ಟ್ಯಾಂಕರ್‌ ಪಲ್ಟಿ: ಹಾಲಿನ ಹೊಳೆ; ಮುಗಿಬಿದ್ದ ಜನರು 

Team Udayavani, Dec 19, 2017, 3:46 PM IST

ಚಿಕ್ಕಬಳ್ಳಾಪುರ: ನಗರದ ಹೊರವಲಯದ ವಾಪಸಂದ್ರ ಬಳಿ ಹಾಲಿನ ಟ್ಯಾಂಕರೊಂದು ಪಲ್ಟಿಯಾಗಿ  ಸಾವಿರಾರು ಲೀಟರ್‌ ಹಾಲು ಮಣ್ಣು ಪಾಲಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

ಸಾದಲಿ ಗ್ರಾಮದ ಹಾಲಿನ ಶೀತಲಿಕರಣ ಘಟಕದಿಂದ  ಯಲಹಂಕ ಕೆಎಂಎಫ್ ಡೈರಿಗೆ ಹಾಲು ತುಂಬಿಕೊಂಡು ಸಾಗುತ್ತಿದ್ದ ಟ್ಯಾಂಕರ್‌ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. 

ರಸ್ತೆಯ ತುಂಬೆಲ್ಲಾ ಹಾಲು ಹೊಳೆಯಾಗಿ ಹರಿದಿದ್ದು, ಗಮನಿಸಿದ ಜನರು ಸಿಕ್ಕ ಸಿಕ್ಕ ಬಾಟಲಿಗಳಲ್ಲಿ ಲೀಕ್‌ ಆಗುತ್ತಿದ್ದ ಹಾಲನ್ನು ತುಂಬಿಕೊಂಡರೆ , ಇನ್ನು ಕೆಲವರು  ಕೊಡಪಾನಗಳನ್ನು ತಂದು ಹಾಲು ತುಂಬಿಸಿಕೊಂಡರು. 

ಟ್ಯಾಂಕರ್‌ನಲ್ಲಿ ಬಹುಪಾಲು ಹಾಲು ಮಣ್ಣು ಪಾಲಾಗಿದ್ದು, ಕ್ರೇನ್‌ಮೂಲಕ ಟ್ಯಾಂಕರನ್ನು ತೆರವುಗೊಳಿಸಲಾಗಿದೆ. 

ಟ್ಯಾಂಕರ್‌ನಲ್ಲಿದ್ದ ಚಾಲಕ, ಕ್ಲೀನರ್‌ ಮತ್ತು ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ...

  • ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ...

  • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

  • ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು...

  • ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು...

  • ಶಿರಸಿ: ಸಿದ್ದಾಪುರ ಕಾನಸೂರು ಬಳಿ ವಿಧವಾ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ನಡೆ ವಿರೋಧಿಸಿ ಜಿಲ್ಲಾ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ...