ಜೆಡಿಎಸ್ ಬೆಂಬಲಿಗರ ವಶಕ್ಕೆ ಹಾಲಿನ ಡೇರಿ
Team Udayavani, Mar 6, 2021, 3:39 PM IST
ಚಿಂತಾಮಣಿ: ತಾಲೂಕಿನ ಗೋಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಜೆಡಿ ಎಸ್ ಬೆಂಬಲಿಗರು 7 ಹಾಗೂ ಮಾಜಿ ಶಾಸಕ ಸುಧಾಕರ್ ಬೆಂಬಲಿ ಗರು 4 ಸ್ಥಾನಗಳು ಪಡೆದಿದ್ದು, ಸಂಘವು ಜೆಡಿಎಸ್ ಬೆಂಬಲಿಗರ ಪಾಲಾಗಿದೆ.
ಸಂಘದಲ್ಲಿ ಒಟ್ಟು 11 ಸ್ಥಾನಗಳಿದ್ದು, ಇಬ್ಬರು ಅವಿರೋಧವಾಗಿ ಆಯ್ಕೆ, ಉಳಿದ 9 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನವರು 7 ಸ್ಥಾನ ಗಳಿಗೆ ಸ್ಪರ್ಧಿಸಿ 7ರಲ್ಲೂ ಗೆಲುವು ಸಾಧಿಸಿದ್ದಾರೆ.
ಮಾಜಿ ಶಾಸಕ ಸುಧಾಕರ್ ಬೆಂಬಲಿಗರು 9 ಸ್ಥಾನಗಳಿಗೆ ಸ್ಪರ್ಧಿಸಿ 2 ಸ್ಥಾನ ಪಡೆದುಕೊಂಡಿದ್ದಾರೆ. ಜೆಡಿಎಸ್‌ನಿಂದ ಕೃಷ್ಣಾರೆಡ್ಡಿ, ತಮ್ಮರೆಡ್ಡಿ ಜಿ, ವಿನೋ ದಮ್ಮ, ಶಿವಾರೆಡ್ಡಿ, ಶ್ರೀರಾಮರೆಡ್ಡಿ, ಮಂಜುಳಾ ಹಾಗೂ ವೆಂಕಟಲಕ್ಷ ¾ಮ್ಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಶಾಸಕ ಸುಧಾಕರ್ ಬಣದಿಂದ ಮಂಜುನಾಥರೆಡ್ಡಿ, ಮುನಿಶ್ಯಾಮಿ ರೆಡ್ಡಿ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದು, ಸುಬ್ಬಣ್ಣ ಮತ್ತು ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಸ್.ಭಾಸ್ಕರರೆಡ್ಡಿ ತಿಳಿಸಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ವಿಜೇತರಾದ ಅಭ್ಯರ್ಥಿಗಳಿಗೆ ಹೂ ಮಾಲೆ ಹಾಕಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡರಾದ ಗೋಪಲ್ಲಿ ರಘುನಾಥರೆಡ್ಡಿ, ನವೀನ, ಶಿಷ್ಯ ಮಂಜು,ಶ್ರೀನಾಥ್, ಮುನಿಸ್ವಾಮಿ ರೆಡ್ಡಿ, ರವಿ, ಬಾಬು, ರಾಮಪ್ಪ, ನಿಮ್ಮಕಾಯಲಪಲ್ಲಿ ರೆಡ್ಡಪ್ಪ ಸೇರಿ ದಂತೆ ಮತಿತ್ತರರು ಉಪಸ್ಥಿತರಿದ್ದರು
ಪುಟ್ಟ ಸ್ವಾಮಿಗೌಡರಿಂದ ಟ್ಯಾಬ್ ವಿತರಣೆ :
ಗೌರಿಬಿದನೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿ ತಂತ್ರಜ್ಞಾನವನ್ನು ಅರಿಯುವುದರ ಜತೆಗೆ ಅವರ ಉಜ್ವಲ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಉಚಿತವಾಗಿ ಟ್ಯಾಬ್‌ಗಳನ್ನು ನೀಡಲಾಗಿದೆ ಎಂದು ಸಮಾಜ ಸೇವಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ತಾಲೂಕಿನ ಎಚ್.ನಾಗಸಂದ್ರ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕೆಎಚ್‌ಪಿ ಫೌಂಡೇಷನ್ ವತಿಯಿಂದ ಉಚಿತವಾಗಿ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ಕೋವಿಡ್ ಪರಿಣಾಮವಾಗಿ ಶಿಕ್ಷಣ ಇಲಾಖೆಯ ಆದೇಶದಂತೆ ಸುಮಾರು 10 ತಿಂಗಳ ಕಾಲ ಸ್ಥಗಿತಗೊಂಡಿದ್ದ ತರಗತಿಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ.
ಇಲಾಖೆಯ ಸೂಚನೆಯ ಮೇರೆಗೆ ಆನ್‌ಲೈನ್ ತರಗತಿ ಆರಂಭಿಸಲಾಗಿತ್ತು. ಆದರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಬಡ, ಮಧ್ಯಮ ಹಾಗೂ ಕೂಲಿ ಕಾರ್ಮಿಕರ ಮಕ್ಕಳಾಗಿರುವುದರಿಂದ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್‌ಗಳನ್ನು ಖರೀದಿಸಿ ಕಲಿಯಲು ಸಾಧ್ಯವಾಗಿಲ್ಲ.
ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಜಗದೀಶ್ ಮಾತನಾಡಿ, ತಾಲೂಕಿನಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆನ್‌ಲೈನ್ ಕಲಿಕೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕೆಎಚ್‌ಪಿ ಫೌಂಡೇಷನ್‌ವತಿಯಿಂದ ನೀಡುತ್ತಿರುವ ಟ್ಯಾಬ್‌ಗಳು ಭವಿಷ್ಯಕ್ಕೆ ಆಸರೆಯಾಗಲಿವೆ.ದಾನಿಗಳು ನೀಡಿದ ಟ್ಯಾಬ್‌ಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿಯ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿತು ಭವಿಷ್ಯದಲ್ಲಿ ಸತøಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಇಷರತ್ ಉನ್ನೀಸಾ, ಮುಖಂಡರಾದ ಬಸಪ್ಪರೆಡ್ಡಿ, ಶ್ರೀನಾಥ್, ನಾಗಾರ್ಜುನ, ಅನಂತರಾಜು, ಗಂಗಾಧರ್, ಶ್ರೀಧರ್ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.