ಮೇವಿಲ್ಲದೆ ಜಾನುವಾರುಗಳ ರೋದನೆ


Team Udayavani, Apr 10, 2021, 1:37 PM IST

ಮೇವಿಲ್ಲದೆ ಜಾನುವಾರುಗಳ ರೋದನೆ

ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಜೊತೆಗೆ ಮೇವಿನ ಅಭಾವವೂ ಕಾಡುತ್ತಿದ್ದು, ಜನಜಾನುವಾರುಗಳ ಗೋಳು ಕೇಳುವವರೇ ಇಲ್ಲದಂತಾಗಿದೆ.

ಬಾಗೇಪಲ್ಲಿ ತಾಲೂಕಿನ ಮಾರಗಾನಕುಂಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇವಿಕುಂಟೆ ಗ್ರಾಮದಲ್ಲಿಮೇವಿನ ಕೊರತೆಯಿಂದ ಜಾನುವಾರುಗಳ ಸಾಕಣೆ ಮಾಡಲು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮೇವು ಸರಬರಾಜು ಮಾಡಲು ರೈತರು ರಾಜ್ಯ ಪಶು ಸಂಗೋಪನೆ ಸಚಿವ ಪ್ರಭು ಚೌಹಾನ್‌ ಅವರ ಮೊರೆ ಹೋಗಿದ್ದಾರೆ.

ಜಿಲ್ಲಾಡಳಿತಕ್ಕೆ ಮನವಿ: ಇತ್ತೀಚಿಗೆ ಹುಲ್ಲಿನ ಬಣವೆ ಬೆಂಕಿಗೆ ಆಹುತಿ ಆಗಿದ್ದರಿಂದ ಧನಕರುಗಳಿಗೆ ಮೇವು ಇಲ್ಲದೆ ದೇವಿಕುಂಟೆ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಗೋಪಾಲ್‌ ಎಂಬ ರೈತ 30ಕ್ಕೂ ಹೆಚ್ಚು ದೇಸಿ ಹಸು ಸಾಕುತ್ತಿದ್ದಾರೆ. ಈಗ ಎಲ್ಲಿಯೂ ಮೇವು ಸಿಗದೆ ಹಸುಗಳನ್ನು ಸಾಕಣೆಮಾಡಲು ಪರದಾಡುತ್ತಿದ್ದಾರೆ. ಕೂಡಲೇ ಮೇವು ಒದಗಿಸಲು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.

ಬಣವೆಗಳು ಬೆಂಕಿಗೆ ಆಹುತಿ: ದೇವಿಕುಂಟೆಗ್ರಾಮದಲ್ಲಿ 86 ಮನೆಗಳಿವೆ. ಸುತ್ತಲೂ ಕಾಡುಮೇಡು ಇದೆ. ಇಲ್ಲಿನ ಬೆಟ್ಟ-ಗುಡ್ಡ, ರಸ್ತೆ ಬದಿ, ಖಾಲಿಜಮೀನಿನಲ್ಲಿ ಬೆಳೆಯುವ ಹುಲ್ಲನ್ನು ನಂಬಿಕೊಂಡು ಜನರು ಹಸು, ಮೇಕೆ, ಕುರಿ ಸಾಕುತ್ತಿದ್ದಾರೆ. ಬೇಸಿಗೆಯಲ್ಲಿ ಹಲ್ಲು ಒಣಗುವುದರಿಂದ ಹಸಿ ಮೇವುಎಲ್ಲೂ ಸಿಗುವುದಿಲ್ಲ. ಅಲ್ಲದೆ, ರಾತ್ರಿ ಮೇವಿಗಾಗಿಕೂಡಿಟ್ಟಿದ್ದ ಮೇವು ಬೆಂಕಿ ಬಿದ್ದು ಸುಟ್ಟು ಹೋಗಿದ್ದು, ಈಗ ಪರದಾಡುವಂತಾಗಿದೆ ಎಂದು ರೈತ ಗೋಪಾಲ್‌ ಅಳಲು ತೋಡಿಕೊಂಡರು.

ಈ ವರ್ಷ ಮಳೆ ಹೆಚ್ಚಾಗಿ ಬಿದ್ದು ವಿಪರೀತ ಹುಲ್ಲುಬೆಳೆದಿತ್ತು. ಪ್ರತಿ ವರ್ಷ ಕಾಡಿಗೆ ಬೆಂಕಿ ಬಿದ್ದಾಗ ಶೇ.50 ಹುಲ್ಲ ನಾಶವಾಗುತ್ತಿತ್ತು. 20 ದಿನಗಳ ಹಿಂದೆ ಕಿಡಿಗೇಡಿಗಳು ಇಟ್ಟಿದ್ದ ಬೆಂಕಿಗೆ ನಾಲ್ಕು ದಿನ ಉರಿದಿದ್ದು, ಇದರಿಂದ ಕಾಡು ನಾಶವಾಗಿತ್ತು. ಬೇಸಿಗೆಯಲ್ಲಿ ಮೇವು, ನೀರಿಲ್ಲದೆ ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಮೇವಿನ ಸಮಸ್ಯೆ ಬಗೆಹರಿಸಲು ಗ್ರಾಮಸ್ಥರು ಈಗಾಗಲೇ ರಾಜ್ಯ ಪಶು ಸಂಗೋಪನೆಸಚಿವ ಪ್ರಭು ಚೌಹಾನ್‌, ಪಶು ಇಲಾಖೆಯ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಬಾಗೇಪಲ್ಲಿ ತಹಶೀಲ್ದಾರ್‌ ಅವರ ಮೊರೆ ಹೋಗಿದ್ದಾರೆ. ಆದರೆ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೇವಿಗಾಗಿ ಆಂಧ್ರಕ್ಕೆ ಮೊರೆ: ಸರ್ಕಾರ ಮೇವು ಒದಗಿಸದ ಕಾರಣ, ರೈತರು ಆಂಧ್ರದ ಮದ್ದಕವಾರಿ ಪಲ್ಲಿಯ ಕಾಡಿಗೆ ಹೋಗಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ. ಬೇಸಿಗೆಯಲ್ಲಿ ಕುಡಿಯುವನೀರು ಪೂರೈಕೆ ಮಾಡುವ ಜೊತೆಗೆ ಗ್ರಾಪಂ ಮಟ್ಟದಲ್ಲಿ ಮೇವು ಬ್ಯಾಂಕ್‌ ಮತ್ತು ಗೋಶಾಲೆ ಆರಂಭಿಸ  ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬಾಗೇಪಲ್ಲಿ ಪಶು ಅಧಿಕಾರಿಗಳು ಸೂಕ್ತಸಹಕಾರ ನೀಡುತ್ತಿಲ್ಲ, ಸರ್ಕಾರದಿಂದಬರುವ ಸೌಲಭ್ಯ ಕೊಡುವುದಿಲ್ಲ. ಹಸುಗಳುಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆನಾಟಿ ವೈದ್ಯ ಪದ್ಧತಿಯಿಂದ ಗುಣಮುಖಮಾಡಲಾಗುತ್ತಿದೆ. ಜೊತೆಗೆ ಹಸುಗಳಿಗೆನಿವೃತ್ತ ಪಶು ವೈದ್ಯರ ಸಹಕಾರದಿಂದ 30 ಹಸುಗಳ ಪೋಷಣೆಗೆ ಮಾಡಲಾಗುತ್ತಿದೆ.  –ಗೋಪಾಲ್‌, ರೈತ

ಭಾರತದಲ್ಲಿ 30 ರಿಂದ 35 ಶುದ್ಧ ಗೋತಳಿ ಗುರುತಿಸಲಾಗಿದೆ. ಹೆಚ್ಚು ಹಾಲು ಕರೆಯುವ ಉದ್ದೇಶದಿಂದ ಸೀಮೆಹಸು ಪಾಲನೆ ಮಾಡಲಾಗುತ್ತಿದೆ. ಹೀಗಾಗಿಶುದ್ಧ ಗೋತಳಿ ಸಂತತಿ ಕಡಿಮೆ ಆಗುತ್ತಿದೆ.ಇವುಗಳನ್ನು ಉಳಿಸಲು ಸರ್ಕಾರ ಸಹಕಾರನೀಡಿದ್ರೆ ಕ್ಯಾಟಲ್‌ ಕ್ಲಬ್‌ ಮಾಡುವಯೋಚನೆ ಇದೆ. ಈಗ ಗೋವುಗಳ ರಕ್ಷಣೆಗೆಸರ್ಕಾರ ಅಥವಾ ದಾನಿಗಳು ಮೇವು, ನೀರಿನ ವ್ಯವಸ್ಥೆ ಮಾಡಬೇಕಿದೆ. ಪವನ್‌ಕಲ್ಯಾಣ್‌ ಡಿ.ಜಿ., ಗೋವು ಸಾಕಣೆದಾರ

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಜಿಲ್ಲೆಯ 5 ತಾಲೂಕಲ್ಲಿ ಸಿಡಿಪಿಒ ಹುದ್ದೆ ಖಾಲಿ

ಜಿಲ್ಲೆಯ 5 ತಾಲೂಕಲ್ಲಿ ಸಿಡಿಪಿಒ ಹುದ್ದೆ ಖಾಲಿ

ಕ್ಲಾವಿಕಲ್ ಬೋನಿನ ಚಿಕಿತ್ಸೆಗಾಗಿ ಲಂಚಕ್ಕೆ ಕೈಯೊಡ್ಡಿದ ಸರ್ಜನ್ ಎಸಿಬಿ ಬಲೆಗೆ

ಕ್ಲಾವಿಕಲ್ ಬೋನಿನ ಚಿಕಿತ್ಸೆಗಾಗಿ ಲಂಚಕ್ಕೆ ಕೈಯೊಡ್ಡಿದ ಸರ್ಜನ್ ಎಸಿಬಿ ಬಲೆಗೆ

ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಿ

ಹೆಣ್ಣು ಮಕ್ಕಳ ಶ್ರೇಯೋಭಿವೃದ್ಧಿಗೆ ಎಲ್ಲರೂ ಶ್ರಮಿಸಿ

ವಾರಾಂತ್ಯ ಕರ್ಫ್ಯೂ ಅಂತ್ಯ: ಸಹಜ ಸಿತಿಗೆ ಜನ ಜೀವನ

ವಾರಾಂತ್ಯ ಕರ್ಫ್ಯೂ ಅಂತ್ಯ: ಸಹಜ ಸಿತಿಗೆ ಜನ ಜೀವನ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.