Udayavni Special

8 ವರ್ಷಗಳ ಬಳಿಕ ಮೈದುಂಬಿದ ಚಿತ್ರಾವತಿ


Team Udayavani, Oct 17, 2019, 3:00 AM IST

8varshagala

ಸೋಮೇನಹಳ್ಳಿ: ಹೋಬಳಿಯಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ಗೊಟರುಗಳು ತುಂಬಿದ್ದು 8 ವರ್ಷಗಳ ಬಳಿಕ ಚಿತ್ರಾವತಿ ನದಿ ಮೈದುಂಬಿ ಹರಿಯುತ್ತಿದೆ. ನದಿ ಪಾತ್ರದಲ್ಲಿ ಮರಳಿಗಾಗಿ ತೆಗೆದಿದ್ದ ಎಲ್ಲಾ ಗುಂಡಿಗಳು ನೀರಿನಿಂದಾಗಿ ಮುಚ್ಚಿ ಹೋಗಿದ್ದು ತನ್ನ ಪಥದಲ್ಲಿಯೇ ಹರಿಯುತ್ತಿದೆ.

ಉರುಳಿ ಬಿದ್ದ ವಿದ್ಯುತ್‌ ಕಂಬ: ಕಮ್ಮಡಿಕೆ ಮತ್ತು ಮಿಟ್ಟೇಮರಿ ಗ್ರಾಮಗಳಿಗೆ ಹೋಗುವ ರಸ್ತೆಗೆ ಚಿತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಮೇಲೆ ನೀರು ಹರಿದಿದೆ. ನದಿ ದಡದಲ್ಲಿದ್ದ ವಿದ್ಯುತ್‌ ಕಂಬಗಳು ನೀರಿನ ರಭಸಕ್ಕೆ ಉರುಳಿ ಬಿದ್ದಿದ್ದು ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಸ್ಥರು ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ನಲ್ಲಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ ಭಾರೀ ಪ್ರಮಾಣದಲ್ಲಿ ತುಂಬಿ ಕೋಡಿ ಹೋಗುತ್ತಿದ್ದು ಡ್ಯಾಂನ್ನು ವೀಕ್ಷಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಚಿತ್ರಾವತಿ ನದಿಗೆ ದಯಾಲ ಮಡಗು ನೀರು ಹೆಚ್ಚಿನ ಪ್ರಮಾಣದಲ್ಲಿ ಬಂದು ಬರುತ್ತಿದೆ.

ಕಾಲುವೆಯಲ್ಲಿ ಗಿಡಗಂಟಿ: ನದಿ ನೀರು ಗಿಡಗಳ ಮೇಲೆ ಮರಗಳ ಮೇಲೆ ಹರಿಯುತ್ತಿರುವುದರಿಂದ ಮರಗಿಡಗಳು ನೆಲಕ್ಕೆ ಬಾಗಿವೆ. ದೇವಗಾನಹಳ್ಳಿ ಕ್ರಾಸ್‌ನಿಂದ ಸೋಮೇನಹಳ್ಳಿ ಕೆರೆಯವರೆಗೂ ನಿರ್ಮಿಸಿರುವ ಪೋಷಕ ಕಾಲುವೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ಅಲ್ಲದೇ, ಕಾಲುವೆಯಲ್ಲಿ ಹಳೆಯ ಬಟ್ಟೆ ಬರೆಗಳು, ಫ್ಲಾಸ್ಟಿಕ್‌ ಮುಂತಾದ ತ್ಯಾಜ್ಯ ತುಂಬಿಕೊಂಡಿದ್ದು ನೀರು ಕಾಲುವೆಯಲ್ಲಿ ಹರಿಯದೆ ಸೋಮೇನಹಳ್ಳಿ ಕೆರೆಗೆ ನೀರು ಬಾರದಂತಾಗಿದೆ.

ಕುಂಟೆ, ಬಾವಿಗಳಿಗೆ ನೀರು: ಮಳೆ ನೀರು ಸೋಮೇನಹಳ್ಳಿ ಸುತ್ತಮುತ್ತಲಿನ ಕೆರೆ, ಕುಂಟೆಗಳಲ್ಲಿ ತುಂಬಿದೆ. ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡ, ಸಣ್ಣಪುಟ್ಟ ಚೆಕ್‌ ಡ್ಯಾಂಗಳಲ್ಲಿ ನೀರು ನಿಂತಿದೆ.

ಚರಂಡಿ ನೀರು ರಸ್ತೆಗೆ: ಸೋಮೇನಹಳ್ಳಿ ಗ್ರಾಮದ ಕೆಲವು ಬೀದಿಗಳಲ್ಲಿ ಒಳ ಚರಂಡಿಗಳನ್ನು ಗ್ರಾಪಂ ಸ್ವಚ್ಛಗೊಳಿಸದ ಕಾರಣ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದಾಗಿ ತ್ಯಾಜ್ಯ ರಸ್ತೆ ಮೇಲೆಲ್ಲಾ ಹರಿದಿದೆ.

* ರಮೇಶ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿಗೆ 31ನೇ ಬಲಿ: 35 ವರ್ಷದ ಯುವಕ ಇಂದು ಸಾವು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿಗೆ 31ನೇ ಬಲಿ: 35 ವರ್ಷದ ಯುವಕ ಇಂದು ಸಾವು

ಇತಿಹಾಸ ನಿರ್ಮಾಣದ ಹಿಂದಿದೆ ಅವಿರತ ಪರಿಶ್ರಮ

ಇತಿಹಾಸ ನಿರ್ಮಾಣದ ಹಿಂದಿದೆ ಅವಿರತ ಪರಿಶ್ರಮ

ಯಾದಗಿರಿ ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟಿತೆ ಕೋವಿಡ್-19 ಸೋಂಕು?

ಯಾದಗಿರಿ ಜಿಲ್ಲಾಡಳಿತ ಭವನಕ್ಕೂ ಕಾಲಿಟ್ಟಿತೆ ಕೋವಿಡ್-19 ಸೋಂಕು?

ಗಲಾಟೆ ತಡೆಯಲು ಬಂದ ಪೊಲೀಸರಿಗೆ ರಾಡ್ ನಿಂದ ಹೊಡೆದು ಹಲ್ಲೆ: ಆರೋಪಿಗೆ ಥಳಿಸಿದ ಸಾರ್ವಜನಿಕರು

ಗಲಾಟೆ ತಡೆಯಲು ಬಂದ ಪೊಲೀಸರಿಗೆ ರಾಡ್ ನಿಂದ ಹೊಡೆದು ಹಲ್ಲೆ: ಆರೋಪಿಗೆ ಥಳಿಸಿದ ಸಾರ್ವಜನಿಕರು

ಕೋವಿಡ್ 19; ಐಸಿಸ್ ನಿಂದ ಆನ್ ಲೈನ್ ಮೂಲಕ ಉಗ್ರರ ನೇಮಕಾತಿ; ಭದ್ರತಾ ಸಂಸ್ಥೆ

ಕೋವಿಡ್ 19; ಐಸಿಸ್ ನಿಂದ ಆನ್ ಲೈನ್ ಮೂಲಕ ಉಗ್ರರ ನೇಮಕಾತಿ; ಭದ್ರತಾ ಸಂಸ್ಥೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuvagrama

ಕೋವಿಡ್‌ 19 ತಡೆಗೆ ಗ್ರಾಮ ಆರೋಗ್ಯ ಯುವಪಡೆ

august-kere

ಆಗಸ್ಟ್‌ ಅಂತ್ಯದೊಳಗೆ ಕೆರೆಗಳಿಗೆ ನೀರು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸ್ಪೋಟ : ಮತ್ತೆ 32 ಹೊಸ ಕೇಸ್ ಪತ್ತೆ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸ್ಪೋಟ : ಮತ್ತೆ 32 ಹೊಸ ಕೇಸ್ ಪತ್ತೆ!

sani ckb

ಕುಡಿವ ನೀರು, ನೈರ್ಮಲ್ಯಕ್ಕೆ ಒತ್ತು ಕೊಡಿ

angha-utpanna

ಸಂಘಗಳ ಉತ್ಪನ್ನಕ್ಕೆ ಮಾರುಕಟ್ಟೆ ಅತ್ಯಗತ್ಯ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

ಕಾರ್ಗಿಲ್‌ ಶೇರ್‌ ಶಾ “ವಿಕ್ರಮ್‌ ಬಾತ್ರಾ”

10July-07

16 ಪಾಸಿಟಿವ್‌ ಪ್ರಕರಣ ದೃಢ: 631ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ಎಸ್ಎಸ್ಎಲ್ ಸಿ ಪರೀಕ್ಷೆ ಯಶಸ್ವಿ ಹಿನ್ನಲೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸುರೇಶ್ ಕುಮಾರ್

ಆಕಾಶಕ್ಕೆ ಏಣಿ : ಕನಸುಗಳಿಗೆ ಬೇಲಿ ಯಾಕೆ

ಆಕಾಶಕ್ಕೆ ಏಣಿ : ಕನಸುಗಳಿಗೆ ಬೇಲಿ ಯಾಕೆ

10July-06

ಮತ್ತೆ ಒಬ್ಬರಿಗೆ ಕೋವಿಡ್ ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.