ಮನೆಗಳ -ಜಮೀನು ಸ್ವಾಧೀನ ತೆರವು ಕಾರ್ಯಾಚರಣೆ

Team Udayavani, Sep 14, 2021, 7:37 PM IST

gdftrr

ಗುಡಿಬಂಡೆ: ಉಚ್ಚನ್ಯಾಯಾಲಯ ತೀರ್ಪಿನ ಅದೇಶದಂತೆ ಹತ್ತಾರು ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ಗುಂಡ್ಲಹಳ್ಳಿ ಗ್ರಾಮದ ವಸತಿ ಕಟ್ಟಡಗಳನ್ನು ಮತ್ತು ಜಮೀನೀನ ಸ್ವಾಧೀನವನ್ನು ಉಪ ವಿಭಾಗಾಧಿಕಾರಿ ರಘುನಂದನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮ ಪಂಚಾಯ್ತಿಗೆ ಸೇರಿದ ಗುಂಡ್ಲಹಳ್ಳಿ ಗ್ರಾಮದ ಸರ್ವೆ ನಂಬರ್ ೨೦೩ ರಲ್ಲಿ ೧ ಎಕರೆ ಜಮೀನು ವಿಚಾರದಲ್ಲಿ ಉಚ್ಚನ್ಯಾಯಾಲಯದಲ್ಲಿ ತೆರವು ಮಾಡಿ ಸ್ವಾಧೀನದಾರರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದರಂತೆ ವಸತಿ ಮನೆಗಳು ನಿರ್ಮಾಣ ಮಾಡಿಕೊಂಡಿದ್ದ ನಾಲ್ವರಿಗೆ ಮತ್ತು ಉಳಿಕೆ ಜಮೀನಿನ ಹಾಲಿ ಸ್ವಾಧೀನದಾರರಿಗೆ ನೋಟಿಸ್ ನೀಡಲಾಗಿದ್ದರು, ಇನ್ನೂ ತೆರವು ಮಾಡದೇ ಇದ್ದುದ್ದರಿಂದ ತಹಶೀಲ್ದಾರ್ ಸಿಗಬತುಲ್ಲಾ, ಸಿಪಿಐ ಲಿಂಗರಾಜು ಖುದ್ದು ಸ್ಥಳಕ್ಕೆ ಹೊಗಿ ಪರಿಶೀಲನೆ ಮಾಡಿ, ಮನೆ ತೆರವುಗೊಳಿಸುವಂತೆ ಪುನಃ ನಾಲ್ಕು ದಿನಗಳ ಕಾಲಾವಕಾಶ ಕೊಟ್ಟು, ಅವಧಿಯೊಳಗೆ ತೆರೆವು ಮಾಡದೇ ಇದ್ದರೆ ತಾಲ್ಲೂಕು ಅಡಳಿತದಿಂದ ತೆರವು ಮಾಡಲಾಗುವುದು ಎಂದು ತಿಳಿಸಿ ಬಂದಿದ್ದರು. ಆದರೂ ನಾಲ್ಕು ದಿನಗಳ ಅವಧಿ ನಂತರವು ತೆರವುಗೊಳಿಸದ ಕಾರಣ ಮಂಗಳವಾರ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ರಘುನಂದನ್ ನೇತೃತ್ವದಲ್ಲಿ, ಪೊಲೀಸ್ ರಕ್ಷಣೆಯಲ್ಲಿ ಎಲ್ಲಾ ಸಕಲ ಸಿದ್ದತೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ವಾಸವಿದ್ದ ನಾಲ್ಕು ಜನರ ಮನೆಗಳನ್ನು ಹೊರತು ಪಡಿಸಿ ೦-೩೪ ಗುಂಟೆ ಜಮೀನು ಸ್ವತ್ತಿನ ಸ್ವಾಧೀನವನ್ನು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ, ಗುಂಡ್ಲಹಳ್ಳಿ ಗ್ರಾಮದ ವೆಂಕಟಶಿವಪ್ಪ ಹಾಗೂ ಅವರ ಮಗ ಸಂತೋಷ ಉಪವಿಭಾಗದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಅದೇಶದಂತೆ ಉಚ್ಚನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು ವಿಚಾರಣೆ ನಡೆದು ತೀರ್ಪು ಅರ್ಜಿದಾರರ ಪರವಾಗಿ ಬಂದು ಈ ತಕ್ಷಣ, ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವವರನ್ನು ಮತ್ತು ಜಮೀನಿನಲ್ಲಿ ಹಾಲಿ ಸ್ವಾಧೀನ ಇರುವವರನ್ನು ತೆರವು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಅದೇಶ ಮಾಡಿದ್ದರು, ಅದರಂತೆ ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವ ನಾಲ್ವರಿಗೆ ಮತ್ತು ಜಮೀನು ಸ್ವಾಧೀನದಾರರಿಗೆ ನೋಟಿಸ್ ನೀಡಲಾಗಿದ್ದರೂ, ಅವರು ತೆರವು ಗೊಳಿಸಿದ ಕಾರಣ, ಖುದ್ದು ನಿಂತು ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಉಳಿದಂತೆ ಮನೆಯಲ್ಲಿ ಹಾಲಿ ವಾಸ ಇರುವವರು ಮನೆಗಳನ್ನು ತೆರವುಗೊಳಿಸಲು ಕಾಲವಕಾಶ ಕೋರಿ ಮನವಿ ಸಲ್ಲಿಸಿದ್ದು, ಸದರಿ ಮನವಿಯನ್ನು ಮಾನವೀಯ ದೃಷ್ಟಿಯಿಂದ ಅಂಗೀಕರಿಸಿ, ಸದರಿ ಮನವಿಗಳನ್ನು ಉಚ್ಚನ್ಯಾಯಾಲಯಕ್ಕೆ ಮುಂದಿನ ಕ್ರಮಕ್ಕೆ ಸಲ್ಲಿಸಲಾಗಿದೆ, ಮನೆಗಳನ್ನು ಹೊರತು ಪಡಿಸಿ, ಉಳಿಕೆ ಜಮೀನನ್ನು ವೆಂಕಟಶಿವಪ್ಪ ರವರಿಗೆ ವರ್ಗಾಯಿಸಲಾಗುವುದು ಎಂದರು.

ಈ ಸಂದರ್ಬದಲ್ಲಿ ಡಿ.ವೈ.ಎಸ್.ಪಿ. ವಾಸುದೇವ್, ತಹಶೀಲ್ದಾರ್ ಸಿಗ್ಬತುಲ್ಲಾ, ವೃತ್ತ ನಿರೀಕ್ಷಕ ಲಿಂಗರಾಜು, ರಾಜಸ್ವ ನಿರೀಕ್ಷಕ ಅಮರನಾರಾಯಣ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Ireland postponed Aussie series

Dublin; ಆಸೀಸ್‌ ಸರಣಿ ಮುಂದೂಡಿದ ಐರ್ಲೆಂಡ್‌

“Will not play T20 World Cup for West Indies”: Sunil Narine

T20 Cricket: “ವಿಂಡೀಸ್‌ ಪರ ಟಿ20 ವಿಶ್ವಕಪ್‌ ಆಡಲ್ಲ’: ಸುನೀಲ್‌ ನಾರಾಯಣ್‌ ಸ್ಪಷ್ಟ ನುಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.