ಕುಡಿವ ನೀರು ಪೂರೈಸಲು ಖಾಸಗಿ ಬೋರ್‌ವೆಲ್ ಬಳಸಿಕೊಳ್ಳಿ
Team Udayavani, Feb 22, 2021, 1:07 PM IST
ಹನೂರು: ಈ ಭಾಗದಲ್ಲಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಕುಡಿಯುವ ನೀರು ವಿಭಾಗದ ಇಇ ಶಿವಶಂಕರಯ್ಯ ತಿಳಿಸಿದರು. ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಸಂಬಂಧ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಪಂಚಾಯಿತಿ ವ್ಯಾಪ್ತಿಯ ನಾಲಾರೋಡ್, ಸಂದನಪಾಳ್ಯ,ಕೀರೆಪಾತಿ, ಮಾರ್ಟಳ್ಳಿ ಮತ್ತು ಹಳೇ ಮಾರ್ಟಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪಿಡಿಒಗಳಿಂದ ಮಾಹಿತಿ ಪಡೆದರು. ಬಳಿಕ ಮಾತನಾಡಿ, ಗ್ರಾಮಸ್ಥರಿಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗಬಾರದು. ಈ ನಿಟ್ಟಿನಲ್ಲಿಪಂಚಾಯಿತಿ ವ್ಯಾಪ್ತಿಯ ಖಾಸಗಿ ವ್ಯಕ್ತಿಗಳ ಬೋರ್‌ವೆಲ್ ಅಥವಾ ಪಂಪ್‌ಸೆಟ್‌ಗಳಲ್ಲಿ ನೀರಿನ ಲಭ್ಯತೆಯಿದ್ದಲ್ಲಿ ಅಂತಹವರ ಜೊತೆ ಒಡಂಬಡಿಕೆ ಮಾಡಿಕೊಂಡು ನೀರು ಪೂರೈಸಿ. ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆಆಧರಿಸಿ ರೀಬೋರ್ ಮಾಡಿಸಿ. ಈ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆಯಲಾಗುವುದು ಎಂದರು.
ಈ ವೇಳೆ ಎಇಇ ಮಹಾದೇವಮೂರ್ತಿ, ಗ್ರಾ.ಪಂ ಉಪಾಧ್ಯಕ್ಷ ರಾಮ ಲಿಂಗಂ, ಸದಸ್ಯರಾದ ಆರುಸ್ವಾಮಿ, ತಂಬಿ, ಸರಸೀಬಾಯಿ, ರಾಜಮಣಿ, ಕೃಷ್ಣನಾಯ್ಕ, ಅಂಥೋಣಿಸ್ವಾಮಿ, ಪಿಡಿಒ ಡಾ| ಶಿವಣ್ಣ, ಬಿಲ್ ಕಲೆಕ್ಟರ್ ನಾಗರಾಜು, ಮುಖಂಡರಾದ ಶಿವು, ಪಿಂಟೋ, ಗಣೇಶ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮತಾಂತರ ವೈಯಕ್ತಿಕ ಆಯ್ಕೆ
ನನ್ನ ಸೋಲಿಗೆ ಬಹುಜನ ವಿದ್ಯಾರ್ಥಿ ಸಂಘದ ಅಪಪ್ರಚಾರವೂ ಕಾರಣ : ಆರ್. ಧ್ರುವನಾರಾಯಣ
ತೈಲ ದರ ಹೆಚ್ಚಾದರೂ ಚಿಂತೆಯಿಲ್ಲ ಎನ್ನುವವರಿಗೆ ಲೀಟರಿಗೆ 1ಸಾವಿರ ದರ ವಿಧಿಸಿ :ಯು.ಟಿ. ಖಾದರ್
ಮೈಸೂರು ಮೇಯರ್ ಹುದ್ದೆ ನಮ್ಮ ಪಕ್ಷದೊಳಗಾದ ಗೊಂದಲದಿಂದ ತಪ್ಪಿ ಹೋಗಿದೆ ; ಆರ್.ಧ್ರುವನಾರಾಯಣ್
ಹಿಂದೂ ಧರ್ಮ- ಹಿಂದುತ್ವ ಬೇರೆ ಬೇರೆ, ಅಡಿಯಾಳಾಗಿ ಬದುಕಬೇಕೆಂಬುದು ಹಿಂದುತ್ವ: ಯತೀಂದ್ರ