ಬರದಿಂದ ಕಂಗೆಟ್ಟಿದ್ದರೂ ನೆರೆ ಪರಿಹಾರ ನಿಧಿಗೆ 51.41 ಲಕ್ಷ ಕೊಟ್ಟ ಚಿಕ್ಕಬಳ್ಳಾಪುರ ಜನತೆ

ರಾಜ್ಯಕ್ಕೆ ಮಾದರಿಯಾಗಿ ನಿಂತ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ

Team Udayavani, Aug 22, 2019, 12:59 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಜನ ಬರದಿಂದ ಕಂಗೆಟ್ಟಿದ್ದರೂ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ 51.41ಲಕ್ಷ ರೂ.ಗಳ ದೇಣಿಗೆ ನೀಡುವ ಮೂಲಕ‌ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲೂ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ದೇಣಿಗೆ ಸಂಗ್ರಹಿಸಿದಾಗ ಉದಾರವಾಗಿ ಸ್ಪಂದಿಸುವ ಮೂಲಕ ಇತರ ಜಿಲ್ಲೆಗಳಿಗೂ ಮಾದರಿಯಾಗಿದ್ದಾರೆ.

ಶಾಶ್ವತ ಬರಪೀಡಿತ ಜಿಲ್ಲೆಯಿಂದ ನೆರೆ ಪರಿಹಾರಕ್ಕಾಗಿ ಸಂಗ್ರಹವಾದ ಒಟ್ಟು ಹಣ 51.41 ಲಕ್ಷಗಳಾಗಿದ್ದರೆ, ಅದರಲ್ಲಿ ಸಾರ್ವಜನಿಕರು ನೀಡಿರುವ ಹಣವೇ 32.56 ಲಕ್ಷ ರೂ.ಗಳು. ಉಳಿದಂತೆ ಪಂಚಾಯಿತಿಗಳ ಸ್ವಂತ ಆದಾಯದಿಂದ ನೀಡಿದ ಹಣ 17.85 ಲಕ್ಷ ರೂ.ಗಳು.

ನೆರೆ ಪೀಡಿತ ಜನರ ಸಂಕಷ್ಟಕ್ಕೆ ಹೆಗಲು ನೀಡಿದ  ಜಿಲ್ಲೆಯ ಜನತೆ ಮಾನವೀಯ ಗುಣಕ್ಕೆ ವಿಶೇಷ   ಅಭಿನಂದನೆ ಸಲ್ಲಿಸುತ್ತೇನೆ. ಜಿಲ್ಲಾಡಳಿತ, ನಗರಸಭೆ, ಪುರಸಭೆ, ಪಂಚಾಯಿತಿಗಳ ಜನಪ್ರತಿನಿಧಿಗಳು ಧೇಣಿಗೆ ಸಂಗ್ರಹಕ್ಕೆ ಕೈ ಜೋಡಿಸಿದ್ದು ಈ ಹಣವನ್ನು ಮುಖ್ಯಮಂತ್ರಿಗಳ ನೆರೆ ಪರಿಹಾರ ನಿಧಿಗೆ  ನೀಡಲಾಗುವುದೆಂದು ಜಿಪಂ ಅಧ್ಯಕ್ಷ ಹೆಚ್.ವಿ.ಮಂಜುನಾಥ ಉದಯವಾಣಿಗೆ ತಿಳಿಸಿದ್ದಾರೆ.  ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್, ಜಿಪಂ ನೂತನ ಸಿಇಒ ಬಿ.ಫೌಜಿಯಾ ತರುನ್ನಮ್  ಕೂಡ   ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ