ಲಾಕ್‌ಡೌನ್‌ಗೆ ಕ್ಯಾರೆ ಇಲ್ಲ!

Team Udayavani, Mar 24, 2020, 4:18 PM IST

ಚಿಕ್ಕಬಳ್ಳಾಪುರ: ಜನತಾ ಕರ್ಫ್ಯೂ ಶಿಸ್ತು ಬದ್ಧವಾಗಿ ಆಚರಿಸಿ ಗಮನ ಸೆಳೆದ ಜಿಲ್ಲೆಯ ಜನತೆ ಸೋಮವಾರ ಮಾತ್ರ ಕೋವಿಡ್ 19 ತೀವ್ರತೆ ಆರಿಯದೇತವ ಕಾರ್ಯಗಳಲ್ಲಿ ತೊಡಗಿದ್ದ ದೃಶ್ಯಗಳು ಕಂಡು ಬಂದವು.

ಜಿಲ್ಲೆಯಲ್ಲಿ ಎರಡು ಕೋವಿಡ್ 19 ಸೋಂಕಿತರು ದೃಢಪಟ್ಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಲಾಕ್‌ಡೌನ್‌ಗೆ ಸೂಚಿಸಿದರೂ ಸಾರ್ವಜನಿಕದ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಜನ ಜಿಲ್ಲಾ ಕೇಂದ್ರ ಸೇರಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ವಿವಿಧ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದವು. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಆಟೋ, ಇತರೆ ಸರಕು ಸಾಗಾಣಿಕಾ ವಾಹನಗಳು ನಗರದಲ್ಲಿ ಯಾವುದೇ ಅಡೆತಡೆ ಇಲ್ಲದೆಸಂಚರಿಸಿದವು. ಪೊಲೀಸರು ವಾಹನಗಳ ಮೂಲಕ ಸಾರ್ವಜನಿಕರಿಗೆ ಪದೆಪದೇ ಎಚ್ಚರಿಕೆ ನೀಡಿ ಗುಂಪು ಸೇರಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಮತ್ತೂಂದಡೆಜಿಲ್ಲಾ ಕೇಂದ್ರದಲ್ಲಿ ನಿಷೇದಾಜ್ಞೆ ಉಲ್ಲಂಘಿಸಿ ತೆರೆಯಲಾಗಿದ್ದ ಅಂಗಡಿ ಮಳಿಗೆ ಪೊಲೀಸರೇ ಕಾರ್ಯಚರಣೆ ನಡೆಸಿ ಬಂದ್‌ ಮಾಡಿಸಿದರು. ಜಿಲ್ಲಾದ್ಯಂತ ಸಾಮಾಜಿಕ ಅಂತರ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಳ್ಳಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ