Udayavni Special

ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ಸಂಪೂರ್ಣ ನಿರ್ಬಂಧ


Team Udayavani, Apr 18, 2021, 2:43 PM IST

Complete ban on fairs and festivals in the district

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎಲ್ಲೂಯಾವುದೇ ರೀತಿಯ ಜನ ಜಾತ್ರೆ, ಉತ್ಸವಗಳಿಗೆಅವಕಾಶ ನೀಡಬಾರದು. ಸಂತೆ, ಮಾರುಕಟ್ಟೆಗಳಲ್ಲಿಹೆಚ್ಚು ಜನ ಸಂದಣಿ ಆಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದವಿಡಿಯೋ ಸಂವಾದದ ಬಳಿಕ ಅಧಿಕಾರಿಗಳೊಂದಿಗೆನಡೆಸಿದ ಸಭೆಯಲ್ಲಿ ಮಾತನಾಡಿ, ಸರ್ಕಾರಈಗಾಗಲೇ ಎಲ್ಲಾ ರೀತಿಯ ಜಾತ್ರೆ, ಉತ್ಸವಗಳಿಗೆನಿರ್ಬಂಧ ಹೇರಿದೆ. ಆದರೂ ಕೆಲವು ಕಡೆ ಜಾತ್ರೆ,ಉತ್ಸವಗಳು ನಡೆಯುತ್ತಿರುವುದು ಕಂಡುಬಂದಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ತಾಲೂಕು ನೋಡಲ್‌ಅಧಿಕಾರಿಗಳು, ತಹಶೀಲ್ದಾರ್‌ಗಳು ಮತ್ತು ಆರೋಗ್ಯಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಮದುವೆ ಸೇರಿದಂತೆ ಇತರೆ ಶುಭಕಾರ್ಯಗಳಿಗೆ ಹೆಚ್ಚಿನ ಜನ ಸೇರುತ್ತಿದ್ದು, ಇದರಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕು.

ಮಾರ್ಗಸೂಚಿಯನ್ವಯ ನಿಗದಿಪಡಿಸಿದ ಜನರಷ್ಟೇಸೇರಬೇಕು. ಇದನ್ನು ಉಲ್ಲಂಘಿಸುವ ಕಲ್ಯಾಣಮಂಟಪಗಳಿಗೆ ನೋಟಿಸ್‌ ನೀಡಿ, ಅವುಗಳನ್ನುಮುಚ್ಚಿಸಬೇಕು. ನಿಗದಿತ ಸಂಖ್ಯೆಯಲ್ಲಿ ಜನ ಸೇರಿಸಿಮದುವೆಗೆ ಅನುಮತಿ ಬೇಕಿದ್ದಲ್ಲಿ ಅಷ್ಟು ಮಂದಿಗೆಇಲಾಖೆಯಿಂದ ಪಾಸ್‌ ವ್ಯವಸ್ಥೆಯನ್ನು ಮಾಡಬೇಕುಎಂದು ಸೂಚಿಸಿದರು.

ಎಲ್ಲಾ ರೀತಿಯ ಸಹಕಾರ ನೀಡಿ: ಸರಕಾರಸೂಚಿಸಿದ ಮಾರ್ಗಸೂಚಿ ಹಾಗೂ ನಿಯಂತ್ರಣಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಮಾಡುವ ಮೂಲಕ ಜಿಲ್ಲೆಯಲ್ಲಿ ಸೋಂಕುನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಆರ್‌ಟಿಪಿಸಿಆರ್‌ ಟೆಸ್ಟ್‌ಗಳನ್ನು ಹೆಚ್ಚಳಮಾಡಬೇಕು.

ಜನರು ಮಾಸ್ಕ್ನ್ನು ಕಡ್ಡಾಯವಾಗಿಧರಿಸಬೇಕು. ಒಂದು ವೇಳೆ ಕೊರೊನಾದಿಂದಮೃತಪಟ್ಟರೆ ಅವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಎಲ್ಲಾ ರೀತಿಯ ಸಹಕಾರನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಪರಿಣಾಮಕಾರಿ ಅನುಷ್ಠಾನ ಮಾಡಿ:ಸರ್ಕಾರದಿಂದ ಕೊರೊನಾ ನಿಯಂತ್ರಣ ಸಂಬಂಧಈಗಾಗಲೇ ಹಲವು ಆದೇಶಗಳನ್ನುಹೊರಡಿಸಲಾಗಿದೆ. ಆದರೆ, ಅದು ಕಾಗದಕ್ಕೆಮಾತ್ರವೇ ಸೀಮಿತವಾಗಬಾರದು.

ಪ್ರತಿಯೊಂದುಆದೇಶ, ಸೂಚನೆ, ನಿರ್ದೇಶನಗಳನ್ನುಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು.ಇದರಲ್ಲಿ ಯಾವುದೇ ಲೋಪದೋಷಗಳುಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳನ್ನೇಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಪಿ.ಶಿವಶಂಕರ್‌, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌,ಅಪರ ಜಿಲ್ಲಾಧಿಕಾರಿ ಎಚ್‌.ಅಮರೇಶ್‌,ಉಪವಿಭಾಗಾಧಿಕಾರಿ ಎ.ಎನ್‌.ರಘುನಂದನ್‌,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಇಂದಿರಾ ಆರ್‌.ಕಬಾಡೆ, ಜಿಲ್ಲಾ ಕ್ಷಯ ರೋಗನಿರ್ಮೂಲನಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ರಮೇಶ್‌ ಹಾಗೂಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Responsibility of the Minister of Health

ಆರೋಗ್ಯ ಸಚಿವರ ಜವಾಬ್ದಾರಿ ಮತ್ತೂಬ್ಬರಿಗೆ ಹಂಚಿಕೆ

vehicle service to help the affected

ಸೋಂಕಿತರ ನೆರವಿಗೆ ಉಚಿತ ವಾಹನ ಸೇವೆ

Fake diamond stone

ನಕಲಿ ವಜ್ರದಕಲ್ಲು ಮಾರಾಟಕ್ಕೆ ಯತ್ನ

There is no shortage of corona vaccines

ಚಿಕ್ಕಬಳ್ಳಾಪುರ: ಕೊರೊನಾ ಲಸಿಕೆಗೆ ಕೊರತೆ ಇಲ್ಲ

covid effect in chikkaballapura

ಕೋವಿಡ್‌ ಆಸ್ಪತ್ರೆ ಮುಂದೆ ನರಳಾಡಿದ ಸೋಂಕಿತ ವ್ಯಕ್ತಿ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.