Udayavni Special

ಜನಪ್ರತಿನಿಧಿಗಳು ಪರಿಸರ ಉಳಿಸಲಿ

ಗಿಡಗಳನ್ನು ನೆಟ್ಟು ಎಲ್ಲರಿಗೂ ಮಾದರಿಯಾಗಿ: ಎಂಎಲ್ಸಿ ಗೋಪಾಲಸ್ವಾಮಿ

Team Udayavani, Aug 15, 2019, 3:30 PM IST

15-Agust-35

ಚನ್ನರಾಯಪಟ್ಟಣ ತಾಲೂಕು ಜಂಬೂರು ಗ್ರಾಮಸ್ಥರಿಗೆ ವಿಧಾನ ಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ ಉಚಿತವಾಗಿ ಗಿಡ ವಿತರಣೆ ಮಾಡಿದರು

ಚನ್ನರಾಯಪಟ್ಟಣ: ಜನಪ್ರತಿನಿಧಿಗಳು ವೇದಿಕೆ ಮೇಲೆ ನಿಂತು ಭಾಷಣ ಮಾಡುವುದರಿಂದ ಪರಿಸರ ರಕ್ಷಣೆ ಆಗುವುದಿಲ್ಲ. ನಾವು ಗಿಡ ನೆಟ್ಟು ಬೆಳೆಸುವ ಮೂಲಕ ಸಾರ್ವಜನಿಕರಿಗೆ ಮಾದರಿ ಆಗಬೇಕು ಎಂದು ವಿಧಾನ ಪರಿಷತ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ನುಗ್ಗೇಹಳ್ಳಿ ಗ್ರಾಮದಲ್ಲಿ ವಲಯ ಅರಣ್ಯ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗ್ರಾಮಸ್ಥರಿಗೆ ಸಾವಿರಾರು ಗಿಡವನ್ನು ವಿತರಣೆ ಮಾಡಿ, ಗ್ರಾಮ ಠಾಣೆಯಲ್ಲಿ ಸುಮಾರು 1,200 ಗಿಡವನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆ ಮಾಡುವಂತೆ ತಿಳಿಸುವುದರೊಂದಿಗೆ ಪರಿಸರ ಉಳಿಸಲು ನಾವು ಶ್ರಮಿಸಬೇಕಿದೆ ಎಂದು ತಿಳಿಸಿದರು.

ಪ್ರತಿ ಮನೆಗೆ ಎರಡು ಗಿಡ ವಿತರಣೆ: ಜೂನ್‌ ತಿಂಗಳಲ್ಲಿ ಮಳೆಯಾದಾಗ ಜಂಬೂರು ಗ್ರಾಮದ ಕರೆ ಏರಿ ಮೇಲೆ 600ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿತ್ತು, ಈಗ ಆಶ್ಲೇಷ ಮಳೆ ಉತ್ತಮವಾಗಿ ಆಗಿರುವುದರಿಂದ ಗ್ರಾಮದ ಪ್ರತಿ ಮನೆಗೆ ಎರಡು ಗಿಡದಂತೆ ಬೆಳೆಸಲು ಮುಂದಾಗುತ್ತಿದ್ದೇವೆ. ಈಗ ನಾಟಿ ಮಾಡಿರುವುದರಲ್ಲಿ ಶೇ.80 ರಷ್ಟು ಗಿಡವನ್ನು ಉಳಿಸಲು ಗ್ರಾಮಸ್ಥರು ಶ್ರಮಿಸಲಿದ್ದಾರೆ. ಬೇಸಿಗೆಯಲ್ಲಿ ವೈಯಕ್ತಿಕವಾಗಿ ಹಣ ವೆಚ್ಚ ಮಾಡಿ ಟ್ಯಾಂಕರ್‌ ಮೂಲಕ ನೀರು ಹಾಕಲಾವುದು ಎಂದರು.

ಹಸಿರು ಕರ್ನಾಟಕ ಯೋಜನೆ: ಮೈತ್ರಿ ಸರ್ಕಾರ ಹಸಿರು ಕರ್ನಾಟಕ ಯೋಜನೆ ಘೋಷಣೆ ಮಾಡಿದೆ ಇದನ್ನು ಜಾರಿಗೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರೆ ಸಾಲದು ಜನಪ್ರತಿನಿಧಿಗಳು ಮುಂದೆ ನೀತು ಅನುಷ್ಠಾನ ಮಾಡಿಸಲು ಮುಂದಾಗಬೇಕು, ಗ್ರಾಮದ ಜಕ್ಕೇಶ್ವರ ದೇವಾಲಯದ ಎರಡು ಎಕರೆ ಭೂಮಿಯಲ್ಲಿ ನೂರಾರು ವಿವಿಧ ಜಾತಿಯ ಹಣ್ಣಿನ ಗಿಡವನ್ನು ನಾಟಿ ಮಾಡಿ ತಂತಿಬೇಲಿ ನಿರ್ಮಾಣ ಮಾಡಿ ಜಾನು ವಾರುಗಳಿಂದ ರಕ್ಷಣೆ ಮಾಡಲಾಗುವುದು. ಪ್ರತಿ ಗಿಡಗಳಿಗೆ ಹನಿ ನೀರಾವರಿ ಅಳವಡಿಸ ಲಾಗುತ್ತದೆ ಎಂದು ಹೇಳಿದರು.

ಗ್ರಾಮದಲ್ಲಿ ಸುಮಾರು ಮೂರು ಲಕ್ಷ ರೂ. ಅನುದಾನದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗುವುದು. ಇತ್ತೀಚಿನ ದಿವಸದಲ್ಲಿ ಪ್ರತಿ ಗ್ರಾಮಕ್ಕೂ ಉದ್ಯಾನವನ ಅವಶ್ಯವಿದೆ. ಗ್ರಾಮಠಾಣಾ ಇಲ್ಲವೇ ದೇವಾಲಯದ ಆವ ರಣಗಳಲ್ಲಿ ಗಿಡ ಮರ ಬೆಳೆಸುವ ಮೂಲಕ ಉದ್ಯಾನವನ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಬೇಕು. ಸರ್ಕಾರ ಪರಿಸರ ಉಳಿ ವಿಗೆ ನೀಡುವ ಅನುದಾನ ಹಾಗೂ ಯೋಜ ನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಿಷ್ಠೆಯಿಂದ ಮಾಡಬೇಕು ಎಂದು ಆದೇಶಿ ದರು. ಸಾಮಾಜಿಕ ಅರಣ್ಯಾಧಿಕಾರಿ ಪ್ರಸನ್ನ ಕುಮಾರ, ವಲಯ ಅರಣ್ಯಾಧಿಕಾರಿ ಹೇಮಂತಕುಮಾರ, ಕರೀಗೌಡ, ದಯಾನಂದ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

“ಜಂಗಲ್‌ರಾಜ್‌ ಯುವರಾಜ’

“ಜಂಗಲ್‌ರಾಜ್‌ ಯುವರಾಜ’; ಮಹಾಘಟಬಂಧನ್‌ ಸಿಎಂ ಅಭ್ಯರ್ಥಿ ತೇಜಸ್ವಿ ವಿರುದ್ಧ ಮೋದಿ ವಾಗ್ಬಾಣ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಕ್ರೆಡಿಟ್‌ ಕಾರ್ಡ್‌ಗಿಲ್ಲ ಚಕ್ರಬಡ್ಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ಗ್ರಾಮ ಪಂಚಾಯತ್ ಗಳಲ್ಲಿ ಶೀಘ್ರ ಆಧಾರ್‌ ತಿದ್ದುಪಡಿ

ರಬ್ಬರ್‌ ಬೆಳೆಗಾರರ ಮೊಗದಲ್ಲಿ ಮಂದಹಾಸ; 150 ರೂ. ದಾಟಿದ ಧಾರಣೆ!

ರಬ್ಬರ್‌ ಬೆಳೆಗಾರರ ಮೊಗದಲ್ಲಿ ಮಂದಹಾಸ; 150 ರೂ. ದಾಟಿದ ಧಾರಣೆ!

ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಫರಂಗಿಪೇಟೆ ಫೋಟೋಗ್ರಾಫರ್ ಕೊಲೆ ಯತ್ನ ಪ್ರಕರಣ: ಮೂವರು ಆರೋಪಿಗಳ ಬಂಧನ

ಅರ್ಹ ಸಾಧಕರಿಗೆ ಗೌರವ

ಅರ್ಹ ಸಾಧಕರಿಗೆ ಗೌರವ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮಿತವ್ಯಯಕ್ಕೆ ವಿಲೀನವೇ ಮಾರ್ಗ; ಇಲಾಖೆಗಳ ವಿಲೀನಕ್ಕೆ ತಜ್ಞರ ಸಲಹೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಮುಂದಿನ ವರ್ಷದ ಅಕ್ಟೋಬರ್‌ಗೆ ಲಸಿಕೆ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

ಸೇವೆಯೆಂಬ ಯಜ್ಞಕ್ಕೆ ಸಂದ ಫ‌ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.