Udayavni Special

ಕೆಎಸ್‌ಆರ್‌ಟಿಸಿಗೆ 40 ಕೋಟಿ ರೂ. ನಷ್ಟ

Team Udayavani, May 21, 2020, 6:16 AM IST

40loss

ಚಿಕ್ಕಬಳ್ಳಾಪುರ: ಕಳೆದ 55 ದಿನಗಳಿಂದ ಕೊರೊನಾ ಲಾಕ್‌ಡೌನ್‌ ಪರಿಣಾಮ ಕೆಎಸ್ಸಾರ್ಟಿಸಿ ಬಸ್‌ ಸಂಚಾರವಿಲ್ಲದ್ದರಿಂದ ಘಟಕಕ್ಕೆ ನಿತ್ಯ ಟಿಕೆಟ್‌ ಮಾರಾಟದಿಂದ ಹರಿದು ಬರುತ್ತಿದ್ದ ಬರೋಬ್ಬರಿ 40 ಕೋಟಿ ರೂ.ಗೂ ಅಧಿಕ ಹಣ  ನಷ್ಟವಾಗಿದೆ. ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಹಜವಾಗಿ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕ ಜಾಲ ದೊಡ್ಡದಾಗಿದ್ದು ಬರೋಬ್ಬರಿ ಸಾಮಾನ್ಯ ಬಸ್‌ಗಳಿಂದ ಹಿಡಿದು ವೇಗದೂತ, ರಾಜಹಂಸ ಸೇರಿ ಒಟ್ಟು 604 ಕೆಂಪು  ಬಸ್‌ ಹೊಂದಿದೆ.

ಆದರೆ, ಕಳೆದ ಮಾ.22 ರಿಂದ ಕೇಂದ್ರ ಸರ್ಕಾರ ಕೊರೊನಾ ತಡೆಗೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಸತತ 55 ದಿನ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಸಂಚಾರ ಸ್ಥಗಿತಗೊಳಿಸಿತ್ತು. ಜಿಲ್ಲೆಯ ಕೆಎಸ್‌ಆರ್‌ಟಿಸಿ ಉಪ  ವಿಭಾಗಕ್ಕೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಘಟಕಗಳು ಸೇರಿಕೊಂಡಿದ್ದು ನಿತ್ಯ ಜಿಲ್ಲೆಯ ಒಳಗಿನ ಗ್ರಾಮೀಣ ಸಾರಿಗೆ ಜೊತೆಗೆ ಅಂತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಬಸ್‌ ಸೌಕರ್ಯ ಹೊಂದಿತ್ತು.

ಇದರಿಂದ ಜಿಲ್ಲಾ ಘಟಕಕ್ಕೆ ಕನಿಷ್ಠ ಪ್ರತಿ ದಿನ 60 ರಿಂದ 70 ಲಕ್ಷ ರೂ., ಸಂಗ್ರಹವಾಗುತ್ತಿತ್ತು. ಆದರೆ, ಮಹಾಮಾರಿ ಕೊರೊನಾ ದೇಶದಲ್ಲಿ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಮಾ.22 ರಿಂದಲೇ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಬಂದ್‌ ಮಾಡಲಾಗಿತ್ತು. ಇದರಿಂದ ಸ್ಥಳೀಯವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹರಿದು ಬರುತ್ತಿದ್ದ ಕೋಟ್ಯಂತರ ರೂ, ಆರ್ಥಿಕ ಸಂಗ್ರಹಕ್ಕೆ ಕೊರೊನಾ ಲಾಕ್‌ ಮಾಡಿತು. ಇದರಿಂದ ಜಿಲ್ಲೆಯ ನಿಗಮಕ್ಕೆ ಒಟ್ಟು 40 ಕೋಟಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆಯೆಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ: 55 ದಿನಗಳ ಬಳಿಕ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೆಎಸ್‌ ಆರ್‌ಟಿಸಿ, ಖಾಸಗಿ ಬಸ್‌ ಸಂಚಾರಕ್ಕೆ ಹಲವು ನಿಬಂಧನೆ ವಿಧಿಸಿ ಅವಕಾಶ ಮಾಡಿಕೊಡಲಾಗಿ ದೆ. ಆದರೂ ಜಿಲ್ಲೆಯಲ್ಲಿ ಕೆಎಸ್‌ಆರ್‌ ಟಿಸಿ ಬಸ್‌  ಸಂಚಾರಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ದಿಂದ ಜಿಲ್ಲೆಯಲ್ಲಿ ಬಸ್‌ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಇದುವರೆಗೂ ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿ ರಸ್ತೆಗೆ ಇಳಿದಿಲ್ಲ.

ಕೊರೊನಾ ಲಾಕ್‌ಡೌನ್‌ ಪರಿಣಾಮ ಜಿಲ್ಲೆಯಲ್ಲಿ ಕೆಎಸ್‌ ಆರ್‌ಟಿಸಿ ಬಸ್‌ ಸೌಕರ್ಯವನ್ನು ಸತತ 55 ದಿನಗಳಿಂದ ಸ್ಥಗಿತಗೊಳಿಸಿದ್ದರಿಂದ 40 ಕೋಟಿಯಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 604 ಬಸ್‌ ಇದ್ದು ನಿತ್ಯ 527  ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು.
-ವಿ.ಬಸವರಾಜ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಶಾಲೆಯನ್ನು ಹೊಸತನಕ್ಕೆ ತೆರೆಯೋಣ

ಶಾಲೆಯನ್ನು ಹೊಸತನಕ್ಕೆ ತೆರೆಯೋಣ

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

ಸೆಲಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

chinthamani-news

ರೋಗಿಗಳಿಗೆ ನೀಡುವ ಹಾಲು ಮತ್ತು ಬ್ರೆಡ್ ಕದ್ದ ಗುತ್ತಿಗೆದಾರ!

ಚಿಂತಾಮಣಿ: ನೀರಿನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಚಿಂತಾಮಣಿ: ನೀರಿನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆ

ಸಿದ್ದು ವಿರುದ್ಧ ಎಚ್ಡಿಕೆ ಹೇಳಿಕೆಗೆ ಸುಧಾಕರ್‌ ಗರಂ

ಸಿದ್ದು ವಿರುದ್ಧ ಎಚ್ಡಿಕೆ ಹೇಳಿಕೆಗೆ ಸುಧಾಕರ್‌ ಗರಂ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ನೆಟ್ಟಿಗರ ಮನಸು ಕದ್ದ ಪುಟಾಣಿ

ನೆಟ್ಟಿಗರ ಮನಸು ಕದ್ದ ಪುಟಾಣಿ

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ವೈಮಾನಿಕ ಇಂಧನಕ್ಕಿಂತಲೂ ಪೆಟ್ರೋಲ್‌-ಡೀಸೆಲ್‌ ದುಬಾರಿ!

ಕೊಂಕಣ ರೈಲ್ವೇ: 31ನೇ ಸ್ಥಾಪನ ದಿನ: ವಿದ್ಯುದೀಕರಣ ಡಿಸೆಂಬರ್‌ಗೆ ಪೂರ್ಣ

ಕೊಂಕಣ ರೈಲ್ವೇ: 31ನೇ ಸ್ಥಾಪನ ದಿನ: ವಿದ್ಯುದೀಕರಣ ಡಿಸೆಂಬರ್‌ಗೆ ಪೂರ್ಣ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.