ಕೋಟಿ ನಾಟಿ, ಜಲಾಮೃತ, ಹಸಿರು ಸಪ್ತಾಹ

ಕಲ್ಯಾಣಿ, ಕುಂಟೆಗಳ ಪುನಶ್ಚೇತನ • ವರ್ಷದಲ್ಲಿ 50 ಲಕ್ಷ ಸಸಿ ನಾಟಿ ಮಾಡುವ ಗುರಿ: ಮಂಜುನಾಥ

Team Udayavani, Jun 7, 2019, 7:24 AM IST

ಚಿಕ್ಕಬಳ್ಳಾಪುರ: ಸತತ ಆರೇಳು ವರ್ಷಗಳಿಂದ ಬರ ಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಜನ, ಜಾನು ವಾರುಗಳಿಗೆ ಕುಡಿಯುವ ನೀರು ಒದಗಿಸಲು ಅಂತ ರ್ಜಲ ಮಟ್ಟ ಸುಧಾರಣೆಗೆ ಹಾಗೂ ಪರಿಸರ ಸಮ ತೋಲನ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಜುಲೈ 11ರ ವರೆಗೂ ಹಸಿರು ಸಪ್ತಾಹ ಹಾಗೂ ಜುಲೈ 11ರಿಂದ ಜಿಲ್ಲಾದ್ಯಂತ ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮಗಳನ್ನು ಬೃಹತ್‌ ಪ್ರಮಾಣದಲ್ಲಿ ನಡೆಸಲಾಗುತ್ತದೆ ಎಂದು ಜಿಪಂ ಅಧ್ಯಕ್ಷ ಎಚ್.ವಿ.ಮಂಜುನಾಥ ತಿಳಿಸಿದರು.

ನಗರದ ಜಿಪಂನ ಮಿನಿ ಸಭಾಂಗಣದಲ್ಲಿ ಜಿಪಂ ವತಿಯಿಂದ ಆಯೋಜಿಸಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಪೂರ್ವ ಸಿದ್ಧತೆಗಳ ಕುರಿತು ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 2019 ರಿಂದ 20ರ ವರೆಗೂ ಜಲ ವರ್ಷದ ಪ್ರಯುಕ್ತ ಜಿಲ್ಲೆಯಲ್ಲಿ ಜಲಾಮೃತ ಕಾರ್ಯಕ್ರಮದಡಿ ವಿವಿಧ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಯೆಂದರು.

35 ಲಕ್ಷ ಸಸಿ ನಾಟಿಗೆ ಸಿದ್ಧ: ಜಿಲ್ಲೆಯಲ್ಲಿ ತೀವ್ರ ಬರ ಗಾಲದಿಂದ ಕುಡಿಯುವ ನೀರಿಗೆ ಹಾಗೂ ಜಾನು ವಾರುಗಳ ಮೇವಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಳಸಿ ಕೊಂಡು ಹಾಗೂ ಹಸಿರು ಕರ್ನಾಟಕ ಹಾಗೂ ಕೋಟಿ ನಾಟಿ ಕಾರ್ಯಕ್ರಮದ ಮೂಲಕ ಜಿಲ್ಲಾದ್ಯಂತ ಈ ವರ್ಷದಲ್ಲಿ ಕನಿಷ್ಠ 50 ಲಕ್ಷ ಸಸಿಗಳನ್ನು ನಾಟಿ ಮಾಡಲು ನಿರ್ಧರಿಸಲಾಗಿದೆ. ಸದ್ಯ 35 ಲಕ್ಷ ಸಸಿಗಳು ನರ್ಸರಿಗಳಲ್ಲಿ ನಾಟಿಗೆ ಸಿದ್ಧವಾಗಿವೆ ಎಂದರು.

ಜಲಮೂಲ ಸಂರಕ್ಷಣೆ: ಜನಪ್ರತಿನಿಧಿಗಳನ್ನು ಒಳ ಗೊಂಡಂತೆ ವಿವಿಧ ಇಲಾಖೆಗಳ ಮೂಲಕ ಒಂದೊಂದು ದಿನ ಸಸಿ ನೆಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕೇವಲ ಸಸಿ ನೆಡುವುದು ಮಾತ್ರ ವಲ್ಲದೇ ನಾಟಿ ಮಾಡುವ ಸಸಿಗಳ ಪೋಷಣೆಗೆ ಜಿಲ್ಲಾಡಳಿತ ಸಾಕಷ್ಟು ಚಿಂತನೆ ನಡೆಸಿದೆ. ಜನರಲ್ಲಿ ಜಲ ಸಾಕ್ಷರತೆ ಹಾಗೂ ಜಲಮೂಲಗಳ ಸಂರಕ್ಷಣೆಗೆ ಕುರಿತು ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅಂತರ್ಜಲ ಅಭಿವೃದ್ಧಿಗೆ ಪೂರಕ: ಜಲಮೂಲಗಳ ಪುನಃಶ್ವೇತನಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಟ್ಟು 236 ಕಲ್ಯಾಣಿಗಳಿದ್ದು, ಆ ಪೈಕಿ ಇದುವರೆಗೂ 70 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಸಾಕಷ್ಟು ಕಲ್ಯಾಣಿಗಳು ಐತಿಹಾಸಿಕ ಹಿನ್ನಲೆ ಹೊಂದಿವೆ. ಜೊತೆಗೆ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

500 ಚೆಕ್‌ ಡ್ಯಾಂಗೆ ಆದ್ಯತೆ: ಪ್ರತಿ ಗ್ರಾಪಂ ಹಾಗೂ ತಾಪಂ ವತಿಯಿಂದ ಸಣ್ಣ ನೀರಾವರಿ ಕೆರೆಗಳು ಕಲ್ಯಾಣಿ, ಪುಷ್ಕರಣಿ, ಕುಂಟೆ, ಕಟ್ಟಡಗಳು ಹಾಗೂ ನಾಲಾ ಬದು, ತಡೆ ಅಣೆಕಟ್ಟು ಮತ್ತು ಕಿಂಡಿ ಅಣೆಕಟ್ಟು ಹಾಗೂ ಇತರೆ ಮೇಲ್ ಮೈ ನೀರು ವೈಜ್ಞಾನಿಕವಾಗಿ ನೀರು ಸಂಗ್ರಹಿಸುವ ಬಹುಪಯೋಗಿ ಚೆಕ್‌ ಡ್ಯಾಂ ಗಳನ್ನು ಈಗಾಗಲೇ 100 ರಷ್ಟು ನಿರ್ಮಾಣವಾಗಿದ್ದು, ಇನ್ನೂ 500 ಚೆಕ್‌ ಡ್ಯಾಂಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

ಉಚಿತವಾಗಿ ಸಸಿ ವಿತರಣೆ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 35 ಲಕ್ಷ ಸಸಿಗಳನ್ನು ನೆಡಲು ತಿಳಿಸಲಾಗಿದ್ದು, ಜಿಲ್ಲೆಯಲ್ಲಿ ಮಳೆಗಾಲ ಮುಗಿಯುವ ಹೊತ್ತಿಗೆ ಜಿಲ್ಲೆಯಲ್ಲಿ 50 ಲಕ್ಷ ಸಸಿಗಳನ್ನು ನೆಡಲು ಗುರಿ ಹೊಂದಿದ್ದು, ರೈತರು ಇದರ ಲಾಭವನ್ನು ಪಡೆಯ ಬೇಕೆಂದರು.

ಕನ್ನಡಪರ, ರೈತ ಸಂಘಟನೆಗಳು, ವಿದ್ಯಾರ್ಥಿಗಳು, ಯುವಕರು, ವಾಸವಿ, ರೋಟರಿ , ಸರ್ಕಾರಿ ನೌಕರರ ಸಂಘಗಳು ಸಸಿ ನೆಡುವ ಕಾರ್ಯಕ್ರಮಗಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು. ಅರಣ್ಯ ಇಲಾಖೆ ಮೂಲಕ ಅಗತ್ಯ ಇರುವ ರೈತರಿಗೆ, ಸಂಘ, ಸಂಸ್ಥೆಗಳಿಗೆ ಉಚಿತವಾಗಿ ಸಸಿ ನೀಡಲಾಗುವುದು. ಹೆಬ್ಬೇವು, ನೇರಳೆ, ಹೊಂಗೆ, ಮಾವು, ಗೇರು, ಶ್ರೀಗಂಧ ಮರಗಳನ್ನು ನಾಟಿ ಮಾಡಲು ಸಸಿಗಳನ್ನು ವಿತರಿಸಲಾಗುವುದು. ನರೇಗಾ ಮೂಲಕ ಅದರ ಪೋಷಣೆಗೆ ಕೂಲಿ ಹಣ ನೀಡಲಾಗುತ್ತದೆ ಎಂದರು.

ಜಿಪಂ ಉಪಾಧ್ಯಕ್ಷೆ ನಿರ್ಮಲ, ಸಿಇಒ ಗುರುದತ್‌ ಹೆಗಡೆ, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ರವಿಶಂಕರ್‌, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್‌.ಜಿ.ನಾಗೇಶ್‌, ಸಾಮಾಜಿಕ ಅರಣ್ಯ ಇಲಾಖೆ ಜೆ.ಶ್ರೀನಾಥ್‌, ನರೇಗಾ ಸಹಾಯಕ ನಿರ್ದೇಶಕ ಮುನಿರಾಜು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ