ಕೋವಿಡ್‌ 19 ಲಾಕ್‌ಡೌನ್‌ನಲ್ಲಿ ಬೆಂದ ಬಾಣಸಿಗರು


Team Udayavani, May 13, 2020, 11:13 AM IST

banasigaaru

ಚಿಕ್ಕಬಳ್ಳಾಪುರ: ಕೋವಿಡ್‌ 19 ಲಾಕ್‌ಡೌನ್‌ ಪರಿಣಾಮ ಅನೇಕ ಉದ್ಯಮಗಳಿಗೆ ಹೊಡೆತ ಬಿದ್ದಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ಸಭೆ, ಸಮಾರಂಭ ಅದರಲ್ಲೂ ಶುಭ ಸಮಾರಂಭಗಳಲ್ಲಿ ಅಡುಗೆ ತಯಾರಿಸಲು ತೆರಳುತ್ತಿದ್ದ  ಬಾಣಸಿಗರ ಕೈಗಳಿಗೆ ಕೆಲಸ ಇಲ್ಲದೇ ಈಗ ಬೆಂದು ಬೆಂಡಾಗಿದ್ದಾರೆ.

ಕೋವಿಡ್‌ 19 ಸೋಂಕು ಹರಡುವುದನ್ನು ತಡೆ ಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಿ ಸಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ದೃಷ್ಟಿಯಿಂದ ಸರ್ಕಾರಗಳು  ಮದುವೆ, ನಾಮಕಾರಣ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರುವ ಜನರನ್ನು ನಿಯಂತ್ರಿಸಲು 50 ಮಂದಿಗಿಂತ ಹೆಚ್ಚು ಸೇರಬಾರದೆಂದು ಮಿತಿ ಹೇರಿರುವುದರಿಂದ ಅಡುಗೆ ತಯಾರಿಸುವ ಬಾಣಸಿಗರು ಕೆಲಸ  ಇಲ್ಲದೇ ಪರದಾಡಬೇಕಿದೆ.

3000 ಕ್ಕೂ ಅಧಿಕ ಮಂದಿ: ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮದುವೆ, ನಾಮಕಾರಣ ಮತ್ತಿತರ ಶುಭ ಕಾರ್ಯಗಳಿಗೆ ಅಡುಗೆ ತಯಾರಿಸುವ ತಂಡಗಳು ಇದ್ದು ಅಡುಗೆ ಮೇಸಿOಉಗಳ ಜೊತೆಗೆ ಅಡುಗೆ ಬಡಿಸುವ ಮಂದಿಗೂ ಲೆಕ್ಕವಿಲ್ಲ. ಪ್ರತಿ  ತಾಲೂಕಿನಲ್ಲಿ ಇಂತಹ ಗುಂಪುಗಳು ಹತ್ತಾರು ಇದ್ದು ಜಿಲ್ಲೆಯಲ್ಲಿ ಅಂದಾಜಿನ ಪ್ರಕಾರ 2,500, 3000 ಕ್ಕೂ ಅಧಿಕ ಮಂದಿ ಅಡುಗೆ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ಸತತ ಎರಡು ತಿಂಗಳಿಂದ ಕೋವಿಡ್‌ 19  ಲಾಕ್‌ಡೌನ್‌ನಿಂದ ಯಾವುದೇ ಅಡುಗೆ ತಯಾರಿಸುವ ಕಾರ್ಯ ಇಲ್ಲದೇ ಮನೆಗಳಲ್ಲಿ ಇದ್ದು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ನಿತ್ಯ ಶುಭ ಸಮಾರಂಭಗಳಲ್ಲಿ ತರಹೇವಾರಿ ಊಟ ಸಿದಪಡಿಸಿ ಬಡಿಸುವುದರ ಜೊತೆಗೆ  ತಾನು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಾಣಸಿಗರು ಹಾಗೂ ಅವರ ಸಹಾಯಕರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.

ನಮಗೂ ಕೊಡಿ ಪರಿಹಾರ: ಸರ್ಕಾರ ಇತ್ತೀಚೆಗೆ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ಸೇರಿದಂತೆ ವಿವಿಧ ವಲಯಗಳಿಗೆ ಪರಿಹಾರ ಘೋಷಿಸಿದ್ದು, ಅದರಂತೆ ಕಾರ್ಮಿಕರಾಗಿರುವ ಅಡುಗೆ ತಯಾರಿಸುವ ಬಾಣಸಿಗರನ್ನು ಹಾಗೂ ಅವರ ಸಹಾಯಕರಿಗೂ ಸರ್ಕಾರ ಪರಿಹಾರ ನೀಡಬೇಕೆಂಬ ಆಗ್ರಹವನ್ನು ಜಿಲ್ಲೆಯ ಬಾಣಸಿಗರು ಮಾಡುತ್ತಿದ್ದಾರೆ.

ಇನ್ನೂ ಶುಭ ಕಾರ್ಯಗಳಿಗೆ ಕ್ಯಾಟರಿಂಗ್‌ ಪೂರೈಕೆ ಮಾಡುತ್ತಿದ್ದವರಿಗೂ ಲಾಕ್‌ಡೌನ್‌ ಸಂಕಷ್ಟ ತಂದೊಡ್ಡಿದೆ. ಕೆಲ ಕ್ಯಾಟರಿಂಗ್‌  ಮಾಲೀಕರು, ಹತ್ತಾರು ಕೂಲಿ ಕಾರ್ಮಿಕರನ್ನು ಹೊಂದಿದ್ದು ಅವರು ಆಂಧ್ರ, ತಮಿಳುನಾಡು ಹೀಗೆ ಉತ್ತರ ಭಾರತದಿಂದ ಬಂದಿದ್ದಾರೆ. ಆದರೆ ಅವರನ್ನು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರುಗಳಿಗೆ ಕಳುಹಿಸಲಾಗದೇ ಇಲ್ಲಿಯೂ ಇಟ್ಟುಕೊಳ್ಳಲಾಗದೇ ಸಂಕಷ್ಟದಲ್ಲಿದ್ದಾರೆ.

ಸರ್ಕಾರ ಈಗಾಗಲೇ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಅದೇ ರೀತಿ ಸಭೆ, ಸಮಾರಂಭ, ಶುಭ ಕಾರ್ಯಗಳು ಇಲ್ಲದೇ ಸಂಕಷ್ಟದಲ್ಲಿರುವ ಅಡುಗೆ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನೂರಾರು  ಬಾಣಸಿಗರಿಗೂ ಸರ್ಕಾರ 5000 ಸಾವಿರ ರೂ. ನೆರವು ಕೊಡಲಿ.
-ಬಾಬು, ಗಂಜಿಗುಂಟೆ, ಅಡುಗೆ ತಯಾರಿಸುವ ಮೇಸ್ತ್ರಿ

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12 ಸಾವಿರ ಜೆಡಿಎಸ್‌ ಸದಸ್ಯತ್ವ ನೋಂದಣಿ ಮಾಡಿಸಿ

12 ಸಾವಿರ ಜೆಡಿಎಸ್‌ ಸದಸ್ಯತ್ವ ನೋಂದಣಿ ಮಾಡಿಸಿ

ಮೊದಲ ದಿನ ಶಾಲೆಗೆ 51,809 ಮಕಳು ಹಾಜರಿ

ಮೊದಲ ದಿನ ಶಾಲೆಗೆ 51,809 ಮಕಳು ಹಾಜರಿ

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

Mass confinement for poor pregnant women

ಬಡ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.