ಎಫ್ಡಿಎ ನೇಮಕಾತಿ ಪ್ರವೇಶ ಪರೀಕ್ಷೆಗೆ 1,032 ಮಂದಿ ಗೈರು

Team Udayavani, Jun 10, 2019, 3:00 AM IST

ಚಿಕ್ಕಬಳ್ಳಾಪುರ: ರಾಜ್ಯ ಲೋಕಸೇವಾ ಆಯೋಗ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿಗೆ ಭಾನುವಾರ ನಡೆಸಿದ ಪ್ರವೇಶ ಪರೀಕ್ಷೆಗೆ ಜಿಲ್ಲಾ ಕೇಂದ್ರದಲ್ಲಿ ಒಟ್ಟು 8 ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ಪರೀಕ್ಷೆ ಸುಗಮವಾಗಿ ನಡೆದಿದ್ದು, ನೊಂದಾಯಿತರ ಪೈಕಿ ಬರೋಬ್ಬರಿ 1,032 ಮಂದಿ ಪರೀಕ್ಷೆಗೆ ಗೈರಾಗಿದ್ದರು.

ಪ್ರವೇಶ ಪರೀಕ್ಷೆಗೆ ಜಿಲ್ಲಾದ್ಯಂತ ಒಟ್ಟು 3,666 ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು ಆ ಪೈಕಿ ಬೆಳಗ್ಗೆ 10 ರಿಂದ 11.30ರ ವರೆಗೂ ನಡೆದ ಸಾಮಾನ್ಯ ವಿಷಯ ಪರೀಕ್ಷೆಗೆ 3,666 ಮಂದಿ ಪೈಕಿ 2.647 ಮಂದಿ ಅಭ್ಯರ್ಥಿಗಳು ಪರೀಕ್ಷೆ ಬರೆದು 1,019 ಮಂದಿ ಅಭ್ಯರ್ಥಿಗಳು ಗೈರಾದರೆ ಮಧ್ಯಾಹ್ನ 2 ರಿಂದ 3:30ರ ವರೆಗೂ ನಡೆದ ಸಾಮಾನ್ಯ ಕನ್ನಡ ಹಾಗೂ ಆಂಗ್ಲ ಪರೀಕ್ಷೆಗೆ ನೊಂದಾಯಿತ ಒಟ್ಟು 3,666 ಮಂದಿ ಅಭ್ಯರ್ಥಿಗಳ ಪೈಕಿ 2.634 ಮಂದಿ ಪರೀಕ್ಷೆ ಬರೆದು ಉಳಿದ 1,032 ಪರೀಕ್ಷೆಗೆ ಗೈರಾಗಿದ್ದರೆಂದು ಪರೀಕ್ಷಾ ನೋಡಲ್‌ ಅಧಿಕಾರಿಯಾಗಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌ “ಉದಯವಾಣಿ’ಗೆ ತಿಳಿಸಿದರು.

8 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ: ನಗರದ ಸೆಂಟ್‌ ಜೋಸೆಪ್‌ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 642 ಮಂದಿ ಪೈಕಿ ಬೆಳಗØಗೆ 447 ಮಂದಿ ಪರೀಕ್ಷೆ ಬರೆದು 195 ಮಂದಿ ಗೈರಾದರೆ ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ 444 ಮಂದಿ ಪರೀಕ್ಷೆ ಬರೆದು 198 ಗೈರಾಗಿದ್ದರು. ನಗರದ ಸರ್ಕಾರಿ ಪ್ರಾಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 600 ಮಂದಿ ಅಭ್ಯರ್ಥಿಗಳ ಪೈಕಿ 442 ಮಂದಿ ಪರೀಕ್ಷೆ ಬರೆದು ಉಳಿದ 158 ಮಂದಿ ಗೈರಾದರೆ, ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ 441 ಮಂದಿ ಪರೀಕ್ಷೆ ಬರೆದು ಉಳಿದ 159 ಮಂದಿ ಗೈರಾಗಿದ್ದರು.

130 ಮಂದಿ ಗೈರು: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 480 ವಿದ್ಯಾರ್ಥಿಗಳ ಪೈಕಿ ಬೆಳಗ್ಗೆ ಒಟ್ಟು 354 ಮಂದಿ ಹಾಜರಾಗಿ ಉಳಿದ 126 ವಿದ್ಯಾರ್ಥಿಗಳು ಗೈರಾದರೆ ಮಧ್ಯಾಹ್ನ ನಡೆದ ಪರೀಕ್ಷೆಯಲ್ಲಿ 350 ಮಂದಿ ಹಾಜರಾಗಿ ಉಳಿದ 130 ಮಂದಿ ಅಭ್ಯಥಿ ìಗಳು ಗೈರಾಗಿದ್ದರು.

ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 480 ವಿದ್ಯಾರ್ಥಿಗಳ ಪೈಕಿ 355 ಮಂದಿ ಹಾಜರಾಗಿ ಉಳಿದ 125 ಮಂದಿ ಗೈರಾದರೆ ಮಧ್ಯಾಹ್ನ 353 ಮಂದಿ ಹಾಜರಾಗಿ 127 ಮಂದಿ ಗೈರಾಗಿದ್ದರು. ನಗರದ ಹೊರ ವಲಯದ ಬಿಜಿಎಸ್‌ ಗ್ರಾಮಾಂತರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟಿಉ 480 ಅಭ್ಯರ್ಥಿಗಳ ಪೈಕಿ 348 ಮಂದಿ ಪರೀಕ್ಷೆ ಬರೆದು ಉಳಿದ 132 ಮಂದಿ ಗೈರಾದರೆ ಮಧ್ಯಾಹ್ನ 347 ಮಂದಿ ಹಾಜರಾಗಿ 133 ಮಂದಿ ಗೈರಾಗಿದ್ದರು.

ಸರ್‌ಎಂವಿ ಪ್ರೌಢ ಶಾಲೆಯಲ್ಲಿ ಒಟ್ಟು 360 ಅಭ್ಯರ್ಥಿಗಳ ಪೈಥಕಿ 270 ಮಂದಿ ಪರೀಕ್ಷೆ ಬರೆದು 90 ಮಂದಿ ಗೈರಾದರೆ, ಮಧ್ಯಾಹ್ನ 269 ಮಂದಿ ಪರೀಕ್ಷೆ ಬರೆದು 91 ಮಂದಿ ಗೈರಾಗಿದ್ದರು. ಬಿಜಿಎಸ್‌ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಒಟ್ಟು 360 ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡು ಪರೀಕ್ಷೆಗೆ 253 ಮಂದಿ ಹಾಜರಾಗಿ ಉಳಿದ 107 ಮಂದಿ ಗೈರಾದರೆ, ಮಧ್ಯಾಹ್ನ 252 ಮಂದಿ ಪರೀಕ್ಷೆ ಬರೆದು 108 ಮಂದಿ ಗೈರಾಗಿದ್ದರು.

ನಗರದ ವಾಪಸಂದ್ರದ ಜಚನಿ ಕಾಲೇಜಿನಲ್ಲಿ ಒಟ್ಟು 264 ಮಂದಿ ನೊಂದಾಯಿತ ಅಭ್ಯರ್ಥಿಗಳ ಪೈಕಿ 178 ಮಂದಿ ಮಾತ್ರ ಪರೀಕ್ಷೆ ಬರೆದು ಉಳಿದ 86 ಅಭ್ಯರ್ಥಿಗಳು ಗೈರಾಗಿದ್ದು, ಮಧ್ಯಾಹ್ನ 178 ಮಂದಿ ಪರೀಕ್ಷೆ ಬರೆದು 86 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದರು.

ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಭದ್ರತೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ದ್ವೀತಿಯ ದರ್ಜೆ ಸಹಾಯಕರ ಹುದ್ದೆಗಳ ನೇರ ನೇಮಕಾತಿಗಾಗಿ ಪ್ರವೇಶ ಪರೀಕ್ಷೆ ನಡೆಸಿ 8 ಕೇಂದ್ರಗಳಿಗೂ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಪ್ರತಿ ಕೇಂದ್ರಕ್ಕೆ ಪುರುಷ ಹಾಗೂ ಮಹಿಳಾ ವೀಕ್ಷಕರನ್ನು ನೇಮಿಸಲಾಗಿತ್ತು. ಪರೀಕ್ಷಾ ಅಕ್ರಮಗಳನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ಜಾಗೃತ ದಳ ಹಾಗೂ ವೀಕ್ಷಕ ದಳವನ್ನು ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ