ಪುಟಪರ್ತಿ, ತಿರುಪತಿ ರೈಲಿಗೆ ಸಿಗುವುದೇ ಗ್ರೀನ್ ಸಿಗಲ್
Team Udayavani, Feb 1, 2018, 3:37 PM IST
ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಗುರುವಾರ ಆಯವ್ಯಯ ಮಂಡಿಸಲಿದ್ದು, ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹಲವು ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಗುವುದೇ ಎಂಬುದನ್ನು ಜನ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಕಳೆದ ಸಾಲಿನ ಬಜೆಟ್‌ನಲ್ಲಿ ಜಿಲ್ಲೆಯ ಜನತೆಗೆ ನಿರಾಸೆ ಮೂಡಿಸಿದ್ದ ರೈಲ್ವೆ ಬಜೆಟ್, ಈ ಸಾಲಿನಲ್ಲಾದರೂ ಜಿಲ್ಲೆಗೆ ಈಗಾಗಲೇ ಘೋಷಿಸಿರುವ ಹಾಗೂ ಪ್ರಸ್ತಾವನೆ ಸಲ್ಲಿಸಿರುವ ಹೊಸ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಿ ಅಗತ್ಯ ಆರ್ಥಿಕ ನೆರವು ಘೋಷಿಸುವ ಮೂಲಕ ಕೇಂದ್ರ ಸರ್ಕಾರ ಬರದ ಜಿಲ್ಲೆಯ ಮೇಲೆ ತನ್ನ ಔರ್ದಾಯತೇ ತೋರುವುದೇ ಎಂಬ ನಿರೀಕ್ಷೆಯನ್ನು ಜನತೆ ಹೊಂದಿದ್ದಾರೆ.
ಹಲವು ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಕೋಲಾರ, ಚಿಕ್ಕಬಳ್ಳಾಪುರ ನಡುವಿನ ರೈಲು ಸಂಚಾರವನ್ನು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ನ್ಯಾರೋಗೇಜ್‌ನಿಂದ ಬ್ರಾಡ್ ಗೇಜ್‌ಗೆ ಪರಿವರ್ತಿಸಿ ಅಂದು ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ 2013ರ ನ.8ರಂದು ಚಾಲನೆ ನೀಡಿದ್ದರು. ಅಂದಿನಿಂದ ಕೋಲಾರ ಚಿಕ್ಕಬಳ್ಳಾ ಪುರ ನಡುವೆ ರೈಲು ಸಂಚರಿಸುತ್ತಿದೆ.
ಆದರೆ, ಯುಪಿಎ ಸರ್ಕಾರದಲ್ಲಿ ಘೋಷಣೆಯಾಗಿ ಸರ್ವೆ ಕಾರ್ಯ ಮುಗಿದಿರುವ ಜಿಲ್ಲೆಯ ಹಲವು ಮಹತ್ವದ ರೈಲ್ವೆ ಯೋಜನೆಗಳು ಕಳೆದ ಮೂರು ವರ್ಷಗಳಿಂದ ಸಾಕಾರ ಗೊಳ್ಳದೇ ನೆನೆಗುದಿಗೆ ಬಿದ್ದಿವೆ. ಅದರಲ್ಲೂ ಚಿಕ್ಕಬಳ್ಳಾಪುರ ಮಾರ್ಗವಾಗಿ ಶ್ರೀನಿವಾಸಪುರದ ಮೂಲಕ ಮದನ ಪಲ್ಲಿ, ಪಿಟಿಎಂ, ಪಿಲೇರಿ, ತಿರುಪತಿಗೆ ಹಾಗೂ ಗೌರಿಬಿದನೂರು, ಚಿಕ್ಕಬಳ್ಳಾಪುರ ಮಾರ್ಗವಾಗಿ ಬಾಗೇ
ಪಲ್ಲಿ ಮೂಲಕ ಪುಟ್ಟಪರ್ತಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಗೆ ಈಗಾಗಲೇ ಸರ್ವೆ ಮುಗಿದಿದ್ದು, ಅನುದಾನಕ್ಕಾಗಿ ಎದುರು ನೋಡಲಾಗುತ್ತಿದೆ.
ಮೂಲ ಸೌಕರ್ಯಕ್ಕೆ ಸಿಗಬೇಕು ಒತ್ತು: ಸದ್ಯ ಕೋಲಾರ ಚಿಕ್ಕಬಳ್ಳಾಪುರ ನಡುವೆ ಸಂಚರಿಸುತ್ತಿರುವ ರೈಲಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ಬೋಗಿಗಳನ್ನು ಸೇರ್ಪಡೆಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಈಗಿನ ರೈಲಿನಲ್ಲಿ ಪ್ರಯಾಣಿಕರಿಗೆ ಕನಿಷ್ಠ ಶೌಚಾಲಯ, ಕುಡಿವ ನೀರಿನ ವ್ಯವಸ್ಥೆ ಇಲ್ಲ. ಜಿಲ್ಲಾ ಕೇಂದ್ರದ ರೈಲ್ವೆ ನಿಲ್ದಾಣದಲ್ಲಿ ಸಮರ್ಪಕವಾಗಿ ಪ್ಲಾಟ್‌ಫಾರಂಗಳಿಲ್ಲ. ಆಸನ ವ್ಯವಸ್ಥೆ ಇಲ್ಲ. ಚಿಂತಾಮಣಿ ಹಾಗೂ ಶಿಡ್ಲಘಟ್ಟ ತಾಲೂಕುಗಳ ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳಾಗಿ ಈ ಹಿಂದೆ ಯುಪಿಎ ಸರ್ಕಾರದ ರೈಲ್ವೆ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಹೆಸರಿಗೆ ತಕ್ಕಂತೆ ಆದರ್ಶ ನಿಲ್ದಾಣದಲ್ಲಿ ಮೂಲಸೌಲಭ್ಯಗಳು ಇಲ್ಲ.
ದೇವನಹಳ್ಳಿಗೆ ಬರುವ ರೈಲು ಜಿಲ್ಲೆಗೆ ಬರಲಿ: ಜಿಲ್ಲೆಯಲ್ಲಿ ರೈತರು, ಕಾರ್ಮಿಕರು ಹೆಚ್ಚಾಗಿದ್ದು, ವಿವಿಧ ಕೆಲಸ ಗಳಿಗೆ ಬೆಂಗಳೂರಿಗೆ ತೆರಳುವವರ ಅಧಿಕವಾಗಿದೆ. ಸದ್ಯ 2 ರೈಲು ಮಾತ್ರ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದು, ಮತ್ತೂಂದು ರೈಲಿನ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಯಶವತಂಪುರದಿಂದ ದೇವನಹಳ್ಳಿಗೆ ಮಾತ್ರ ಒಂದು ರೈಲು ಬೆಳಗ್ಗೆ 11 ಗಂಟೆ ಬಂದು ಅಲ್ಲಿಂದ ಪುನಃ ಬೆಂಗಳೂರಿಗೆ
ವಾಪಸ್ ಹೋಗುತ್ತಿದ್ದು, ಅದೇ ರೈಲು ಚಿಕ್ಕಬಳ್ಳಾಪುರಕ್ಕೆ ಬಂದರೆ ಪ್ರಯಾಣಿಕರಿಗೆ ಅನುಕೂಲದ ಜೊತೆಗೆ ಆದಾಯವೂ ಬರುತ್ತದೆ ಎನ್ನುತ್ತಾರೆ ರೈಲ್ವೆ ಪ್ರಯಾಣಿಕರ ಹೋರಾಟ ಸಮಿತಿ ಜಿಲ್ಲೇ ಪ್ರಧಾನ ಕಾರ್ಯದರ್ಶಿ ಎ. ಸೈಯದ್ ಮೊಹಮ್ಮದ್.
ನೆನೆಗುದಿಗೆ ಬಿದಿರುವ ರೈಲ್ವೆ ಯೋಜನೆಗಳು ಚಿಕ್ಕಬಳ್ಳಾಪುರದಿಂದ ಪರೇಸಂದ್ರ ಮಾರ್ಗವಾಗಿ ಬಾಗೇಪಲ್ಲಿ ಮೂಲಕ ಪುಟ್ಟಪರ್ತಿಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಗೌರಿಬಿದನೂರಿನಿಂದ ಮಂಚೇನ ಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ರೈಲು ಸಂಪರ್ಕ ಕಲ್ಪಿಸುವುದು, ಚಿಂತಾಮಣಿಯಿಂದ ಶ್ರೀನಿವಾಸಪುರದ ಮೂಲಕ ಮದನಪಲ್ಲಿ, ಪಿಟಿಎಂ, ಪಿಲೇರಿ ಮುಖಾಂತರ ತಿರುಪತಿಗೆ ಸಂಪರ್ಕ ಕಲ್ಪಿಸುವುದು, ಚಿಂತಾಮಣಿ, ಕೋಲಾರದ ಮಾರ್ಗವಾಗಿ ಬಂಗಾರಪೇಟೆ ಮುಖಾಂತರ ತಿರುಪತಿಗೆ ರೈಲು ಸಂಚಾರ ಆರಂಭಿಸುವುದು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಜೋಡಿ ರೈಲ್ವೆ ಹಳಿ ನಿರ್ಮಿಸುವುದು. ಕೋಲಾರ, ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಗೂಡ್ಸ್ ರೈಲು ಆರಂಭಿಸಬೇಕು, ಇಡೀ ಉತ್ತರ ಭಾರತಕ್ಕೆ ಸಂಪರ್ಕ ಕೊಂಡಿ ಯಾಗಿರುವ ಗೌರಿಬಿದನೂರು ರೈಲ್ವೆ ನಿಲ್ದಾಣವನ್ನು ಮೇಲ್ದಜೇಗೇರಿಸಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿ¨ ಜಿಲ್ಲೆಗೆ ಗೂಡ್ಸ್ ರೈಲು ಓಡಿಸಿ ಜಿಲ್ಲೆಯ ರೈತರು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತರಕಾರಿ, ಹೂ, ದ್ರಾಕ್ಷಿ ಮತ್ತಿತರ ಹಣ್ಣು ಹಂಪಲುಗಳನ್ನು ದೇಶದ ಇತೆರೆ ರಾಜ್ಯಗಳಿಗೆ ಸಾಗಿಸಲು ನೆರವಾಗುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ನೇರವಾಗಿ ಗೂಡ್ಸ್ ರೈಲು ಸಂಚಾರ ಆಗಬೇಕೆಂಬುದು ಜಿಲ್ಲೆಯ ಜನರ ಒತ್ತಾಸೆ. ರಾಜ್ಯದಿಂದಲೂ ಜಿಲ್ಲೆಗೆ ಸಿಮೆಂಟ್, ಕಬ್ಬಿಣ, ರಸಗೊಬ್ಬರ ಮತ್ತಿತರ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುವುದರಿಂದ ಗೂಡ್ಸ್ ರೈಲು ಅಗತ್ಯವಾಗಿದೆ. ಹಲವಾರು ಬಾರಿ ಕೇಂದ್ರದ ರೈಲ್ವೆ ಇಲಾಖೆಗೆ ಈ ಹಿಂದೆಯೇ ಈ ಕುರಿತು ಪ್ರಸ್ತಾವನೆಗಳು ಹೋಗಿವೆ. ಆದರೆ, ಇದುವರೆಗೂ ಈಡೇರಿಲ್ಲ. ಈ ಬಗ್ಗೆ ಜಿಲ್ಲೆಯ ಸಂಸದರು ಆಸಕ್ತಿ ತೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿಲ್ಲ ಎಂದು ರೈಲ್ವೆ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸೈಯದ್ ಮೊಹಮ್ಮದ್
ದೂರಿದ್ದಾರೆ.