ಡಿಸಿಸಿ ಬ್ಯಾಂಕ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ರಮೇಶ್‌ಕುಮಾರ್‌ರಿಂದ ಡಿಸಿಸಿ ಬ್ಯಾಂಕ್‌-ಕೋಚಿಮುಲ್‌ ರಾಜಕೀಯ ದುರುದ್ದೇಶ: ಸಚಿವ

Team Udayavani, Oct 21, 2021, 12:23 PM IST

corruption in the DCC Bank – Allegation

ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಸ್ಥಾಪನೆ ಆಗಿರುವ ಡಿಸಿಸಿ ಬ್ಯಾಂಕಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶೀಘ್ರ ಜೈಲಿಗೆ ಕಳುಹಿಸಲಾ ಗುವುದೆಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಕೋ ಲಾರ-ಚಿಕ್ಕಬಳ್ಳಾಪುರ ಜಿಲ್ಲೆಯನ್ನು ತಮ್ಮ ಕಪಿ ಮುಷ್ಠಿಯಲ್ಲಿ ಇಟ್ಟುಕೊಂಡು ರಾಜಕೀಯ ಬೇಳೆ ಬೇಯಿ ಸಿಕೊಳ್ಳಲು ಹೊರಟಿ ರುವ ವಿಧಾನಸಭೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ರ ತಂತ್ರಗಾರಿಕೆ ನಡೆಯುವುದಿಲ್ಲ. ಡಿಸಿಸಿ ಬ್ಯಾಂಕಿಗೆ ರಮೇಶ್‌ಕುಮಾರ್‌ ಅವರು ರಿಂಗ್‌ ಮಾಸ್ಟರ್‌ ಆಗಿದ್ದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೇವಲ ಆ್ಯಕ್ಟರ್‌ ಆಗಿದ್ದಾರೆ ಎಂದು ಲೇವಡಿ ಮಾಡಿದರು.

 ದುರ್ಬಳಕೆ: ಅವಳಿ ಜಿಲ್ಲೆಯಲ್ಲಿರುವ ಡಿಸಿಸಿ ಬ್ಯಾಂಕ್‌ , ಕೋಚಿಮುಲ್‌ ಸಂಸ್ಥೆಯನ್ನು ದುರ್ಬಳಕೆ ಮಾಡಿ ಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಮಾಜಿ ಸ್ಪೀಕರ್‌ ದುರುದ್ದೇಶ ಹೊಂದಿದ್ದಾರೆ. ಡಿಸಿಸಿ ಬ್ಯಾಂಕ್‌ ನಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿದೆ. ಸಹಕಾರಿ ಇಲಾಖೆ ಅಧಿಕಾರಿಗಳು ಭ್ರಷ್ಟರೊಂದಿಗೆ ಕೈಜೋಡಿಸಿ ದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಸಹಕಾರ ಸಚಿವ ಎಚ್‌.ಟಿ. ಸೋಮಶೇ ಖರ್‌ ಅವರು ಎಲ್ಲಾ ಮಾಹಿತಿ ತಿಳಿದಿದ್ದಾರೆ.

ಬ್ಯಾಂಕ್‌ನಲ್ಲಿ ನಡೆದಿರುವ ಭ್ರಷ್ಟಾ ಚಾರದ ಕುರಿತು ತನಿಖೆ ನಡೆಸಲು ಕ್ರಮ ಕೈಗೊಂಡರೆ ಅದರ ವಿರುದ್ಧ ನ್ಯಾಯಾಲ ಯದ ಮೊರೆ ಹೋಗಿ ತನಿಖೆಗೆ ತಡೆಯಾ ಜ್ಞೆ ತಂದಿದ್ದಾರೆ. ಇದರಿಂದ ಅರ್ಥವಾಗು ತ್ತಿದೆ ಯಾರು ಕಳ್ಳರೆಂದು ಎಂದು ಕಿಡಿಕಾರಿದರು.

ಇದನ್ನೂ ಓದಿ;- ಎಸ್‌ಟಿ ವರ್ಗಕ್ಕೆ ಶೇ.7.5 ಮೀಸಲು ಕಲ್ಪಿಸಿ

ಶಕುನಿ ಪಾತ್ರ ವಹಿಸುತ್ತಿರುವ ಶಿವಶಂಕರರೆಡ್ಡಿ: ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಪ್ರಯತ್ನ ಮಾಡಿ ಇದೀಗ ಅದನ್ನು ವಿರೋಧಿಸುವ ಮೂಲಕ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರು ಶಕುನಿಯಂತೆ ವರ್ತಿಸುತ್ತಿ ದ್ದಾರೆ. ಜಿಲ್ಲೆಯಲ್ಲಿ ನನಗೆ ಎಲ್ಲಿ ಒಳ್ಳೆಯ ಹೆಸರು ಬರುತ್ತದೆ ಎಂಬ ಏಕೈಕ ಕಾರಣಕ್ಕಾಗಿ ರಾಜಕೀಯ ದುರುದ್ದೇಶದಿಂದ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಮಾಡಲು ಹೊರಟಿದ್ದಾರೆ ಎಂದರು.

 ಶ್ರೀನಿವಾಸ್‌ಗೌಡರಿಗೆ ಮಕ್ಮಲ್‌ ಟೋಪಿ: ಕೋಲಾರ ಕ್ಷೇತ್ರ ಶಾಸಕ ಕೆ.ಶ್ರೀನಿವಾಸ್‌ಗೌಡ ಅವರು ಒಂದು ಬಾರಿಗೆ ರಮೇಶ್‌ಕುಮಾರ್‌ರನ್ನು ನಂಬಿ ಕೆಟ್ಟಿದ್ದಾರೆ. ಮತ್ತೂಮ್ಮೆ ನಂಬುವುದಕ್ಕೆ ಹೊರಟಿದ್ದಾರೆ. ಹೇಗೋ ಅವರನ್ನು ಮಕ್ಮಲ್‌ ಟೋಪಿ ಹಾಕಿದ್ದಾರೆ ಜತೆಗೆ ಡಿಸಿಸಿ ಬ್ಯಾಂಕಿನಿಂದ ಕೋಲಾರ ಕ್ಷೇತ್ರದ ಜನರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಆಮಿಷ ಒಡ್ಡಿದ್ದಾರೆ.

ರಾಜ್ಯ ದಲ್ಲಿ ಕೋಲಾರ ಡಿಸಿಸಿ ಬ್ಯಾಂಕನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊ ಳ್ಳುತ್ತಿದ್ದಾರೆ. ಸಾಲ ವಿತರಣೆ ಯಲ್ಲೂ ತಾರತಮ್ಯ ನೀತಿ ಅನುಸರಿಸುತ್ತಿದ್ದು ಬ್ಯಾಂಕಿನ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ಶಾಮೀಲಾಗಿರು ವವರನ್ನು ಜೈಲಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಕೆ.ಎಚ್‌.ಮುನಿಯಪ್ಪರನ್ನು ಸೋಲಿಸಿದ ಮಹಾನುಭಾವರು: ಕೋಲಾರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ರಮೇಶ್‌ಕುಮಾರ್‌ ಮತ್ತಿತರರನ್ನು ಕಾಂಗ್ರೆಸ್‌ಗೆ ಕರೆ ತಂದರು. ಇವರೆಲ್ಲಾ ಸೇರಿ ಅವರನ್ನೇ ಸೋಲಿಸಿದರು. (ಕೆ.ಎಚ್‌.ಮುನಿಯಪ್ಪ) ಇಂತಹವರ ವಿರುದ್ಧ ಕ್ರಮ ಜರುಗಿಸುವ ಬದಲಿಗೆ ಅವರನ್ನು ಕಾಂಗ್ರೆಸ್‌ ಶಿಸ್ತು ಸಮಿತಿಯಲ್ಲಿ ಸ್ಥಾನಮಾನ ಕೊಟ್ಟಿರುವುದು ಆ ಪಕ್ಷದ ದಿವಾಳಿ ತನಕ್ಕೆ ಸಾಕ್ಷಿ.

ಇದು ಕಾಂಗ್ರೆಸ್‌ ಹಣೆಬರಹ ಎಂದು ವ್ಯಂಗ್ಯ ಮಾಡಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಉತ್ತರಾಖಂಡದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸಚಿವರೊಂದಿಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಎಲ್ಲಾ ಪ್ರಯತ್ನ ಮಾಡಿ ಕನ್ನಡಿಗ ರನ್ನು ಸುರಕ್ಷಿತವಾಗಿ ಕರೆ ತರುತ್ತೇವೆ ಎಂದ ಸಚಿವರು, ಮುಖ್ಯಮಂತ್ರಿಗಳು ಹಾನ್‌ಗಲ್‌ ಉಪ ಚುನಾವಣೆಗೆ ಜವಾಬ್ದಾರಿ ನೀಡಿದ್ದಾರೆ. ಅದನ್ನು ನಿರ್ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ರಮೇಶ್‌ಕುಮಾರ್‌-ಶಿವಶಂಕರರೆಡ್ಡಿ ಅಡ್ಡಗಾಲು-

ಕೋಲಾರ -ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡಲು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಗಿದೆ.

ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡಲು ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಮಾಜಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ಅವರು ಅಡ್ಡಗಾಲು ಹಾಕಲು ಹೊರಟಿದ್ದಾರೆ. ಇಂತಹವರು 100 ಜನ ಅಡ್ಡ ಬಂದರೂ ಚಿಕ್ಕಬಳ್ಳಾಪುರ ಜಿಲ್ಲೆ ಜನ ಮತ್ತು ರೈತರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಶತಾಯಗತಾಯ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್‌ ಸ್ಥಾಪಿಸುವುದೇ ತನ್ನ ಮುಖ್ಯ ಗುರಿ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಟಾಪ್ ನ್ಯೂಸ್

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ತಲಪಾಡಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿ ಪರಾರಿ

ತಲಪಾಡಿ :ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿಗಾಗಿ ಶೋಧಕಾರ್ಯ

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ರಾಜ್ಯದಲ್ಲಿ ಒಮಿಕ್ರಾನ್ ಪತ್ತೆಯಾದರೆ ಬಿಗಿ ಕ್ರಮ ಖಚಿತ: ಆರ್.ಅಶೋಕ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

ಕೋವಿಡ್ ನೆಗೆಟಿವ್ ವರದಿ ಬಂದರೂ ಏಳು ದಿನ ಕ್ವಾರಂಟೈನ್ ಕಡ್ಡಾಯ: ಸಚಿವ ಸುಧಾಕರ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳೆ ನಾಶ

ಲಕ್ಷಾಂತರ ರೂ. ಬೆಳೆ ನಾಶವಾದ್ರೂ ತಿರುಗಿ ನೋಡಿಲ್ಲ..!

4nandibetta

ಚಿಕ್ಕಬಳ್ಳಾಪುರ: 3 ತಿಂಗಳ ಬಳಿಕ ಸಾರ್ವಜನಿಕರಿಗೆ ನಂದಿಬೆಟ್ಟ ಪ್ರವೇಶಕ್ಕೆ ಮುಕ್ತ

1sudhakar

ಓಮಿಕ್ರಾನ್ ಸೋಂಕಿನ ಕುರಿತು ಆತಂಕ ಬೇಡ: ಸಚಿವ ಡಾ.ಕೆ.ಸುಧಾಕರ್

ಬೆಟ್ಟ

ಅವನತಿಯ ಅಂಚಿನಲ್ಲಿ ಸುರಸದ್ಮಗಿರಿ ಬೆಟ್ಟ

election city corporation

ಅನರ್ಹತೆ ಭೀತಿಯಲಿ 7 “ಕ್ಕೆ ನಗರಸಭೆ ಸದಸ್ಯರು

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

1-sfdsf

ಮಣಿಪಾಲ: ಹಲ್ಲೆಗೊಳಗಾದ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಸಿದ್ದು ವಿರುದ್ಧ ದೂರು

ಸಿದ್ದು, ಲಾಡ್‌ ವಿರುದ್ಧ ಪೊಲೀಸರಿಗೆ ದೂರು

NEP discussion

ಎನ್‌ಇಪಿ: ಶಿಕ್ಷಣ ಸುಧಾರಣೆಗೆ ಮಹತ್ವ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ಶಾಸಕ ವಿಶ್ವನಾಥ್ ಹತ್ಯೆ ಸಂಚಿನ ಬಗ್ಗೆ ಮಾಹಿತಿಯಿಲ್ಲ: ಸಿಎಂ ಬೊಮ್ಮಾಯಿ

ತಲಪಾಡಿ : ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿ ಪರಾರಿ

ತಲಪಾಡಿ :ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ, ಆರೋಪಿಗಾಗಿ ಶೋಧಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.