ಪೋಷಕರಿಗೆ ಆತಂಕದ ನಡುವೆ ಗೊಂದಲ

Team Udayavani, Apr 7, 2021, 1:52 PM IST

ಪೋಷಕರಿಗೆ ಆತಂಕದ ನಡುವೆ ಗೊಂದಲ

ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಕೋವಿಡ್ ಹಿನ್ನೆಲೆಶಾಲೆಗಳಲ್ಲಿ 1ರಿಂದ 9ನೇ ತರಗತಿವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕೋ?ಬೇಡವೋ ಎಂಬುದರ ಬಗ್ಗೆ ವ್ಯಾಪಕವಾಗಿಚರ್ಚೆಗಳು ಆರಂಭವಾಗಿದೆ. ಜಿಲ್ಲೆಯಲ್ಲಿ ಪರ-ವಿರೋಧ ನಿಲುವು ವ್ಯಕ್ತವಾಗಿದೆ.

ಪೋಷಕರು ಆತಂಕದ ನಡುವೆ ಗೊಂದಲದಲ್ಲಿ ಮುಳುಗಿದ್ದಾರೆ. ಚಿಕ್ಕಬಳ್ಳಾಪುರ ಶೈಕ್ಷಣಿಕ ಜಿಲ್ಲೆಯಾಗಿಅಭಿವೃದ್ಧಿ ಹೊಂದುತ್ತಿದೆ. ಜಿಲ್ಲೆ ಕಳೆದಸಾಲಿನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಫಲಿತಾಂಶದಲ್ಲಿ ಅಗ್ರಸ್ಥಾನ ಹೊಂದುವ ಮೂಲಕ ಐತಿಹಾಸಿಕ ಸಾಧನೆಮಾಡಿರುವುದು ಗಮನಾರ್ಹ. ಕೋವಿಡ್‌-19 ಸಂದರ್ಭದಲ್ಲಿ ಸರ್ಕಾರದ ನಿಯಮಪಾಲಿಸುವ ಮೂಲಕ ರಾಜ್ಯದ ಗಮನಸೆಳೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂಸಹ ಪರೀಕ್ಷೆ ನಡೆಸಬೇಕೋ? ಅಥವಾಬೇಡವೋ? ಎಂಬ ವಿಷಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪೋಷಕರಲ್ಲಿ ಆತಂಕ ಮನೆಮಾಡಿದೆ.

ಮಕ್ಕಳ ಆರೋಗ್ಯ, ಶೈಕ್ಷಣಿಕ ಭವಷ್ಯದ ಚಿಂತೆ: ಕಳೆದ ಸಾಲಿನಲ್ಲಿ ಕೋವಿಡ್ ಪ್ರಭಾವದಿಂದ ಪರೀಕ್ಷೆಗಳನ್ನು ನಡೆಸದೆವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದೇವೆ.ಪ್ರಸಕ್ತ ಸಾಲಿನಲ್ಲಿ ಸರಿಯಾದ ರೀತಿಯಲ್ಲಿಪಾಠ ಪ್ರವಚನಗಳು ನಡೆದಿಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಆನ್‌ಲೈನ್‌ ಮೂಲಕ ತರಗತಿ ನಡೆಸಲಾ ಗಿದೆ. ಆದರೂ, ಸಹ ವಿದ್ಯಾರ್ಥಿಗಳಕಲಿಕೆಯಲ್ಲಿ ವ್ಯಾಪಕ ಪರಿಣಾಮ ಬೀರಿದ್ದುಪ್ರಸಕ್ತ ಸಾಲಿನಲ್ಲಿಯೂ ಪರೀಕ್ಷೆ ಇಲ್ಲದೇವಿದ್ಯಾರ್ಥಿಗಳನ್ನು ಪಾಸ್‌ ಮಾಡಿದರೆಮುಂದಿನ ದಿನಗಳಲ್ಲಿ ಕಲಿಕೆಯಲ್ಲಿಹಿಂದುಳಿತ್ತಾರೆ ಎಂಬ ವಾದವನ್ನು ಖಾಸಗಿ ಶಾಲಾ ಮಂಡಳಿಯವರು ಮಾಡುತ್ತಿದ್ದಾರೆ.

ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕಭವಿಷ್ಯದ ಬಗ್ಗೆ ಚಿಂತಿತರಾಗಿರುವ ಪೋಷಕರು ರಾಜ್ಯದ ಸದ್ಯದ ಪರಿಸ್ಥಿತಿಯಿಂದಯಾವ ನಿರ್ಧಾರ ತೆಗೆದುಕೊಳ್ಳಬೇಕೆಂದುಗೊಂದಲದಲ್ಲಿ ಸಿಲುಕಿದ್ದಾರೆ.

ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಿ:ಕೋವಿಡ್‌ ಹಿನ್ನೆಲೆಯಲ್ಲಿ ಮಕ್ಕಳಿಗೆಯಾವುದೇ ತೊಂದರೆಯಾಗದಂತೆಸರ್ಕಾರ ನಿಗಾ ವಹಿಸಿದೆ. ಅದೇ ರೀತಿಶೈಕ್ಷಣಿಕ ಪ್ರಗತಿಯ ಬಗ್ಗೆಯೂ ಆದ್ಯತೆನೀಡಿದೆ. ಜತೆಗೆ ಶಾಲೆಯ ಪರಿಸ್ಥಿತಿಯಬಗ್ಗೆ ಸರ್ಕಾರ ಕಾಳಜಿ ವಹಿಸಿದೆ. ಇನ್ನು1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆಪರೀಕ್ಷೆ ನಡೆಸಬೇಕೋ ಬೇಡವೋ ಎಂಬಚರ್ಚೆ ನಡೆದಿದೆ. ಇತ್ತೀಚಿಗೆ ಶಿಕ್ಷಣ ಸಚಿವರ ಸಭೆಯಲ್ಲಿ ಚರ್ಚೆ ನಡೆದಿದೆ.ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಕ್ಕಳಆರೋಗ್ಯದ ದೃಷ್ಟಿಯಿಂದ ಪರೀಕ್ಷೆನಡೆಸುವುದು ಬೇಡವೆಂದರೇ ಇನ್ನೂಕೆಲವರು ಕೋವಿಡ್‌-19 ಮುನ್ನೆಚ್ಚರಿಕೆಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ,ಸಾಮೂಹಿಕ ಬದಲಿಗೆ ಪ್ರತ್ಯೇಕವಾಗಿ ತರಗತಿವಾರು ಪರೀಕ್ಷೆ ನಡೆಸಲಿ.

ಮಕ್ಕಳ ಯಾವ ರೀತಿಯಲ್ಲಿ ವ್ಯಾಸಂಗ ಮಾಡಿದ್ದಾರೆ. ಏನು ಓದುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಪರೀಕ್ಷೆ ನಡೆಸಬೇಕು. ಕೋವಿಡ್ ಹಿನ್ನೆಲೆಯಲ್ಲಿಸರ್ಕಾರಿ, ಖಾಸಗಿ ಶಾಲಾ ಆಡಳಿತಮಂಡಳಿ ತರಗತಿವಾರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು. ಶೋಭಾ ಶಶಿಕುಮಾರ್, ಪೋಷಕಿ

1ರಿಂದ 9ನೇ ತರಗತಿ ಪರೀಕ್ಷೆ ರದ್ದು ಮಾಡಿದಾಗ ಶಿಕ್ಷಕರಿಗೆ ವಿದ್ಯಾರ್ಥಿಗಳಕಲಿಕೆ ಬಗ್ಗೆ ತೀರ್ಮಾನಿಸಲು ಸಾಧ್ಯವಿಲ್ಲ.ಪರೀಕ್ಷೆ ರದ್ದಾದಲ್ಲಿ ಮಗುವಿನ ಕಲಿಕೆದೋಷ ಪತ್ತೆಹಚ್ಚಿ ಅದನ್ನು ತಿದ್ದಲು ಶಿಕ್ಷಕರಿಗೆ ಅಸಾಧ್ಯ. ವಿದ್ಯಾರ್ಥಿಗಳ ಶೈಕ್ಷಣಿಕಭವಿಷ್ಯಕ್ಕಾಗಿ ಪರೀಕ್ಷೆಗೆ ಸರ್ಕಾರ ಅನುವು ಮಾಡಿಕೊಡಬೇಕು. ಮೊಹ್ಮದ್ ತಮೀಮ್ ಅನ್ಸಾರಿ, ಮುಖ್ಯೋಪಾಧ್ಯಾಯ, ದಿ ಕ್ರೇಸೆಂಟ್

ಟಾಪ್ ನ್ಯೂಸ್

ಭೂಕುಸಿತ: ಹಲವು ಮನೆಗಳು ಅಪಾಯದಲ್ಲಿ

ಭೂಕುಸಿತ: ಹಲವು ಮನೆಗಳು ಅಪಾಯದಲ್ಲಿ

ಕೆಳಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಂಟೈನರ್‌ ಲಾರಿ

ಕೆಳಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಂಟೈನರ್‌ ಲಾರಿ

ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ 

ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ 

ಆ.11-17ರ ವರೆಗೆ ಎಲ್ಲ ಸಿಬಂದಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ

ಆ.11-17ರ ವರೆಗೆ ಎಲ್ಲ ಸಿಬಂದಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ತತ್ವಪದದಲ್ಲಿ ಶರೀಫ‌ರು ಜೀವಂತ: ಸಚಿವ ಸುನಿಲ್‌ ಕುಮಾರ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌

ಇಂಗ್ಲೆಂಡ್‌ 284; ಭಾರತಕ್ಕೆ 132 ರನ್‌ ಲೀಡ್‌: 4 ವಿಕೆಟ್‌ ಉರುಳಿಸಿದ ಸಿರಾಜ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-15

2 ತಿಂಗಳಲ್ಲಿ ಎಕೋ ಥೀಮ್‌ ಪಾರ್ಕ್‌ ಕಾಮಗಾರಿ ಪೂರ್ಣ

ಕೆಂಪೇಗೌಡ ಜಯಂತಿಗೆ ಜವಳಿನಗರಿ ಅದ್ದೂರಿ ಸಿದ್ಧತೆ

ಕೆಂಪೇಗೌಡ ಜಯಂತಿಗೆ ಜವಳಿನಗರಿ ಅದ್ದೂರಿ ಸಿದ್ಧತೆ

ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ನಾಟಕದ ಮೂಲಕ ಜಾಗೃತಿ

ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ನಾಟಕದ ಮೂಲಕ ಜಾಗೃತಿ

ನಾಗರೆಡ್ಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಿ

ನಾಗರೆಡ್ಡಿಹಳ್ಳಿಯಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಿ

ನಿಗದಿತ ಅವಧಿಯಲ್ಲಿ ಜನನ, ಮರಣ ಪತ್ರ ನೀಡಿ; ಡೀಸಿ ಆರ್‌.ಲತಾ

ನಿಗದಿತ ಅವಧಿಯಲ್ಲಿ ಜನನ, ಮರಣ ಪತ್ರ ನೀಡಿ; ಡೀಸಿ ಆರ್‌.ಲತಾ

MUST WATCH

udayavani youtube

ಇಬ್ಬರು ಶಸ್ತ್ರ ಸಜ್ಜಿತ ಲಷ್ಕರ್ ಉಗ್ರರನ್ನು ಹಿಡಿದು ಕೊಟ್ಟ ಕಾಶ್ಮೀರದ ಗ್ರಾಮಸ್ಥರು

udayavani youtube

ಜಿಂಕೆಯನ್ನು ನುಂಗಿದ್ದ 80 ಕೆ.ಜಿ. ತೂಕದ 14 ಅಡಿ ಉದ್ದದ ಹೆಬ್ಬಾವು!

udayavani youtube

ವಿಟ್ಲದ ಈ ವಿದ್ಯಾರ್ಥಿನಿಯ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ…

udayavani youtube

ಕೊಪ್ಪಳ : ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಎಸ್ಪಿ

udayavani youtube

ಮದ್ರಸಾದಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…

ಹೊಸ ಸೇರ್ಪಡೆ

ಭೂಕುಸಿತ: ಹಲವು ಮನೆಗಳು ಅಪಾಯದಲ್ಲಿ

ಭೂಕುಸಿತ: ಹಲವು ಮನೆಗಳು ಅಪಾಯದಲ್ಲಿ

ಕೆಳಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಂಟೈನರ್‌ ಲಾರಿ

ಕೆಳಪರ್ಕಳ: ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಂಟೈನರ್‌ ಲಾರಿ

ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ 

ಬ್ರಿಟನ್‌ನ ಹಿರಿಯ ರಂಗಭೂಮಿ ನಿರ್ದೇಶಕ ಪೀಟರ್‌ ಬ್ರೂಕ್‌ ನಿಧನ 

ಆ.11-17ರ ವರೆಗೆ ಎಲ್ಲ ಸಿಬಂದಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ

ಆ.11-17ರ ವರೆಗೆ ಎಲ್ಲ ಸಿಬಂದಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

ಜು. 8ರ ವರೆಗೆ ರಾಜ್ಯಾದ್ಯಂತ ಉತ್ತಮ ಮಳೆ: ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.