ಹರಿಯದ ಚರಂಡಿ ನೀರು; ಚೇಳೂರು 1ನೇ ವಾರ್ಡಲ್ಲಿ ದುರ್ನಾತ
Team Udayavani, May 23, 2021, 6:09 PM IST
ಚೇಳೂರು: ಗ್ರಾಮವನ್ನು ಸರ್ಕಾರ ಈಗಾಗಲೇ ಪಟ್ಟಣ ಪಂಚಾಯ್ತಿ ಹಾಗೂ ತಾಲೂಕು ಕೇಂದ್ರವಾಗಿಘೋಷಣೆ ಮಾಡಿದ್ದು, ಇದುವರೆಗೂ ಮೂಲ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾಡಿಲ್ಲ.ಗ್ರಾಮದ ಜನರು ಈಗಲೂ ಕೊಳಚೆ ನೀರು, ದುರ್ನಾತಬೀರುತ್ತಿರುವ ಕಸದ ಮಧ್ಯೆ ಬದುಕುವಂತಾಗಿದೆ.
ಇದಕ್ಕೆ ಉದಾಹರಣೆ ಒಂದನೇ ವಾರ್ಡ್. ಗ್ರಾಮದ ಒಂದೇ ವಾರ್ಡ್‌ನಲ್ಲಿರುವಚಿಂತಾಮಣಿ ರಸ್ತೆಯ ಎಪಿಎಂಸಿ ಮಾರುಕಟ್ಟೆಮುಂಭಾಗದ ಶಾಂತಿನಗರ ಬಡಾವಣೆ ನಿವಾಸಿಗಳಜೀವನ ನರಕವಾಗಿದೆ. ಮನೆ ಸುತ್ತಮುತ್ತಲಿನಪರಿಸರ ಸ್ವತ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡುವ ಪಿಡಿಒ, ಗ್ರಾಪಂ ಸದಸ್ಯರು, ಈ ಕೊರೊನಾಸಂದರ್ಭದಲ್ಲಾದ್ರೂ ಚರಂಡಿಗಳನ್ನು ಸ್ವತ್ಛಗೊಳಿಸಿ,ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಕಸ ವಿಲೇವಾರಿ ಮಾಡಿಸಲು ಕ್ರಮಕೈಗೊಂಡಿಲ್ಲ.
ದುರ್ನಾತ: ಚಿಂತಾಮಣಿ ಮುಖ್ಯರಸ್ತೆ ಪಕ್ಕದಎರಡೂ ಬದಿಯ ಚರಂಡಿ ಗಿಡಗಂಟಿ ಬೆಳೆದು,ಹೂಳು ತುಂಬಿಕೊಂಡು ಮುಚ್ಚಿ ಹೋಗಿದೆ. ಇದರಿಂದ ಮಳೆ ಹಾಗೂ ಮನೆ ಬಳಕೆಯ ನೀರುಸರಾಗವಾಗಿ ಹರಿಯದೇ ಮುಖ್ಯರಸ್ತೆಯಲ್ಲಿನಿಲ್ಲುತ್ತಿದೆ. ಇದರ ಜೊತೆಗೆ ಕಸ ಕೊಳೆತು ಈಗದುರ್ನಾತ ಬೀರುತ್ತಿದೆ.
ರಾತ್ರಿಯಾದ್ರೆ ಸೊಳ್ಳೆಕಾಟ: ಚರಂಡಿ ನೀರುಸರಾಗವಾಗಿ ಹರಿಯದೇ, ಮಡುಗಟ್ಟಿ ನಿಂತಿರುವಕಾರಣ ಸೊಳ್ಳೆಗಳ ಕಾಟ ಏಳು ತೀರದಾಗಿದೆ.
ಈಗಮಳೆಗಾಲ ಪ್ರಾರಂಭವಾಗಿದ್ದು, ಕೊಳಚೆ ನೀರಿನಜೊತೆಗೆ ಮಳೆ ನೀರು ಸೇರಿಕೊಂಡರೆ ಸೊಳ್ಳೆಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈಗಾಗಲೇಕೊರೊನಾದಿಂದ ಬೆಡ್ ಸಿಗದೇ ಜನ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸೊಳ್ಳೆಕಚ್ಚಿ ಡೆಂ à, ಚಿಕೂನ್‌ಗುನ್ಯಾ ಮುಂತಾದಸಾಂಕ್ರಾಮಿಕ ರೋಗ ಬಂದರೆ ಚಿಕಿತ್ಸೆ ಪಡೆಯಲುಜನ ಎಲ್ಲಿಗೆ ಹೋಗುವುದು ಎಂಬ ಆತಂಕ ಇದೆ.
ಈ ಬಗ್ಗೆ ಸ್ಥಳೀಯ ಆಡಳಿತ ಸೂಕ್ತಕ್ರಮ ಕೈಗೊಳ್ಳಬೇಕಿದೆ.
ಮೂಗುಮುಚ್ಚಿಕೊಂಡು ಓಡಾಡಬೇಕು: ಚರಂಡಿಮುಚ್ಚಿಹೋಗಿ ವರ್ಷಗಳೇ ಕಳೆದಿದೆ. ಆಗಲೂಕೊಳಚೆ ನೀರು ರಸ್ತೆ, ಖಾಲಿ ನಿವೇಶನ, ಮನೆಯಅಂಗಳದಲ್ಲಿ ಮಡುಗಟ್ಟಿ ನಿಂತಿದೆ. ಕೊಳಚೆ ನೀರಿನಲ್ಲಿ ಪ್ಲಾಸ್ಟಿಕ್, ಮಾಂಸದ ತ್ಯಾಜ್ಯ, ಹಸಿ ಕಸ ಸೇರಿಕೊಂಡು ದುರ್ನಾತ ಬೀರುತ್ತದೆ. ಗಾಳಿ ಬೀಸಿದ್ರೆ ಸಾಕುಮನೆಯಲ್ಲಿ ಕೂರಲಾಗದ ಮಟ್ಟಿಗೆ ದುರ್ವಾಸನೆ ಬೀರುತ್ತದೆ. ಮೂಗು ಮುಚ್ಚಿಕೊಂಡುಓಡಾಡಬೇಕಿದೆ. ಆರೋಗ್ಯವಂತ ಮನುಷ್ಯ ಒಂದುವೇಳೆ ಈ ಬಡಾವಣೆಗೆ ಬಂದರೆ ಅನಾರೋಗ್ಯಕ್ಕೆಒಳಗಾಗುತ್ತಾನೆ ಎಂದು ಬಡಾವಣೆ ನಿವಾಸಿಇಂದ್ರಜಾಲಂ ಆರ್.ಮಧುಸೂದನ್ ತಮ್ಮ ಅಳಲುತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ
ಕೆಲಸಕಿದ್ದ ಮನೆಯಲ್ಲಿ ನಗನಾಣ್ಯ ಕದ್ದ ತಾಯಿ-ಮಗಳು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಿನಲ್ಲಿ ವಂಚನೆ: ದೂರು ದಾಖಲು
ವೃದ್ಧೆ ಕೈಕಾಲು ಕಟ್ಟಿ 10 ಲಕ್ಷ ನಗದು, 100 ಗ್ರಾಂ ಚಿನ್ನ ದೋಚಿದವರ ಸೆರೆ
ರಾಜ್ಯಸಭೆಗೆ ಡಾ.ಡಿ. ವೀರೇಂದ್ರ ಹೆಗ್ಗಡೆ ನಾಮನಿರ್ದೇಶನ: ಹರ್ಷ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ