Udayavni Special

ಜಿಪಂ ಉಪಾಧ್ಯಕ್ಷೆ ಪದಚ್ಯುತಿಗೆ ಮುಹೂರ್ತ ಫಿಕ್ಸ್‌!


Team Udayavani, May 12, 2020, 10:21 AM IST

gpamge muhurta

ಚಿಕ್ಕಬಳ್ಳಾಪುರ: ಜಿಪಂನ ಆಡಳಿತರೂಢ ಕಾಂಗ್ರೆಸ್‌ ಸದಸ್ಯರ ನಡುವೆ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಇದೀಗ ಉಪಾಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಮೇ 20ಕ್ಕೆ ಮುಹೂರ್ತ ಫಿಕ್ಸ್‌  ಆಗಿದ್ದು, ಅವಿಶ್ವಾಸ ಮಂಡನೆಗೆ ಕರೆದಿರುವ ಸಭೆ ಜಿಲ್ಲೆಯ ರಾಜ ಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಒಟ್ಟು 28 ಸದಸ್ಯ ಬಲ ಇರುವ ಜಿಪಂನಲ್ಲಿ21 ಕಾಂಗ್ರೆಸ್‌, 5 ಜೆಡಿಎಸ್‌ ಹಾಗೂ ಸಿಪಿಎಂ ಹಾಗೂ ಬಿಜೆಪಿ  ತಲಾ ಒಬ್ಬರು ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯುವಷ್ಟು ಸಂಖ್ಯಾ ಬಲ ಇದ್ದರೂ ಕಾಂಗ್ರೆಸ್‌ನಲ್ಲಿ ಪದೇ ಪದೆ ಸ್ಫೋಟಗೊಳ್ಳುತ್ತಿರುವ ಭಿನ್ನಮತ ಈಗಾಗಲೇ ಜಿಪಂನಲ್ಲಿ ಮೂರು ಮಂದಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ.

ಅವಿಶ್ವಾಸಕ್ಕೆ ನಿರ್ಧಾರ: ಕಳೆದ ಬಾರಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಪಿ.ಎನ್‌. ಪ್ರಕಾಶ್‌ರನ್ನು ಸೋಲಿಸಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ಬಿ.ಚಿಕ್ಕನರ  ಸಿಂಹಯ್ಯ ಗೆಲುವು ಸಾಧಿಸಿದ್ದರು. ಆದರೆ ತುಕತೆಯಿಂದ ಎರಡೂವರೆ ವರ್ಷ ಅಧಿಕಾರ ಅವಧಿ ಮುಗಿದರೂ ಉಪಾಧ್ಯಕ್ಷೆ ಪಿ.ನಿರ್ಮಲಾ ಕುರ್ಚಿಗೆ ಅಂಟಿ ಕೊಂಡಿ  ದ್ದಾರೆಂದು  ವರ ವಿರುದಟಛಿ ಸ್ವಪಕ್ಷೀಯ ಸದ ಸ್ಯರೆ ಅವಿಶ್ವಾಸ ಮಂಡನೆ ಮಾಡಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿರೊಧಿ ಬಣದ ನಡೆ ಏನು?: ಮೊದಲ ಬಾರಿಗೆ ಜಿಪಂ  ಪಿ.ಎನ್‌.ಕೇಶವ ರೆಡ್ಡಿ ಜೊತೆ ಶಿಡ್ಲಘಟ್ಟ ತಾಲೂಕಿನ ಜಂಗಮ ಕೋಟೆ ಕ್ಷೇತ್ರದ ಪಿ . ನಿರ್ಮಲ ಅವಿರೋಧ ವಾಗಿ ಆಯ್ಕೆಗೊಂಡಿದ್ದರು. ಆದರೆ ಪಕ್ಷ ದೊಳಗೆ  ಪೂರ್ವ ನಿಗದಿಯಂತೆ ಎರಡೂವರೆ ವರ್ಷ ಮುಗಿದರೂ ರಾಜೀನಾಮೆ ನೀಡು ವಂತೆ ಪಕ್ಷ  ಸೂಚಿಸಿದರೂ ಕ್ಯಾರೆ ಎನ್ನದ ಉಪಾಧ್ಯಕ್ಷೆ ಮೇಲೆ ಈಗ ಕಾಂಗ್ರೆಸ್‌ ಅವಿಶ್ವಾಸ ಮಂಡನೆಯ ಬ್ರಹ್ಮಾಸಉಯೋಗಿಸಿದರೂ  ಅದು ಯಶಸ್ಸು ಆಗುತ್ತದೆಯೆ?

ಕಾಂಗ್ರೆಸ್‌ ವಿರೋಧಿ ರಾಜಕೀಯ ಬಣ ಈ ವಿಚಾರದಲ್ಲಿ ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಜಿಪಂಗೆ ಆರಿಸಿ ಬಂದಿರು ವವರ ಪೈಕಿ ಬಿಸಿ  ಎಂ (ಎ) ಮಹಿಳಾ ಮೀಸಲಿಗೆ ನಿರ್ಮಿಲ ಬಿಟ್ಟರೆ ಗೌರಿಬಿದನೂರು ತಾಲೂಕಿನ ತೊಂಡೇ ಬಾವಿ ಜಿಪಂ ಸದಸ್ಯೆ ಸರಸ್ವತಮ್ಮ ಮಾತ್ರ ಇದ್ದು, ಇವರ ಆಯ್ಕೆ ಅವಿರೋಧ ನಡೆ ಯುತ್ತಾ ಅಥವಾ ಕಳೆದ ಬಾರಿ ಜಿಪಂ ಅಧ್ಯಕ್ಷರ ಚುನಾವಣೆಯಂತೆ ಉಪಾಧ್ಯಕ್ಷರ ಅವಿಶ್ವಾಸ  ಮಂಡನಾ ಸಭೆ ಮೇಲಾಟಗಳಿಗೆ ಸಾಕ್ಷಿಯಾ ಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಬೆಳಗ್ಗೆ 11:30ಕ್ಕ ಸಭೆ: ಉಪಾಧ್ಯಕ್ಷೆ ನಿರ್ಮಲಾ ವಿರುದ ಅವಿಶ್ವಾಸ ನಿಟ್ಟಿನಲ್ಲಿ ಮೇ 20 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಸಭೆಯನ್ನು ಬೆಂಗಳೂರು ಪ್ರಾದೇಶಿಕ ಅಭಿವೃದಿಟಛಿ ಆಯುಕ್ತರಾದ ವಿ.ಪಿ.ಇಕ್ಕೇರಿ ಸಭೆ ಕರೆದಿದ್ದಾರೆ.  ಮೇ 20ಕ್ಕೆ ಜಿಪಂ ಉಪಾಧ್ಯಕ್ಷೆ

ನಿರ್ಮಲಾ ವಿರುದ ಅವಿಶ್ವಾಸ ಮಂಡನೆ ಸಭೆ ಕರೆಯಲಾಗಿದೆ. ಇದು ಪಕ್ಷದ ನಿರ್ಧಾರ. ಈ ಹಿಂದೆಯು ಅವ ರಿಗೆ ರಾಜೀನಾಮೆ ನೀಡುವಂತೆ ಸೂಚಿಸ ಲಾಗಿತ್ತು. ಆದರೆ ಅವರು ನೀಡಿರಲಿಲ್ಲ.  ಅವರನ್ನು  ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅವಿರೋಧವಾಗಿ ಆಯ್ಕೆ ಯಾಗುವ ವಿಶ್ವಾಸವಿದೆ. 
-ಪಿ.ಎನ್‌.ಪ್ರಕಾಶ್‌, ಕಾಂಗ್ರೆಸ್‌ ಜಿಪಂ ಸದಸ್ಯ

* ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

2022ರ ಆಸ್ಕರ್‌ ಅರ್ಹತಾ ಪಟ್ಟಿಯಲ್ಲಿ “ಮಂಡೇಲಾ’, “ನಯತ್ತು’ ಚಿತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

corruption in the DCC Bank – Allegation

ಡಿಸಿಸಿ ಬ್ಯಾಂಕ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

1-ab

ಚಿಂತಾಮಣಿ: ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಭೇಟಿ

Untitled-2

ಚಿಂತಾಮಣಿ: ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

Poor Diet- Notice to Guidelines

ಕಳಪೆ ಆಹಾರ: ಗುತಿಗೆದಾರನಿಗೆ ನೋಟಿಸ್‌

ಕೋರಪರ್ತಿ ಕೆರೆ ಅಭಿವೃದ್ಧಿಗೆ ಕೋಟಿ ರೂ. ಮೀಸಲು

ಕೋರಪರ್ತಿ ಕೆರೆ ಅಭಿವೃದ್ಧಿಗೆ ಕೋಟಿ ರೂ. ಮೀಸಲು

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ದಾಖಲೆ ಡೋಸ್‌:  ಆರೋಗ್ಯ ಕ್ಷೇತ್ರದಲ್ಲಿ ಹೊಸ ಮನ್ವಂತರ

ದಾಖಲೆ ಡೋಸ್‌: ಆರೋಗ್ಯ ಕ್ಷೇತ್ರದಲ್ಲಿ ಹೊಸ ಮನ್ವಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.