ಕಸ ಬಕೆಟ್‌ನಲ್ಲಿ ಹಾಕಿ ಸ್ವಚ್ಛತೆ ಕಾಪಾಡಿ

Team Udayavani, Aug 5, 2019, 3:00 AM IST

ಗುಡಿಬಂಡೆ: ಕಸವನ್ನು ಬೀದಿಗೆ ಹಾಕಿ ದಂಡ ಕಟ್ಟುವ ಬದಲು ಪ.ಪಂ ಕಚೇರಿಯಿಂದ ಉಚಿತವಾಗಿ ನೀಡುವ ಕಸದ ಬಕೆಟ್‌ನಲ್ಲಿ ಹಾಕಿ ಸ್ವಚ್ಛತೆ ಕಾಪಾಡುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸಾರ್ವಜನಿಕರು ಕಾಪಾಡಿಕೊಳ್ಳಬೇಕೆಂದು ಶಾಸಕ ಎಸ್‌ ಎನ್‌.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛ ಭಾರತ ಮಿಷನ್‌ ಯೋಜನೆಯಲ್ಲಿ ಪಟ್ಟಣದ 2500 ಕುಟುಂಬಗಳಿಗೆ ಉಚಿತವಾಗಿ ಬಕೆಟ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಹಾಕಿ ದಂಡ ಕಟ್ಟುವ ಬದಲು ಬಕೆಟ್‌ಗಳಿಗೆ ಹಾಕಿ ಅದರಲ್ಲಿ ಎರಡು ಭಾಗವಾಗಿ ವಿಂಗಡಣೆ ಮಾಡಬೇಕು. ಇದರಿಂದ ಸ್ವಚ್ಛತೆ ಕಾಪಾಡುವುದರಿಂದ ಯಾವುದೇ ರೋಗಗಳು ಬಾರದಂತೆ ತಡೆಯಬಹುದು ಎಂದರು.

ಕಸ ವಿಂಗಡಿಸಿ: ಒಂದು ಮನೆಗೆ ಎರಡು ಬಣ್ಣದ ಬಕೆಟ್‌ ನೀಡುತ್ತಿದ್ದು, ಅದರಲ್ಲಿ ಹಸಿ ಕಸ ಒಂದರಲ್ಲಿ, ಒಣ ಕಸ ಮತ್ತೂಂದರಲ್ಲಿ ಹಾಕಿ ಪ್ರತಿದಿನ ಮುಂಜಾನೆ ಬರುವ ಪೌರಕಾರ್ಮಿಕರಿಗೆ ನೀಡಬೇಕು ಎಂದು ತಿಳಿಸಿದರು. ಈಗಾಗಲೇ ಬರಗಾಲದ ಛಾಯೆ ಕಂಡು ಬಂದಿದ್ದು, ಒಂದು ಕಡೆ ಮೇವು, ನೀರಿನ ಅಭಾವ ಕಂಡು ಬಂದಿದ್ದು, ಸರ್ಕಾರ ಗುಡಿಬಂಡೆ ತಾಲೂಕಿಗೆ 4 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ನೀರಿನ ಸಮಸ್ಯೆ ಆಗದಂತೆ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ತಿಳಿಸಿದರು.

70 ಕೋಟಿ ರೂ. ಬಿಡುಗಡೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧಿಕಾರ ಅವಧಿಯಲ್ಲಿ ಎಚ್‌.ಎನ್‌.ವ್ಯಾಲಿ ನೀರು ಸರಬರಾಜುಗಾಗಿ 70 ಕೋಟಿ ರೂ. ಬಿಡುಗಡೆ ಮಾಡಿದ್ದು, ಈ ಹಣ ಸಂಪೂರ್ಣವಾಗಿ ಬಾಗೇಪಲ್ಲಿ ತಾಲೂಕಿಗೆ ಸೀಮಿತವಾಗಿದೆ. ಗುಡಿಬಂಡೆ ತಾಲೂಕಿನ ಕೆರೆಗಳಿಗೆ ನೀರು ಒದಗಿಸುವ ಸಲುವಾಗಿ ಹಾಲಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಅಮಾನಿಭೈರಸಾಗರ ಕೆರೆ ಏರಿಯ ಮೇಲಿನ ರಸ್ತೆ ಡಾಂಬರೀಕರಣಕ್ಕಾಗಿ 1.60 ಕೋಟಿ, ರಸ್ತೆ, ಉದ್ಯಾನವನ, ಸುರಸದ್ಮಗಿರಿ ತಪ್ಪಲಿನಲ್ಲಿ ಅಭಿವೃದ್ಧಿಗಾಗಿ 2 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ತಡೆಗೋಡೆ ನಿರ್ಮಿಸಿ: ಅಮಾನಿಬೈರಸಾಗರ ಕೆರೆಯ ತಡೆಗೋಡೆಗೆ ಜುಲೆ„ ತಿಂಗಳಲ್ಲಿ ಸಾರಿಗೆ ಬಸ್‌ ಅಪಘಾತಕ್ಕೀಡಾಗಿ ತಡೆಗೋಡೆ ಹಾಳಾಗಿದೆ. ಪಾಳೇಗಾರರ ಕಾಲದಲ್ಲಿ ಕೆರೆ ನಿರ್ಮಾಣವಾಗಿ 500 ವರ್ಷಗಳಾಗಿದ್ದು ತಡೆಗೋಡೆ ಸಂಪೂರ್ಣವಾಗಿ ಹಾಳಾಗಿದ್ದು, ಹೊಸದಾಗಿ ತಡೆಗೋಡೆ ನಿರ್ಮಿಸಬೇಕು.

ಕೆರೆಯ ದಡದಲ್ಲಿರುವ ಕೋಡಿಗಂಗಾಧರೇಶ್ವರ ದೇವಾಲಯದ ಬಳಿ 254 ಸರ್ವೆ ಸಂಖ್ಯೆಯಲ್ಲಿ ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಗೆ ನೀಡಿರುವ ನೀವೇಶನ ರದ್ದು ಮಾಡಿ ಬೇರೊಂದು ಸ್ಥಳದಲ್ಲಿ ಜಾಗ ನೀಡಬೇಕು. ರಸ್ತೆ ಸಾರಿಗೆ ಡಿಪೋ ನಿರ್ಮಾಣಕ್ಕಾಗಿ ಕೊಂಡರೆಡ್ಡಿಹಳ್ಳಿ ಬಳಿ 10 ಎಕರೆ ಜಮೀನು ನೀಡಿ 6 ವರ್ಷಗಳಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಅನುಕೂಲವಾಗಲು ಎಪಿಎಂಸಿ ಯಾರ್ಡ್‌ ನಿರ್ಮಿಸಬೇಕು ಎಂದು ಸಾರ್ವಜನಿರು ಶಾಸಕರಿಗೆ ಮನವಿ ಮಾಡಿದರು.

ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ, ಪ.ಪಂ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌, ಪಪಂ ಮಾಜಿ ಅಧ್ಯಕ್ಷ ರಿಯಾಜ್‌ ಪಾಷ, ಮುಖಂಡರಾದ ದ್ವಾರಕನಾಥ್‌ ನಾಯ್ಡು, ಅಂಬರೀಶ್‌, ರಮೇಶ್‌, ರಮೇಶ್‌ ಬಾಬು, ಲಕ್ಷ್ಮೀ ಸ್ಟೋರ್‌ ಶ್ರೀನಿವಾಸ್‌ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ