುಷಿತ ನೀರು ಬರುತ್ತಿತ್ತು. ಇದನ್ನು ಪತ್ತೆ ಹಚ್ಚಿ ಇಲ್ಲಿಗೆ ಹೊಸ ಪೈಪ್ ಅಳವಡಿಸಲಾಗಿದೆ. ಈಗಾಗಲೇ ಈ ನೀರಿನ ಸ್ಯಾಂಪಲ್‌ಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪಡೆದಿದ್ದು ಯಾವುದೇ ಕಲ್ಮಶಗಳು ಪತ್ತೆಯಾಗಿಲ್ಲ. ಈಗ ಹೊಸ ಪೈಪ್ ಅಳ ವಡಿಸಿದ್ದು ಮತ್ತೆ ನೀರಿನ ಸ್ಯಾಂಪಲ್ ಕಳುಹಿಸಲಾಗುವುದು. ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲವೆಂದು ಪಪಂ ಆರೋಗ್ಯಾಧಿಕಾರಿ ಮಹೇಶ್‌ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಿರುಕುಳ ನೀಡುತ್ತಿದ್ದ ಪತಿಯ ಹತ್ಯೆ ಸುಪಾರಿ ಕೊಟ್ಟ ಪತ್ನಿ, ಪುತ್ರ ಸೇರಿ ಐವರ ಬಂಧನ
ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್
ಶಿಡ್ಲಘಟ್ಟ: ದುಗ್ಗಲಮ್ಮ ದೇಗುಲಕ್ಕೆ ಕ್ಯಾಂಟರ್ ಡಿಕ್ಕಿ ; ಕ್ಲೀನರ್ ಸಾವು, ದೇಗುಲಕ್ಕೆ ಹಾನಿ
ಅನಾರೋಗ್ಯ : ಮನನೊಂದ ಯುವಕ ಕಂದವಾರ ಕೆರೆಗೆ ಹಾರಿ ಆತ್ಮಹತ್ಯೆ
72ರ ವೃದ್ಧನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ: ಕಾನೂನು ಸಲಹೆ ಪಡೆಯಲು ಹೈಕೋರ್ಟ್ ಸೂಚನೆ