ಬಿರುಕು ಬಿಟ್ಟ ಬೆಳ್ಳೂಟಿಯ ಸರ್ಕಾರಿ ಶಾಲಾ ಕಟ್ಟಡ

ಮಳೆ ಬಂದರೆ ಜಲಾವೃತವಾಗುವ ಶಾಲೆ • ಪಾಠದ ಜೊತೆಗೆ ನೀರು ಹೊರ ಹಾಕುವ ಕಾಯಕ

Team Udayavani, Aug 10, 2019, 1:21 PM IST

ಶಿಡ್ಲಘಟ್ಟ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಕಲ್ಯಾಣಿಯನ್ನು ಅಭಿವೃದ್ಧಿಗೊಳಿಸಿ ಜಿಲ್ಲೆಯಲ್ಲಿ ಖ್ಯಾತಿ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಪದೋನ್ನತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆ ಗಾಲದಲ್ಲಿ ಶಾಲೆ ಸೋರುತ್ತಿದ್ದು, ವಿದ್ಯಾರ್ಥಿಗಳು ಪಾಠದ ಜೊತೆಗೆ ಮಳೆ ನೀರು ಹೊರ ಹಾಕಲು ಕಾಯಕ ಮಾಡಿಕೊಂಡಿದ್ದಾರೆ.

ಹೌದು, ಶಿಡ್ಲಘಟ್ಟ ತಾಲೂಕು ಕೇಂದ್ರದಿಂದ ಕೇವಲ ನಾಲ್ಕು ಕಿ.ಮೀ ದೂರದಲ್ಲಿರುವ ಬೆಳ್ಳೂಟಿ ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ನಿರ್ಮಿ ಸಿರುವ ಶಾಲೆಯಲ್ಲಿ 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೂರು ಮಂದಿ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.

ತಾತ್ಕಾಲಿಕ ಸ್ಥಗಿತ: ವಿಶೇಷ ಎಂದರೆ ಒಂದರಿಂದ- ಐದು ಮತ್ತು 5ರಿಂದ 8ನೇ ತರಗತಿವರೆಗೆ ಬೋಧನೆ ಮಾಡಲು ಮಂಜೂರಾತಿ ದೊರೆತರೂ ಸಹ ಕೇವಲ 2,4,5 ಹಾಗೂ 6ನೇ ತರಗತಿಗಳು ಮಾತ್ರ ನಡೆಯು ತ್ತಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ತಾತ್ಕಾಲಿಕ ವಾಗಿ 1,3 ಹಾಗೂ 7ನೇ ತರಗತಿಗಳನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಗಳನ್ನು ಅಲಂ ಕರಿಸಿದ್ದಾರೆ. ಕೆಲವರು ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಸ್ಥಾನಗಳಿಸಿದರೂ ಸಹ ಶಾಲೆ ಸ್ಥಿತಿ ಮಾತ್ರ ಶೋಚನೀಯವಾಗಿರುವುದು ದುರಂತವೇ ಸರಿ.

ನೀರು ಹೊರ ಹಾಕುವ ಕಾಯಕ: ಶಾಲೆಯ ಎರಡು ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತವೆ. ಮಕ್ಕಳಿಗೆ ಬೋಧನೆ ಮಾಡಲು ತಯಾರು ಮಾಡಿರುವ ಕಲಿಕಾ ಸಾಮಗ್ರಿಗಳು ಮಳೆಗೆ ನೆನೆದು ಹಾಳಾಗುತ್ತಿದೆ. ಜೋರಾಗಿ ಮಳೆಯಾದರೆ ಸ್ವತಃ ವಿದ್ಯಾರ್ಥಿಗಳು ಶಾಲಾ ಕೊಠಡಿಯಲ್ಲಿ ಸಂಗ್ರಹ ವಾಗುವ ನೀರು ಹೊರಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲೆಯ ಅಸ್ತಿತ್ವಕ್ಕೆ ಧಕ್ಕೆ: ಒಂದು ಕಾಲದಲ್ಲಿ ಮಾದರಿಯಾಗಿದ್ದ ಶಾಲೆಯಲ್ಲಿ ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟದ ಕೊರತೆಯೋ? ಅಥವಾ ಕೊಠಡಿಗಳ ದುಸ್ಥಿತಿಯನ್ನು ನೋಡಿ ಪೋಷಕರು ಮಕ್ಕಳನ್ನು ಶಿಡ್ಲಘಟ್ಟ ನಗರ ಮತ್ತು ಭಕ್ತರಹಳ್ಳಿಯ ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು ಶಾಲೆಯ ಅಸ್ತಿತ್ವಕ್ಕೆ ಧಕ್ಕೆ ಬರುವ ಅಪಾಯ ತಲೆದೂರಿದೆ. ಘೋಷಣೆಗೆ ಸೀಮಿತ: ಖಾಸಗಿ ಶಾಲೆಯ ಮಾದರಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸು ವುದಾಗಿ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಘೋಷಣೆ ಕೇವಲ ದಾಖ ಲೆಗೆ ಸೀಮಿತವಾಗಿದ್ದು, ಅನುಷ್ಠಾನದಲ್ಲಿ ಮರಿಚೀಕೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥರೊಬ್ಬರು ಕಳವಳ ವ್ಯಕ್ತ ಪಡಿಸಿದರು.

 

● ಎಂ.ಎ.ತಮೀಮ್‌ ಪಾಷ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ