ಮೊದಲ ದಿನವೇ 688 ವಿದ್ಯಾರ್ಥಿಗಳು ಗೈರು


Team Udayavani, Jun 26, 2020, 7:20 AM IST

modala-dina

ಚಿಕ್ಕಬಳ್ಳಾಪುರ: ಕೋವಿಡ್‌ 19 ಸಂಕಷ್ಟದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪೋಷಕರಲ್ಲಿ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾದ್ಯಂತ ಗುರುವಾರ 64 ಕೇಂದ್ರಗಳಲ್ಲಿ ಯಾವುದೇ ಗೊಂದಲಗಳಿಗೆ  ಅವಕಾಶ ಇಲ್ಲದೇ ನಿರಾತಂಕವಾಗಿ ನಡೆದಿದ್ದು, ಮೊದಲ ದಿನ ನಡೆದ ಆಂಗ್ಲ ವಿಷಯದ ಪರೀಕ್ಷೆಗೆ ನೋಂದಣಿಯಾಗಿದ್ದ 16,345 ಪೈಕಿ 15,657 ವಿದ್ಯಾರ್ಥಿಗಳು ಪರೀಕ್ಷೆ ಬರೆದು 688 ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷೆಗೆ ಮುನ್ನೆಚ್ಚರಿಕೆ  ಕ್ರಮಗಳನ್ನು ಕೈಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ, ದ್ವಿತೀಯ ಪಿಯುಸಿ ಆಂಗ್ಲ ವಿಷಯದ ಪರೀಕ್ಷೆಯಲ್ಲಿ ಆದ ಹಲವು ಗೊಂದಲಗಳಿಂದ ಎಚ್ಚೆತ್ತಿಕೊಂಡು ಸುಗಮ, ಶಾಂತಿಯುತವಾಗಿ ನಡೆಸಿತು.

ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್‌: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಇಲಾಖೆ ವ್ಯವಸ್ಥೆ ಮಾಡಿದ್ದ ಸಾರಿಗೆ ಬಸ್‌ಗಳಲ್ಲಿ ಬೆಳಗ್ಗೆ 8:30ಕ್ಕೆ ಪರೀಕ್ಷಾ ಕೇಂದ್ರಗಳನ್ನು ತಲುಪಿದ್ದ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಆಶಾ  ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಒಳಪಟ್ಟು ಬಳಿಕ ಪರೀಕ್ಷಾ ಕೇಂದ್ರಗಳಿಗೆ ತೆರಳಿದರು. ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ವರೆಗೂ ಪರೀಕ್ಷೆ ಸುಗಮವಾಗಿ ನಡೆಯಿತು. ಪರೀಕ್ಷಾ ಕೊಠಡಿಗಳಲ್ಲಿ ಪ್ರತಿ  ಕೊಠಡಿಗೆ 18 ರಿಂದ 20 ಮಕ್ಕಳನ್ನು ಕೂರಿಸಲಾಗಿತ್ತು. ಪ್ರತಿ ಕೇಂದ್ರದಲ್ಲಿ ಸ್ಕೌಟ್ಸ್‌ ಅಂಡ್‌ ಗೈಡ್‌ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾರ್ಗ ದರ್ಶನ ನೀಡಿ ಸುಗಮ ಪರೀಕ್ಷೆಗೆ ಸಹಕರಿಸಿದರು.

ಡೀಸಿ, ಸಿಇಒ, ಎಸ್ಪಿ ಭೇಟಿ: ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಿಗೆ ಡೀಸಿ ಆರ್‌.ಲತಾ, ಜಿಪಂ ಸಿಇಒ ಫೌಝೀಯಾ ತರುನ್ನುಮ್‌, ಎಸ್ಪಿ ಜಿ.ಕೆ. ಮಿಥುನ್‌ ಕುಮಾರ್‌ ತೆರಳಿ ಮೂಲ ಸೌಕರ್ಯ ಪರಿಶೀಲಿಸಿದರು. ಕಳೆದೊಂದು ತಿಂಗಳಿಂದ  ಪರೀಕ್ಷೆಗಾಗಿ ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌, ಅಧಿಕಾರಿ ಗಳೊಂದಿಗೆ ಸರಣಿ ಸಭೆ ನಡೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಸೋಂಕು ಹರಡದಂತೆ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.ಕಂಟೈನ್ಮೆಂಟ್‌ ಪ್ರದೇಶಗಳಿಂದ  10 ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆ ಬರೆದರು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೊದಲ ದಿನ ನಡೆದ ಆಂಗ್ಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ನೋಂದಾ ಯಿತರಲ್ಲಿ 688 ವಿದ್ಯಾರ್ಥಿಗಳು ಗೈರಾಗಿದ್ದರು. ಜ್ವರ, ಕೆಮ್ಮು ಮತ್ತಿತರ ಕಾರಣಗಳಿಗೆ 10 ವಿದ್ಯಾರ್ಥಿಗಳಿಗೆ  ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಸಲಾಯಿತು.
-ಎಸ್‌.ಜಿ.ನಾಗೇಶ್‌, ಡಿಡಿಪಿಐ

ಟಾಪ್ ನ್ಯೂಸ್

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

gyanvapi mosque case: court will hear muslim side first

ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆ

Untitled-1

ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

ಆಫ್ರಿಕಾ: ಮಹಿಳೆಯನ್ನು ಕೊಂದ ಟಗರು, ಮೂರು ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

sangeetha sringeri spoke about her experience of 777 charlie

ಚಾರ್ಲಿ ಚಾನ್ಸ್‌ ಸಿಕ್ಕಿದ್ದು ಮಿಸ್‌ ಇಂಡಿಯಾ ಗೆದ್ದಂಗಿತ್ತು!: ಸಂಗೀತಾ ಶೃಂಗೇರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರು ಎದೆಗುಂದಬಾರದು: ಎಂಟಿಬಿ

ರೈತರು ಎದೆಗುಂದಬಾರದು: ಎಂಟಿಬಿ

ಜಲಾಶಯ ಹತ್ತಲು ಹೋಗಿ ಜಾರಿ ಬಿದ್ದ ಯುವಕ; ವಿಡಿಯೋ ವೈರಲ್

ಜಲಾಶಯದ ಗೋಡೆ ಹತ್ತಲು ಹೋಗಿ ಜಾರಿ ಬಿದ್ದ ಯುವಕ; ವಿಡಿಯೋ ವೈರಲ್

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ

ಗೂಳೂರಿನಲ್ಲಿ  ವೈಭವದ ಹೂವಿನ ಕರಗ

ಗೂಳೂರಿನಲ್ಲಿ ವೈಭವದ ಹೂವಿನ ಕರಗ

ಚಿಕ್ಕಬಳ್ಳಾಪುರಕ್ಕೆ ಇಎಸ್‌ಐ ಆಸ್ಪತ್ರೆ ಮಂಜೂರು

ಚಿಕ್ಕಬಳ್ಳಾಪುರಕ್ಕೆ ಇಎಸ್‌ಐ ಆಸ್ಪತ್ರೆ ಮಂಜೂರು

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

ಎಲ್ಲೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೊರಕೆ ಭೇಟಿ : ಸ್ಥಳೀಯರ ಮಧ್ಯೆ ಮಾತಿನ ಚಕಮಕಿ

ಎಲ್ಲೂರು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೊರಕೆ ಭೇಟಿ : ಸ್ಥಳೀಯರ ಮಧ್ಯೆ ಮಾತಿನ ಚಕಮಕಿ

ಎಲ್ಲಿ ನೋಡಿದರಲ್ಲಿ ಕಸವೋ ಕಸ!

ಎಲ್ಲಿ ನೋಡಿದರಲ್ಲಿ ಕಸವೋ ಕಸ!

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

reservation

ಮೀಸಲಾತಿಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನೆ

ಯೋಗರಾಜ್ ಭಟ್ಟರ ಕೈಯಲ್ಲಿ ಗಿರಿಕಥೆ ಹಾಡು

ಯೋಗರಾಜ್ ಭಟ್ಟರ ಕೈಯಲ್ಲಿ ಗಿರಿಕಥೆ ಹಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.