ನಗರದಲ್ಲಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ

Team Udayavani, May 14, 2019, 3:00 AM IST

ಚಿಂತಾಮಣಿ: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ನಗರದಲ್ಲಿ ಇತ್ತೀಚ್ಚಿಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಬೆಳ್ಳಂ ಬೆಳ್ಳಗೆ ನಗರದ ಝಾನ್ಸಿ ಮೈದಾನ ಮತ್ತು ಹಲವು ಮುಖ್ಯ ರಸ್ತೆಗಳಲ್ಲಿ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಭಯದ ವಾತಾವರಣದಲ್ಲಿ ವಾಯು ವಿಹಾರ: ನಗರದಲ್ಲಿ ಬೆಳ್ಳಂ ಬೆಳಗ್ಗೆ ನೂರಾರು ಜನ ಮಹಿಳೆಯರು ವೃದ್ಧರು, ಮಕ್ಕಳು ಯುವತಿಯರು ಯವ‌ಕರು ಎಲ್ಲಾ ವಯೋಮಾನದವರು ನಗರದ ಝಾನ್ಸಿ ಮೈದಾನದಲ್ಲಿ ಸೇರಿದಂತೆ ಹಲವು ಮುಖ್ಯ ಬೀದಿಗಳಲ್ಲಿ ಹಾಗೂ ರಸ್ತೆ ಬದಿಯ ಫ‌ುಟ್‌ಪಾತ್‌ನಲ್ಲಿ ವಾಯುವಹಾರಕ್ಕೆ ಬರುತ್ತಿದ್ದು, ಈ ವೇಳೆ ಬೀದಿ ನಾಯಿಗಳ ಹಾವಳಿ ಇರುವುದರಿಂದ ವಾಯು ವಿಹಾರಕ್ಕೆ ಬರಲು ಯೋಚಿಸುವಂತಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ನಗರಸಭೆ ನಿರ್ಲಕ್ಷ್ಯ: ಬೆಳ್ಳಂ ಬೆಳಗ್ಗೆ ನಗರದಾದ್ಯಂತ ಬೀದಿ ನಾಯಿಗಳು ಓಡಾಡುತ್ತಿದ್ದು, ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕಾದ ನಗರಸಭೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಝಾನ್ಸಿ ಮೈದಾನದಲ್ಲಿ ಬೀದಿ ನಾಯಿಗಳು: ನಗರ ಹೃದಯ ಭಾಗದಲ್ಲಿರುವ ಝಾನ್ಸಿ ಆಟದ ಮೈದಾನಕ್ಕೆ ಮುಂಜಾನೆ ಮತ್ತು ಸಂಜೆ ವಾಯು ವಿಹಾರಕ್ಕೆ ಬರುವವರಲ್ಲಿ ವೃದ್ಧರು, ಮಕ್ಕಳು, ಮಹಿಳೆಯರು ಹೆಚ್ಚು ಇರುವುದರಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ