Udayavni Special

ಪೊಲೀಸರ ಬೆಂಗಾವಲಲ್ಲಿ 10 ಬಸ್‌ ಸಂಚಾರ


Team Udayavani, Dec 15, 2020, 2:48 PM IST

ಪೊಲೀಸರ ಬೆಂಗಾವಲಲ್ಲಿ 10 ಬಸ್‌ ಸಂಚಾರ

ಚಿಕ್ಕಬಳ್ಳಾಪುರ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿಸಬೇಕೆಂದು ಆಗ್ರಹಿಸಿ ನಡೆಯು ತ್ತಿದ್ದ ಮುಷ್ಕರ ಅಂತ್ಯಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಕೇವಲ 10 ಬಸ್‌ ಸಂಚಾರ ಆರಂಭಿಸಲಾಗಿದೆ.

ಸಾರಿಗೆ ನೌಕರರು ಮಂಡಿಸಿದ 10 ಬೇಡಿಕೆಗಳಲ್ಲಿ ಸರ್ಕಾರ 09 ಬೇಡಿಕೆ ಈಡೇರಿಸಲು ಆಶ್ವಾಸನೆ ನೀಡಿದರೂ ಜಿಲ್ಲೆಯಲ್ಲಿ ಸಾರಿಗೆ ನೌಕರರು ಪರಿಪೂರ್ಣವಾಗಿ ಮುಷ್ಕರ ಅಂತ್ಯಗೊಳಿಸಿರಲಿಲ್ಲ. ಈ ಮಧ್ಯೆ ಸಾರಿಗೆ ಸಂಸ್ಥೆಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ಅವರು ಪೊಲೀಸ್‌ ಇಲಾಖೆಯ ಸಹಕಾರದಿಂದ ಕೇವಲ 10 ಬಸ್‌ ಸಂಚಾರ ಆರಂಭಿಸಿದ್ದರು.

ಜಿಲ್ಲೆಯ ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ಮಾರ್ಗದಲ್ಲಿ ತಲಾ ಮೂರು ಹಾಗೂ ದೊಡ್ಡ ಬಳ್ಳಾಪುರ ವಿಭಾಗದಲ್ಲಿ 4 ಬಸ್‌ ಸಹಿತ 10 ಬಸ್‌ ಸಂಚಾರ ಆರಂಭಿಸಲಾಗಿತ್ತು. ಆದರೂ, ಜಿಲ್ಲಾ ಕೇಂದ್ರದ ಬಸ್‌ ನಿಲ್ದಾಣ ಮಾತ್ರ ಪ್ರಯಾಣಿಕರು ಮತ್ತು ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಾಜ್ಯ ಸರ್ಕಾರ ಮತ್ತುಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಪಾಲಿಸುವ ಸಲುವಾಗಿ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸವಾಲು ತೆಗೆದುಕೊಂಡು ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನು ಬಸ್‌ನಲ್ಲಿ ನಿಯೋಜಿಸಿ ಸಂಚಾರ ಆರಂಭಿಸಿದ್ದರು.

ಖಾಸಗಿ ಬಸ್‌ನಲ್ಲಿ ಸಂಚಾರ: ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಸಾರಿಗೆ ಬಸ್‌ ಸೌಲಭ್ಯ ಇಲ್ಲದೇಪ್ರಯಾಣಿಕರು ಖಾಸಗಿ ಬಸ್‌ ಅವಲಂಬಿಸಿದ್ದರು. ಜತೆಗೆ ಕ್ಯಾಬ್‌ ಹಾಗೂ ಆಟೋ ಗಳಲ್ಲಿಯೂಪ್ರಯಾಣಿಕರು ಅನಿವಾರ್ಯ ವಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರಿಗೆ ಬಸ್‌ ಇಲ್ಲದೇ ಕೆಲ ಖಾಸಗಿ ಬಸ್‌ಗಳಲ್ಲಿ ಅಧಿಕ ಟಿಕೆಟ್‌ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಸಂಜೆಯಾಗು ತ್ತಲೇ ಮುಷ್ಕರ ವಾಪಸ್‌ ಪಡೆದಿದ್ದರಿಂದ ಕೆಲವೆಡೆ ಯತಾಸ್ಥಿತಿಯಲ್ಲಿ ಬಸ್‌ಗಳು ಸಂಚಾರಕ್ಕೆ ಮುಂದಾದವು.

ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಸಹಕಾರದಿಂದ 10 ಬಸ್‌ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೆವು.ಯಾವುದೇ ತೊಂದರೆಯಾಗಿಲ್ಲ. ನೌಕರರ ಸಮಸ್ಯೆ ಬಗೆಹರಿಯುತ್ತದೆ ಎಂಬ ವಿಶ್ವಾಸವಿದೆ. ಬಸವರಾಜು, ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ

ಟಾಪ್ ನ್ಯೂಸ್

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಅಂಗನವಾಡಿ ಕಾರ್ಯಕರ್ತೆಯರು ಉದ್ಯೋಗ ವ್ಯಾಪ್ತಿಗೆ!

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಈಶಾನ್ಯಕ್ಕೆ 6 ಆರು ಹೊಸ ವಾಯುಮಾರ್ಗ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಆರ್ಯನ್‌ ಡ್ರಗ್‌ ಕೇಸ್‌: ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ನಾಯಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಚಿಂತಾಮಣಿ: ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

Poor Diet- Notice to Guidelines

ಕಳಪೆ ಆಹಾರ: ಗುತಿಗೆದಾರನಿಗೆ ನೋಟಿಸ್‌

ಕೋರಪರ್ತಿ ಕೆರೆ ಅಭಿವೃದ್ಧಿಗೆ ಕೋಟಿ ರೂ. ಮೀಸಲು

ಕೋರಪರ್ತಿ ಕೆರೆ ಅಭಿವೃದ್ಧಿಗೆ ಕೋಟಿ ರೂ. ಮೀಸಲು

17gudi1_1710bg_2

ವರಾಹಗಿರಿ ಬೆಟ್ಟ ಪ್ರವಾಸಿ ತಾಣ ಮಾಡಲು ಸಿದ್ಧ

gvhfghft

ಚಿಂತಾಮಣಿ : ಅಪರಿಚಿತ ವಾಹನ ಡಿಕ್ಕಿ | ಪಾದಚಾರಿ ಸಾವು

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಬದಲಾವಣೆಯನ್ನೇ ಭರವಸೆಯಾಗಿಸಿದ ಶಿಕ್ಷಣ

ಅಯೋಧ್ಯೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಭೇಟಿ

ಅಯೋಧ್ಯೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಭೇಟಿ

ಉ.ಪ್ರ. ಕಾಂಗ್ರೆಸ್‌ ಟಿಕೆಟ್‌ನಲ್ಲಿ ಶೇ.40 ಮಹಿಳೆಯರಿಗೆ ಮೀಸಲು

ಉ.ಪ್ರ. ಕಾಂಗ್ರೆಸ್‌ ಟಿಕೆಟ್‌ನಲ್ಲಿ ಶೇ.40 ಮಹಿಳೆಯರಿಗೆ ಮೀಸಲು

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

ಬಾಂಗ್ಲಾ: ಹಿಂದೂಗಳ ಮೇಲೆ ದಾಳಿ; ಇತಿಹಾಸದ ಕಹಿನೆನಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.