
ಬಾರದ 108, ಹೊಂಡಕ್ಕೆ ಬಿದ್ದ ಮಕ್ಕಳಿಬ್ಬರು ಸಾವು ; ಆಸ್ಪತ್ರೆಯಲ್ಲಿ ಯುವಕರಿಂದ ದಾಂಧಲೆ
Team Udayavani, Jan 25, 2021, 5:09 PM IST

ಚಿಂತಾಮಣಿ: ಕೃಷಿ ಹೊಂಡಕ್ಕೆ ಕಾಲುಜಾರಿ ಬಿದ್ದ ಇಬ್ಬರು ಬಾಲಕರನ್ನು ಪೋಷಕರು ಮೇಲೆತ್ತಿ 108 ಕರೆ ಮಾಡಿ ಗಂಟೆಗಳೇ ಕಳೆದರೂ ಬಾರದ ಕಾರಣ ಹಳೆ ಟೆಂಪೋದಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಟೆಂಪೋ ಕೆಟ್ಟು ನಿಂತಿದ್ದು, ಬೇಗನೇ ತಪಾಸಣೆ ಮಾಡಿದ್ದರೆ ಮಕ್ಕಳು ಬದುಕುತ್ತಿದ್ದರು. 108 ಬಾರದಿರುವುದು ಹಾಗೂ ವೈದ್ಯರ ನಿರ್ಲಕ್ಷ್ಯವೇ ಮಕ್ಕಳ ಸಾವಿಗೆ ಕಾರಣ ಎಂದು ಪೋಷಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.
ಮೂಗಲ ಮರಿಯ ಶಿವರಾಜ್ ಅವರ ಮಗ ಚರಣ್(10) ಮತ್ತು ರಾಮಾಂಜಿ ಅವರ ಮಗ ತೇಜಸ್ (11) ಮೃತರು.
ಆಗಿದ್ದೇನು?: ತಾಲೂಕಿನ ಮೂಗಲಮರಿ ಗ್ರಾಮದ ಹೊರ ವಲಯ ದಲ್ಲಿಯ ಕೃಷಿ ಹೊಂಡಕ್ಕೆ ಮಕ್ಕಳು ಬಿದ್ದಿದ್ದರು. 108
ಬರದಿದ್ದರಿಂದ ಟೆಂಪೋದಲ್ಲಿ ಕರೆದ್ಯೊಯುತ್ತಿದ್ದ ವೇಳೆ ಕೆಟ್ಟು ನಿಂತಿದ್ದು, ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತಲುಪಿದ ವೇಳೆ
ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಮದ ಯುವಕರು ನಗರದ ಸಾರ್ವಜನಿಕ ಆಸ್ಪತ್ರೆಯ ಕಿಟಕಿ, ಗಾಜು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟ್ಯಂತರ ರೂ. ವೆಚ್ಚ ಮಾಡಿ ತುರ್ತು ಸೇವೆಗೆಂದು ಸರ್ಕಾರ ನೇಮಿಸಿರುವ 108 ವಾಹನಗಳು ತಾಲೂಕಿನಲ್ಲಿ ಬಹಳ ಮಂದಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹಲವು ಪ್ರಾಣಹಾನಿ ಆಗಿರುವ ಪ್ರಸಂಗಗಳು ಹೆಚ್ಚಿವೆ.
ಇದನ್ನೂ ಓದಿ:ಕೆಜಿಎಫ್: ಮೂರ್ತಿ ಭಂಜನ, ಕತ್ತಿ ಹಿಡಿದು ತಿರುಗಿದ ದುಷ್ಕರ್ಮಿ
ಆಸ್ಪತ್ರೆಯಿಂದ ಕ್ಷಣಾರ್ಧದಲ್ಲಿ ನಾಪತ್ತೆ
ಮಕ್ಕಳನ್ನು ಆಸ್ಪತ್ರೆಗೆ ಕರೆ ತಂದಾಗ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮದ ಯುವಕರು, ಆಸ್ಪತ್ರೆಯ ಕಿಟಕಿ ಬಾಗಿಲುಗಳ ಗಾಜು ಮತ್ತು ಸಹಾಯವಾಣಿ ಕೇಂದ್ರದ ಗಾಜುಗಳನ್ನು ಒಡೆದು ವೈದ್ಯರನ್ನು ಯುವಕರು ನಿಂದಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಆಸ್ಪತ್ರೆಯಿಂದ ಹೊರಟು ಹೋಗಿದ್ದಾರೆಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.
ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ರಿಪೇರಿ
ದಾಂಧಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಲು ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಸಿಸಿ ಕ್ಯಾಮೆರಾ ಕೆಟ್ಟಿರುವುದು ಬೆಳಕಿಗೆ ಬಂದಿದೆ. ಇದು ಆಸ್ಪತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
108 ಇರುವುದೇ ಮೂರು, ಒಂದು ಕೆಟ್ಟಿದೆ
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್, ತಾಲೂಕಿನಲ್ಲಿ 108 ವಾಹನಗಳು ಇರುವುದು ಮೂರು. ಅದರಲ್ಲಿ ಒಂದು ಕೆಟ್ಟಿರುವುದರಿಂದ ಉಳಿದವುಗಳಿಗೆ ಬಿಡುವಿರುವುದಿಲ್ಲ. ಯಾವುದೇ ಕರೆಗೆ ಸ್ಪಂದಿಸಿ ಅಲ್ಲಿಗೆ ತೆರಳಬೇಕಾದರೆ ತಡವಾಗುತ್ತದೆ. ಆ್ಯಂಬುಲೆನ್ಸ್ ಬಾರದ ಕೋಪಕ್ಕೆ ಆಸ್ಪತ್ರೆಯ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಮುಳಬಾಗಿಲಿನಲ್ಲಿ ಏಳು 108 ವಾಹನಗಳಿವೆ. ಆದರೆ ನಮ್ಮ ತಾಲೂಕಿಗೆ ಕೇವಲ ಮೂರೇ ಮೂರು ವಾಹನಗಳಿರುವುದು ದುರದೃಷ್ಟಕರ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ

ಹಡಪದ ಸಮಾಜ ಕುಲಶಾಸ್ತ್ರ ಅಧ್ಯಯನ,ನಿಗಮ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಬಜೆಟ್ ಶಕ್ತಿ ತುಂಬಿದೆ: ಬಾಲಚಂದ್ರ ಜಾರಕಿಹೊಳಿ

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ದೇಶದ ಆರ್ಥಿಕ ಅಭಿವೃದ್ದಿಗೆ ಪೂರಕವಾದ ಬಜೆಟ್:ಗೃಹ ಸಚಿವ ಆರಗ ಜ್ಞಾನೇಂದ್ರ

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

ಹಡಪದ ಸಮಾಜ ಕುಲಶಾಸ್ತ್ರ ಅಧ್ಯಯನ,ನಿಗಮ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

ಮೊಮ್ಮಗನಿಂದಾಗಿ ಮನೆಯಿಂದ ಹೊರಬಿದ್ದ ಅಜ್ಜಿಯನ್ನು ಮತ್ತೆ ಮನೆಗೆ ಸೇರಿಸಿದ ಮಧುಗಿರಿ ನ್ಯಾಯಾಲಯ

ದೇವರದಾಸಿಮಯ್ಯ ಹಟಗಾರ ಜಗದ್ಗುರುಗಳ ಸಂಭ್ರಮದ ಪುರಪ್ರವೇಶ