ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

Team Udayavani, Jan 4, 2022, 12:10 PM IST

ಪಶು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ

ಬಾಗೇಪಲ್ಲಿ: ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು, ಕಚೇರಿ ಸಿಬ್ಬಂದಿ ಕೊರತೆ ಇದ್ದು,ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ, ರೈತರು ಪರದಾಡುವಂತಾಗಿದೆ.

ಸಾವಿರಾರು ರೂ. ಬೆಲೆ ಬಾಳುವ ರಾಸುಗಳು ಅನಾರೋಗ್ಯಕ್ಕೆ ತುತ್ತಾದಾಗ ಸೂಕ್ತ ಚಿಕಿತ್ಸೆ ಸಿಗದೇಮರಣ ಹೊಂದುತ್ತಿದ್ದು, ಮಾಲಿಕರು ಆರ್ಥಿಕ ನಷ್ಟಕ್ಕೆ ಒಳಾಗುತ್ತಿದ್ದಾರೆ. ಚಿಕಿತ್ಸೆ ಇರಲಿ, ಮರಣೋತ್ತರ ದೃಢೀಕರಣ ಪತ್ರ, ಮತ್ತಿತರ ದಾಖಲೆ ಪಡೆಯಲು ಸಾಧ್ಯವಾಗದೇ ಹೈನುಗಾರರು, ಕುರಿ, ಮೇಕೆ ಸಾಕಾಣಿಕೆದಾರರು ಸರ್ಕಾರಿ ಸೌಲಭ್ಯ, ಪರಿಹಾರ ಹಣ ಪಡೆಯಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.

ಶೇ.70 ಸಿಬ್ಬಂದಿ ಇಲ್ಲ: ಬಾಗೇಪಲ್ಲಿ ತಾಲೂಕು ಪಶು ಆಸ್ಪತ್ರೆಗಳಲ್ಲಿ 2 ಸಹಾಯಕ ನಿರ್ದೇಶಕರಹುದ್ದೆಗಳ ಪೈಕಿ ಒಂದು ಭರ್ತಿ ಆಗಿದೆ. 10 ಪಶುವೈದ್ಯರ ಹುದ್ದೆ ಪೈಕಿ 4 ಖಾಲಿ ಇವೆ, ಇರುವ

ಒಂದು ಜಾನುವಾರು ಅಭಿವೃದ್ಧಿ ಅಧಿಕಾರಿಹುದ್ದೆ ಖಾಲಿ ಇದೆ, 4 ಜಾನುವಾರು ಅಧಿಕಾರಿ ಗಳ ಹುದ್ದೆಗಳ ಪೈಕಿ ಮೂರು ಖಾಲಿ ಇವೆ. 9 ಪಶುವೈದ್ಯಕೀಯ ಪರೀಕ್ಷಕರ ಹುದ್ದೆ ಪೈಕಿ 8ಖಾಲಿ, 21 ಡಿ ಗ್ರೂಪ್‌ ನೌಕಕರ ಹುದ್ದೆ ಪೈಕಿ 17ಖಾಲಿ ಇವೆ. ಒಟ್ಟು 51 ಹುದ್ದೆಗಳ ಪೈಕಿ 14 ಮಾತ್ರ ಭರ್ತಿ ಆಗಿವೆ. ಉಳಿದ 37 ಹುದ್ದೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯೇ ಇಲ್ಲ. ಶೀತ, ಜ್ವರದ ಸಮಸ್ಯೆ: ತಾಲೂಕು ವ್ಯಾಪ್ತಿಯಲ್ಲಿ 1.46 ಲಕ್ಷ ಕುರಿ, 36 ಸಾವಿರ ಮೇಕೆ, 32 ಸಾವಿರ ಸೀಮೆಹಸು, ಎಮ್ಮೆಗಳಿದ್ದು, ಒಟ್ಟು 2.14 ಲಕ್ಷ ಜಾನುವಾರುಗಳಿವೆ. ತಾಲೂಕಿನ 25 ಸಾವಿರ ಕುಟುಂಬಗಳು ಹೈನುಗಾರಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿಬಿದ್ದ ಮಳೆಗೆ ಕುರಿ, ಮೇಕೆಗಳಲ್ಲಿ ಶೀತ ಹೆಚ್ಚಾಗಿ ನೀಲಿ ನಾಲಿಗೆ ರೋಗ ಮತ್ತು ಕಾಲಿನ ಸಂದುಗಳಲ್ಲಿ ಹುಣ್ಣು ರೋಗ ಕಾಣಿಸಿಕೊಂಡಿದೆ. ಸೀಮೆ ಹಸು, ಎಮ್ಮೆಯಂತಹಜಾನುವಾರುಗಳಲ್ಲಿ ಕಾಲುಬಾಯಿ ಜ್ವರಕಾಣಿಸಿಕೊಳ್ಳುತ್ತಿದೆ. ವೈದ್ಯರ ಕೊರತೆಯಿಂದಸಕಾಲಕ್ಕೆ ಚಿಕಿತ್ಸೆ ಲಭಿಸದೆ, ಜಾನುವಾರುಗಳು ಅನಾರೋಗ್ಯದಿಂದ ಸಾವನ್ನಪ್ಪುತ್ತಿವೆ.

ಜಾನುವಾರು ಕಳೆದುಕೊಂಡು ನಷ್ಟಕ್ಕೆ ಗುರಿಯಾಗಿರುವ ರೈತರು ರಾಜ್ಯ ಸರ್ಕಾರದ ಕುರಿ ಮತ್ತು ಹುಣ್ಣೆ ಅಭಿವೃದ್ಧಿ ಮಂಡಳಿಯ ಅನುಗ್ರಹ ಯೋಜನೆಯಡಿಯಲ್ಲಿ ಸಿಗುವ 5ಸಾವಿರ ರೂ. ಪರಿಹಾರ ಹಣಕ್ಕಾಗಿ ಅರ್ಜಿಸಲ್ಲಿಸಬೇಕಿದೆ. ಇದಕ್ಕೆ ಪಶು ಇಲಾಖೆಯಿಂದಮರಣೋತ್ತರ ವರದಿ ದೃಢೀಕರಣ ಪತ್ರ ಕಡ್ಡಾಯವಾಗಿದ್ದು, ಅದನ್ನು ನೀಡುವ ವೈದ್ಯರು ಇಲ್ಲ. ಸರ್ಕಾರದ ಪರಿಹಾರ ಹಣಪಡೆದುಕೊಳ್ಳುವಲ್ಲಿ ತಾಲೂಕಿನ ಬಹುತೇಕ ರೈತರು ವಂಚಿತರಾಗುತ್ತಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಗೂಳೂರು, ಪಾತಪಾಳ್ಯ ಸೇರಿ ನೂತನ ಚೇಳೂರು ತಾಲೂಕುಕೇಂದ್ರದಲ್ಲಿ ಪಶು ವೈದ್ಯ ಆಸ್ಪತ್ರೆಗಳಲ್ಲಿ ಕಳೆದ 4ವರ್ಷಗಳಿಂದ ವೈದ್ಯರೇ ಇಲ್ಲದೆ ಡಿ ಗ್ರೂಪ್‌ನೌಕರರು ಕಾಟಾಚಾರಕ್ಕೆ ಆಸ್ಪತ್ರೆಯ ಬಾಗಿಲು ತೆರೆದುಕೊಂಡಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಪಶು ವೈದ್ಯ ಕಚೇರಿಯಲ್ಲಿರುವ ಸಿಬ್ಬಂದಿ, ಔಷಧಿ ದಾಸ್ತಾನು ಹಾಗೂ ಸಲಕರಣೆಗಳ ಕೊರತೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ನಿಗಾವಹಿಸಿ,ರೈತರ ಸಮಸ್ಯೆಗಳ ಇತ್ಯರ್ಥಕ್ಕೆಮುಂದಾಗಬೇಕಾಗಿದೆ. ಜಿ.ಎಂ.ರಾಮಕೃಷ್ಣಪ್ಪ, ರೈತ, ಬಾಗೇಪಲ್ಲಿ

ಪಶು ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಬಗ್ಗೆ 6 ತಿಂಗಳ ಹಿಂದೆಯಷ್ಟೇ ಇಲಾಖೆ ಮೇಲಧಿಕಾರಿಗಳು, ಶಾಸಕಸುಬ್ಟಾರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಸಿಬ್ಬಂದಿ ಕೊರತೆ ಕಾರಣಜಾನುವಾರುಗಳಿಗೆ ಸಮರ್ಪಕ ವೈದ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಡಾ.ಎನ್‌.ಇ.ಕೃಷ್ಣಮೂರ್ತಿ, ಸಹಾಯಕನಿರ್ದೇಶಕ, ಪಶುಪಾಲನಾ ಇಲಾಖೆ,ಬಾಗೇಪಲ್ಲಿ.

ಟಾಪ್ ನ್ಯೂಸ್

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.