Udayavni Special

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ


Team Udayavani, Mar 4, 2021, 10:01 PM IST

ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿ ಹಣ ಕದ್ದಿದ್ದ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಹುಂಡಿಗಳನ್ನು ಹೊಡೆದು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ನಂದಿಗಿರಿಧಾಮ ಪೋಲಿಸರು ಯಶಸ್ವಿಯಾಗಿದ್ದಾರೆ.

ಮೈಸೂರು ನಗರದ ಏಕಲವ್ಯ ನಗರದ ಕಬಾಲ್ ಉರುಫ್ ಚಂದು(25), ಮಂಡ್ಯ ತಾಲೂಕು ಹಿಂಡುವಾಳ ಗ್ರಾಮದ ಸುಮಂತ (21) ಬಂಧಿತ ಆರೋಪಿಗಳು ಆರೋಪಿಗಳಿಂದ 6700 ರೂ.ಗಳು ನಗದು ಕೃತ್ಯಕ್ಕೆ ಬಳಸಿದ್ದ 50 ಸಾವಿರ ರೂಗಳ ಮೌಲ್ಯದ ದ್ವಿಚಕ್ರ ವಾಹನ ಮತ್ತು ಎರಡು ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್‍ಕುಮಾರ್ ತಿಳಸಿದ್ದಾರೆ.

30-01-2021 ರಂದು ರಾತ್ರಿ ನಂದಿ ಗ್ರಾಮದ ಶೀ ಭೋಗನಂದೀಶ್ವರ ದೇವಾಲಯದಲ್ಲಿ ಗರ್ಭಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಎರಡು ಕಾಣಿಕೆ ಹುಂಡಿಗಳ ಬೀಗವನ್ನು ಹೊಡೆದು ಅದರಲ್ಲಿದ್ದ ಹಣವನ್ನು ದೋಚಿ ಹುಂಡಿಯನ್ನು ಬಿಸಾಡಿ ಹೋಗಿದ್ದರು ಅದರ ಕುರಿತು ದೇವಾಲಯದ ಪಾರುಪತ್ತೆದಾರ ನಾಗರಾಜ್ ಅವರು ನಂದಿಗಿರಿಧಾಮ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದರು.

ದೂರು ದಾಖಲಿಸಿಕೊಂಡ ಪೋಲಿಸರು ಜಿಲ್ಲಾ ಎಸ್ಪಿ ಜಿಕೆ ಮಿಥುನ್ ಕುಮಾರ್,ಡಿವೈಎಸ್ಪಿ ಕೆ.ರವಿಶಂಕರ್,ಸಿಪಿಐ ಪ್ರಶಾಂತ್ ಅವರ ನೇತೃತ್ವದಲ್ಲಿ ಪಿಎಸ್‍ಐ ಬಸನಗೌಡ ಕೆ ಪಾಟೀಲ್ ಮತ್ತು ಸಿಬ್ಬಂದಿ ಒಳಗೊಂಡಂತೆ ತನಿಖಾ ತಂಡಗಳನ್ನು ರಚಿಸಲಾಗಿತ್ತು ತನಿಖಾ ತಂಡ ಆರೋಪಿಗಳನ್ನು ರಾಜಘಟ್ಟದಿಂದ ದೊಡ್ಡಬಳ್ಳಾಪುರಕ್ಕೆ ತೆರಳುವ ಮಾರ್ಗದಲ್ಲಿರುವ ರೈಲ್ವೆ ಸೇತುವೆ ಬಳಿ ಬಂಧಿಸಿದ್ದಾರೆ.

ಇದನ್ನೂ ಓದಿ : ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್‌ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್

ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಮಂಡ್ಯ ಜಿಲ್ಲೆಯಲ್ಲಿ 10.01.2021 ರಂದು ಕೆ.ಆರ್.ಪೇಟೆ ತಾಲೂಕಿನ ಸಾಸಲು ಗ್ರಾಮದಲ್ಲಿರುವ ಶ್ರೀ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಾಲಯಗಳಲ್ಲಿ ಮೂರು ಹುಂಡಿಗಳನ್ನು ಹೊಡೆದು ಕಳುವು ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಿಥುನ್‍ಕುಮಾರ್ ತಿಳಿಸಿದ್ದಾರೆ.

ಆರೋಪಿಗಳ ವಿರುಧ್ಧ ಈಗಾಗಲೇ ಬೆಂಗಳೂರು ನಗರದ ಅಮೃತಹಳ್ಳಿ, ದೇವನಹಳ್ಳಿ, ಮಾದನಾಯಕನಹಳ್ಳಿ, ಚಿಕ್ಕಪೇಟೆ, ಸೋಲದೇವನಹಳ್ಳಿ,ರಾಮನಗರ ಜಿಲ್ಲೆಯ ಚನ್ನಪಟ್ಟಣ, ಮಂಡ್ಯ ಜಿಲ್ಲೆಯ ಮದ್ದೂರು, ನಾಗಮಂಗಲ, ತುಮಕೂರು, ಮೈಸೂರು ನಗರದ ಲಷ್ಕರ್,ಮಂಡಿ ಮೊಹಲ್ಲಾ ಪೋಲಿಸ್‍ಠಾ ಣೆಗಳಲ್ಲಿ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ .ನಂದಿಗಿರಿಧಾಮದ ಪೋಲಿಸರ ಕಾರ್ಯವೈಖರಿಯನ್ನು ಪ್ರಶಂಸಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ತನಿಖಾ ತಂಡಕ್ಕೆ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಟಾಪ್ ನ್ಯೂಸ್

ಗಹ್ಗದಸದ

ರಾಜ್ಯಾದ್ಯಂತ ನಾಳೆಯಿಂದ ಮೇ 3ರವರೆಗೆ ನೈಟ್ ಕರ್ಫ್ಯೂ ಜಾರಿ

ಕಜಹಗ್ರದ

ಮುಷ್ಕರ ಸ್ಥಗಿತಗೊಳಿಸಿ, ಕೆಲಸಕ್ಕೆ ಹಾಜರಾಗಿ : ಸಾರಿಗೆ ನೌಕರರಿಗೆ ಬಸವರಾಜ ಬೊಮ್ಮಾಯಿ ಮನವಿ

gfgdd

ಒಂದು ಸಿಂಗಲ್ ಆಕ್ಸಿಜನ್ಗಾಗಿ ಇಡೀ ದಿನ ಒದ್ದಾಡಿದ್ದೀನಿ: ಕೋವಿಡ್ ಕರಾಳತೆ ಬಿಚ್ಚಿಟ್ಟ ಸಾಧು

Release white paper on performance in managing COVID-19:

ಮುಖ್ಯಮಂತ್ರಿಗಳು ಆಸ್ಪತ್ರೆಯಲ್ಲಿದ್ದಾರೆ, ಬಿಜೆಪಿ ಸರ್ಕಾರ ಐಸಿಯುನಲ್ಲಿದೆ : ಸಿದ್ದರಾಮಯ್ಯ

gdfgsdgs

‘ಇದು ಕಸ್ತೂರಿ ನಿವಾಸದ ಕೈ, ರನ್ ಸಿಡಿಸುತ್ತೇ ಹೊರತು ನಿರಾಸೆ ಮಾಡೋದಿಲ್ಲ’

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Committed to development

ಪ.ಪಂಗಡ ಜನಾಂಗ ಅಭಿವೃದ್ಧಿಗೆ ಬದ್ದ

Zero interest loan facility

ಬದುಕಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ ಆಸರೆ

Complete ban on fairs and festivals in the district

ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ಸಂಪೂರ್ಣ ನಿರ್ಬಂಧ

Ugadi celebration

ಕೋನಪಲ್ಲಿಯಲ್ಲಿ ಯುಗಾದಿ ಸಂಭ್ರಮ

Contribute to infection control

ಸೋಂಕು ನಿಯಂತ್ರಣಕ್ಕೆ ಸಹಕರಿಸಿ

MUST WATCH

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

ಹೊಸ ಸೇರ್ಪಡೆ

19-17

ಬಳ್ಳಾರಿಯಲ್ಲಿ ಮುಂದುವರಿದ ಕಾರ್ಯಾಚರಣೆ

Ganekal

ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲು ಆಗ್ರಹಿಸಿ ರಸ್ತೆತಡೆ

ಗಹ್ಗದಸದ

ರಾಜ್ಯಾದ್ಯಂತ ನಾಳೆಯಿಂದ ಮೇ 3ರವರೆಗೆ ನೈಟ್ ಕರ್ಫ್ಯೂ ಜಾರಿ

19-16

ಕೊರೊನಾ ಕರ್ಫ್ಯೂ ಜಾರಿ

ಕಜಹಗ್ರದ

ಮುಷ್ಕರ ಸ್ಥಗಿತಗೊಳಿಸಿ, ಕೆಲಸಕ್ಕೆ ಹಾಜರಾಗಿ : ಸಾರಿಗೆ ನೌಕರರಿಗೆ ಬಸವರಾಜ ಬೊಮ್ಮಾಯಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.