ಸೋಂಕಿತರಿಂದ ಹಣ, ಸರ್ಕಾರಕ್ಕೂ ಬಿಲ್‌ ಸಲ್ಲಿಕೆ


Team Udayavani, Oct 2, 2020, 1:42 PM IST

ಸೋಂಕಿತರಿಂದ ಹಣ, ಸರ್ಕಾರಕ್ಕೂ ಬಿಲ್‌ ಸಲ್ಲಿಕೆ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಕೋವಿಡ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ನಾಗರಿಕರಿಂದ ಕೇಳಿ ಬರುತ್ತಿರುವ ಬೆನ್ನಲ್ಲೇ ಕೋವಿಡ್ ಸೋಂಕಿತರಿಂದಲೂ ಹಣ ಪಡೆದು ಸರ್ಕಾರಕ್ಕೂ ಬಿಲ್‌ ಸಲ್ಲಿಕೆ ಮಾಡಿರುವ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಯ ದೋಖಾ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಸೋಂಕಿತರಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆಯಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಉಚಿತ ಚಿಕಿತ್ಸೆ ನೀಡಿ ಅದರ ವೆಚ್ಚವನ್ನ ಆಯುಷ್ಮಾನ್‌ ಭಾರತಹಾಗೂ ಆರೋಗ್ಯಕರ್ನಾಟಕ ಯೋಜನೆಯಡಿ ಭರಿಸುತ್ತೇವೆ ಎಂದು ಸರ್ಕಾರದ ಆಶ್ವಾಸನೆಯನ್ನು ಬಂಡವಾಳ ಮಾಡಿಕೊಂಡ ಖಾಸಗಿ ಆಸ್ಪತ್ರೆ ವೈದ್ಯರು ಮಾನವೀಯತೆ ಮರೆತುಕೊರೊನಾ ಸೋಂಕಿತರ ಬಳಿ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.

ದಾಖಲಾತಿ ಸಲ್ಲಿಕೆ: ಸುರಕ್ಷಾ ಆರೋಗ್ಯ ರಕ್ಷಾ ಯೋಜನೆಯಡಿ ನೋಂದಾಯಿಸಿಕೊಂಡ ಚಿಕ್ಕಬಳ್ಳಾಪುರ ನಗರದ ಅನನ್ಯ ಖಾಸಗಿ ಆಸ್ಪತ್ರೆಗೆ ಕೋವಿಡ್ ಸೋಂಕಿತರನ್ನ ಸ್ವತಃ ಜಿಲ್ಲಾಡಳಿತವೇ ದಾಖಲು ಮಾಡಿತ್ತು. ಸೋಂಕಿತರಿಂದಲೂ ಹಣ ಪಡೆದು ಸರ್ಕಾರಕ್ಕೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಬಿಲ್‌ ಪಾವತಿಸುವಂತೆ ದಾಖಲಾತಿಗಳನ್ನ ಸಲ್ಲಿಸಿಕೊಂಡಿದ್ದಾರೆ.

ವಾಪಸ್‌ ಮಾಡುವುದಾಗಿ ಭರವಸೆ: ಅನನ್ಯ ಆಸ್ಪತ್ರೆಯಲ್ಲಿ 35 ಕೋವಿಡ್ ಸೋಂಕಿತರನ್ನ ಸರ್ಕಾರ ದಾಖಲಿಸಿದೆ ಎನ್ನಲಾಗಿದ್ದು, ಇದರಲ್ಲಿ12 ಮಂದಿಯ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಎಬಿಎಆರ್ಸ್ಗೆಗೆ ದಾಖಲೆಗಳನ್ನ ಸಲ್ಲಿಸಿಕೊಂಡಿದ್ದಾರೆ. ಕೋವಿಡ್ ಸೋಂಕಿತರು ಆಸ್ಪತ್ರೆಯವರು ತಮ್ಮ ಬಳಿ ಹಣ ಪಡೆದಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ ಸಭೆ ನಡೆಸಿ ತನಿಖೆ ನಡೆಸಿದಾಗ ಆಸ್ಪತ್ರೆಯ ಮಾಲೀಕ ಕೋವಿಡ್ ಸೋಂಕಿತರಿಂದ ಪಡೆದ ಹಣವನ್ನು ವಾಪಸ್ಸು ಮಾಡುವುದಾಗಿ ಭರವಸೆ ನೀಡಿದ್ದಾರೆ.

ದಾಖಲೆ ಸಂಗ್ರಹ: ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಇಂದಿರಾ ಕಬಾಡೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಸುವರ್ಣ ಆರೋಗ್ಯ ಟ್ರಸ್ಟ್‌ನ ಅಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಬಳ್ಳಾಪುರ ನಗರದ ಅನನ್ಯ ಆಸ್ಪತ್ರೆಗೆ ಭೇಟಿ ನೀಡಿ ಸೋಂಕಿತರ ಮಾಹಿತಿ ಪಡೆದು ದಾಖಲೆ ಸಂಗ್ರಹಿಸಿದ್ದಾರೆ.

ಕೆಲವರಿಗೆ ಹಣ ವಾಪಸ್‌ : ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾಕಬಾಡೆ ಅವರನ್ನು ಉದಯವಾಣಿ ಸಂಪರ್ಕಿಸಿದಾಗ, ನಗರದ ಅನನ್ಯ ಆಸ್ಪತ್ರೆಯಲ್ಲಿ ದಾಖಲಾದ ಸೋಂಕಿತರಿಂದ ಹಣ ಪಡೆದುಕೊಂಡಿರುವುದಾಗಿ ಸ್ವತಃ ಆಸ್ಪತ್ರೆಯವರು ತಪ್ಪೊಪ್ಪಿಕೊಂಡಿದ್ದಾರೆ.ಕೆಲವರಿಗೆ ಹಣವಾಪಸ್‌ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ನಮಗೆ 12 ಜನರಿಂದ ಬಂದ ದೂರಿನ ಅನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿಚಾರಣೆ ಮಾಡಲಾಗಿದೆ. ಈ ಸಂಬಂಧ ಸಮಗ್ರ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

Mass confinement for poor pregnant women

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

ನರೇಗಾ ಯೋಜನೆ ಸದಳಕೆ ಮಾಡಿಕೊಳ್ಳಿ

ನರೇಗಾ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

27park

ಕೆರೆಯಾಗಿ ಬದಲಾದ ಮಕ್ಕಳ ಆಟದ ಪಾರ್ಕ್

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಅಫ್ಘಾನ್‌-ಸ್ಕಾಟ್ಲೆಂಡ್‌: ಸಮಬಲರ ಸೆಣಸಾಟ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

“ಅಲ್ಪ ಪ್ರಮಾಣ’ದ ಡ್ರಗ್ಸ್‌ ಹೊಂದಿದ್ದರೆ ಅಪರಾಧವಲ್ಲ?

“ಅಲ್ಪ ಪ್ರಮಾಣ’ದ ಡ್ರಗ್ಸ್‌ ಹೊಂದಿದ್ದರೆ ಅಪರಾಧವಲ್ಲ?

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಪೇಜಾವರ ಶ್ರೀಗಳ ಭೇಟಿ ಮಾಡಿದ ವಿಹಿಂಪ ಅಧ್ಯಕ್ಷ

ಪೇಜಾವರ ಶ್ರೀಗಳ ಭೇಟಿ ಮಾಡಿದ ವಿಹಿಂಪ ಅಧ್ಯಕ್ಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.