ಟೊಮೆಟೋ ಮಾರುಕಟ್ಟೆಯಲ್ಲಿ ಕೊರೊನಾ ನಿಯಮ ಉಲ್ಲಂಘನೆ
Team Udayavani, May 24, 2021, 7:12 PM IST
ಚಿಂತಾಮಣಿ: ಜಿಲ್ಲಾಡಳಿತ ಜಾರಿ ಮಾಡಿದ್ದ ನಾಲ್ಕುದಿನಗಳ ವಿಶೇಷ ಲಾಕ್‌ಡೌನ್‌ನಲ್ಲಿ ಚಿಂತಾಮಣಿಟೊಮೆಟೋ ಮಾರುಕಟ್ಟೆ ತೆರೆಯಲು ಗುರುವಾರಮತ್ತು ಭಾನುವಾರ ಅನುಮತಿ ನೀಡಲಾಗಿತ್ತು. ಅದರಂತೆ ಭಾನುವಾರ ಮಾರುಕಟ್ಟೆಯಲ್ಲಿಟೊಮೆಟೋ ಹರಾಜು ನಡೆಯಿತು.
ಆದರೆ,ರೈತರು, ವ್ಯಾಪಾರಸ್ಥರು ಕೊರೊನಾ ನಿಯಮಗಾಳಿಗೆ ತೂರಿದ್ದ ದೃಶ್ಯ ಕಂಡು ಬಂತು. ರಾಜ್ಯದವಿವಿಧ ಜಿಲ್ಲೆ, ಹೊರ ರಾಜ್ಯ ಆಂಧ್ರದಿಂದಟೊಮೆಟೋ ಮಾರುಕಟ್ಟೆಗೆ ರೈತರು ಮತ್ತುವ್ಯಾಪಾರಸ್ಥರು ಆಗಮಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಯಾವುದೇಕ್ರಮಕೈಗೊಂಡಿರಲಿಲ್ಲ. ಈ ಸಂಬಂಧ ನಗರಸಭೆ,ಎಪಿಎಂಸಿ, ತಾಲೂಕು ಆಡಳಿತ ಹಾಗೂ ಪೊಲೀಸ್‌ಅಧಿಕಾರಿಗಳು ಇತ್ತ ತಲೆಹಾಕದೆ ಇರುವುದುಅಧಿಕಾರಿಗಳ ನಿರ್ಲಕ್ಷ್ಯ ಎತ್ತಿತೋರುತ್ತದೆ.
ಇನ್ನುನೂರಕ್ಕೆ8 ರಿಂದ10 ರೂ.ಕಮೀಷನ್ ಪಡೆಯುವಟೊಮೆಟೋ ಮಂಡಿ ಮಾಲಿಕರು ತಮ್ಮಮಂಡಿಗಳಬಳಿ ಕೊರೊನಾ ನಿಯಮ ಪಾಲಿಸಲಿಲ್ಲ. ಕನಿಷ್ಠಸ್ಯಾನಿಟೈಸರ್ ಕೂಡ ಇಟ್ಟಿರಲಿಲ್ಲ. ಮಾಸ್ಕ್ ಕಡ್ಡಾಯಎಂಬಸೂಚನಾಫಲಕಹಾಕದೇರೈತರಿಗೆಯಾವುದೇಜಾಗೃತಿ ನೀಡದೆ ನಿರ್ಲಕ್ಷ್ಯ ಮಾಡಿದ್ದರು.