Udayavni Special

ಕೋವಿಡ್ ನಿಯಂತ್ರಣ ನೆಪದಲ್ಲಿ ಖಜಾನೆ ಖಾಲಿ


Team Udayavani, Dec 7, 2020, 8:10 PM IST

ಕೋವಿಡ್ ನಿಯಂತ್ರಣ ನೆಪದಲ್ಲಿ ಖಜಾನೆ ಖಾಲಿ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವ ನೆಪದಲ್ಲಿ ಬಿಜೆಪಿ ಸರ್ಕಾರಖಜಾನೆ ಖಾಲಿ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂ.ಲೂಟಿ ಮಾಡುತ್ತಿದ್ದರೂ ಸಹ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್‌ ಮುಖಂಡ ಮೇಲೂರು ರವಿಕುಮಾರ್‌ ಟೀಕಿಸಿದರು.

ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಕ್ಷೇತ್ರದ ಗ್ರಾಪಂ ಚುನಾವಣೆಯ ಸಂಘಟನಾ ಪೂರ್ವಸಿದ್ಧತಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ, ರೈತರು ಮತ್ತು ಜನಸಾಮಾನ್ಯರ ಹಿತವನ್ನು ನಿರ್ಲಕ್ಷಿಸಿದ್ದು, ಜೆಡಿಎಸ್‌ನಿಂದ ಮಾತ್ರ ರೈತರು ಮತ್ತು ಬಡಜನರ ಕಲ್ಯಾಣ ಸಾಧ್ಯ ಎಂದರು.

ಗ್ರಾಪಂ ಅಧಿಕಾರ ನೀಡಿ: ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಮತ್ತು ಬಡವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಶೈಕ್ಷಣಿಕ ಕೇಂದ್ರ ಮಾಡಲು 30 ಗ್ರಾಪಂಗಳಲ್ಲಿ 25ಗ್ರಾಪಂಗಳ ಆಡಳಿತವನ್ನು ನೀಡಬೇಕೆಂದು ಮನವಿ ಮಾಡಿದ ಅವರು, ಗ್ರಾಪಂಗಳಲ್ಲಿ ಅಧಿಕಾರ ಹಿಡಿದರೆ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಜೊತೆಗೆ ನಿರುದ್ಯೋಗ ಸಮಸ್ಯೆನಿವಾರಿಸಿ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಉದ್ಯಮಿಗಳನ್ನು ಅಭಿವೃದ್ಧಿ ಗೊಳಿಸುವ ಯೋಜನೆಯನ್ನು ಜಾರಿಗೊಳಿಸಿದೆ. ತೈಲಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದ್ದಾರೆ. ಬಡವರ ಪರವಾಗಿ ಯೋಜನೆಗಳ ಮಾಡುವ ಬದಲು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತ ಗೊಳಿಸುತ್ತಿರುವುದೇ ಅವರ ಸಾಧನೆ ಎಂದು ಲೇವಡಿ ಮಾಡಿದರು.

ಸವಾಲಾಗಿ ಸ್ವೀಕರಿಸಿ: ಜಿಪಂ ಸದಸ್ಯ ಬಂಕ್‌ ಮುನಿಯಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಮಹತ್ವ ಪಡೆದುಕೊಂಡಿದೆ. ಜೆಡಿಎಸ್‌ ಕಾರ್ಯಕರ್ತರು ಯಾಮಾರಿದರೆಕಷ್ಟವಾಗುತ್ತದೆ. ಮೇಲೂರು ರವಿಕುಮಾರ್‌ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರೂ ಕ್ಷೇತ್ರದ ಜನರ ಸೇವೆ ಮಾಡಿಕೊಂಡು ಬಂದಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಮೂಲಕ ಅವರಕೈಬಲಪಡಿಸಬೇಕು. ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್‌ಬೆಂಬಲಿತರು ಅಧಿಕಾರದಲ್ಲಿದ್ದರೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಕ್ಷೇಪ ಮಾಡಲು ಸಾಧ್ಯವಾಗುವುದಿಲ್ಲ. ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಉಜಗೂರು ರಾಮಯ್ಯ, ತಾದೂರು ರಘು, ತಾಪಂ ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀ ನಾರಾಯಣ,ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಮುನಿ ವೆಂಕಟ ಸ್ವಾಮಿ,ಚೀಮನಹಳ್ಳಿಗೋಪಾಲ, ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ, ಕೊತ್ತನೂರು ಲಕ್ಷ್ಮೀಪತಿ, ಕುಂದಲಗುರ್ಕಿ ಚಂದ್ರು, ಮುಗಿಲಡಪಿ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Untitled-2

ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಕಾಯಕ ಶ್ರದ್ಧೆಗೆ ರೂಪಕವಾದ ಶ್ರೀಗಳು

ಒಂದೂವರೆ ವರ್ಷ  ಕೃಷಿ ಕಾಯ್ದೆ ಅಮಾನತು?

ಒಂದೂವರೆ ವರ್ಷ ಕೃಷಿ ಕಾಯ್ದೆ ಅಮಾನತು?

ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ

ಬೈಡೆನ್‌ ಆಗಮನ, ಟ್ರಂಪ್‌ ನೀತಿಗಳ ನಿರ್ಗಮನ

Untitled-1

ಸರಕಾರದ ನಿಯಮದಿಂದ ಹೊಸ ಸದಸ್ಯರಿಗೆ ಇಕ್ಕಟ್ಟು

Untitled-1

ನಾವೀನ್ಯತೆ ಸೂಚ್ಯಂಕದಲ್ಲಿ ಕರ್ನಾಟಕ ನಂ. 1

ಉಪೇಕ್ಷಾ ಎನ್ನುವ  ಮಧ್ಯಮ ಮಾರ್ಗ

ಉಪೇಕ್ಷಾ ಎನ್ನುವ ಮಧ್ಯಮ ಮಾರ್ಗ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಠಿಸಿದ ಜಿಲ್ಲಾಧಿಕಾರಿಗಳ ನೋಟಿಸ್

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಂಚಲನ ಸೃಷ್ಠಿಸಿದ ಜಿಲ್ಲಾಧಿಕಾರಿಗಳ ನೋಟಿಸ್

ಹೆತ್ತ ಮಗುವನ್ನು ಮಾರಾಟ ಮಾಡಿದ ತಾಯಿ! : ಮಹಿಳೆ ಸಹಿತ ನಾಲ್ವರ ಬಂಧನ

ಹೆತ್ತ ಮಗುವನ್ನು ಮಾರಾಟ ಮಾಡಿದ ತಾಯಿ! : ಮಹಿಳೆ ಸಹಿತ ನಾಲ್ವರ ಬಂಧನ

ಆಂಧ್ರ ಮಹಿಳೆಗೆ 75 ಲಕ್ಷ ರೂ.ವಂಚನೆ, ಹಲ್ಲೆ : ರೈಸ್‌ ಮಿಲ್‌ ಮಾಲೀಕನ ವಿರುದ್ಧ ಮಹಿಳೆ ಆರೋಪ

ಆಂಧ್ರ ಮಹಿಳೆಗೆ 75 ಲಕ್ಷ ರೂ.ವಂಚನೆ, ಹಲ್ಲೆ : ರೈಸ್‌ ಮಿಲ್‌ ಮಾಲೀಕನ ವಿರುದ್ಧ ಮಹಿಳೆ ಆರೋಪ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

MUST WATCH

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

udayavani youtube

ಕ್ಷಮಿಸುವುದನ್ನು ಕಲಿಸುವುದು ಹೇಗೆ?

udayavani youtube

ಅರ್ನಾಬ್- ಗುಪ್ತಾ ವಾಟ್ಸ್ ಆ್ಯಪ್ ಚಾಟ್ ಲೀಕ್!! ಹೊಸಾ ಕಥೆ, ತುಂಬಾ ವ್ಯಥೆ…

ಹೊಸ ಸೇರ್ಪಡೆ

Untitled-2

ಚಿಕ್ಕಮಗಳೂರು : 400 ಕೋಟಿ ರೂ. ಬಿಡುಗಡೆ ನಿರೀಕ್ಷೆ

ನಿಯಂತ್ರಣದಲ್ಲಿರುವ ಮಲೇರಿಯಾ, ಡೆಂಗ್ಯೂ ಉಲ್ಬಣಿಸುವ ಭೀತಿ!

ನಿಯಂತ್ರಣದಲ್ಲಿರುವ ಮಲೇರಿಯಾ, ಡೆಂಗ್ಯೂ ಉಲ್ಬಣಿಸುವ ಭೀತಿ!

ಕರಾವಳಿಯಲ್ಲಿ ಏರಿಕೆಯಾಗುತ್ತಿದೆ ಲಸಿಕೆ ಗುರಿ

ಕರಾವಳಿಯಲ್ಲಿ ಏರಿಕೆಯಾಗುತ್ತಿದೆ ಲಸಿಕೆ ಗುರಿ

ಸರ್ಚ್‌ ವಾರಂಟ್‌ ಮುನ್ನ  ಸಮನ್ಸ್‌ನ ಆವಶ್ಯಕತೆ ಇಲ್ಲ

ಸರ್ಚ್‌ ವಾರಂಟ್‌ ಮುನ್ನ ಸಮನ್ಸ್‌ನ ಆವಶ್ಯಕತೆ ಇಲ್ಲ

Untitled-2

ಸಂಗೀತದ ಮೂಲ ಧರ್ಮ; ಬಳಿಕ ಸಂಸ್ಕೃತಿ, ವ್ಯವಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.