ನಂದಿಗಿರಿಧಾಮ ಪ್ರವಾಸೋದ್ಯಮ ಇಲಾಖೆಗೆ: ಅಪಸ್ವರ
ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲೇ ಇರುತ್ತದೆ ಎಂದಿದ್ದ ಉಸ್ತುವಾರಿ ಸಚಿವರು, ಸರ್ಕಾರದ ನಡೆಗೆ ಅಸಮಾಧಾನ
Team Udayavani, Jan 5, 2021, 6:53 PM IST
ಚಿಕ್ಕಬಳ್ಳಾಪುರ: ಕರ್ನಾಟಕದ ಊಟಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ಸೌಂದರ್ಯತಾಣ ನಂದಿಗಿರಿಧಾಮದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ವಹಿಸುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜಿಲ್ಲೆಯ ಪರಿಸರ ಪ್ರೇಮಿಗಳು, ನಾಗರಿಕರು ಅಪಸ್ವರ ಎತ್ತಿದ್ದಾರೆ.
ಜಿಲ್ಲೆಯ ನಂದಿಗಿರಿಧಾಮದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲು ಈ ಹಿಂದೆ ರಾಜ್ಯ ಸರ್ಕಾರನಿರ್ಧಾರ ಕೈಗೊಳ್ಳುವ ಹಂತದಲ್ಲಿತ್ತು. ಆವೇಳೆ, ಜಿಲ್ಲೆಯ ಪರಿಸರ ಪ್ರೇಮಿಗಳು ಹಾಗೂ ತೋಟಗಾರಿಕಾ ತಜ್ಞರುಮತ್ತು ನಿವೃತ್ತ ಇಲಾಖಾಧಿಕಾರಿಗಳುತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಹೀಗಾಗಿ ಸ್ವತಃ ತೋಟಗಾರಿಕೆಇಲಾಖೆ ಸಚಿವ ನಾರಾಯಣಗೌಡಮತ್ತು ಅಧಿಕಾರಿಗಳು ಜಿಲ್ಲೆಯನಂದಿಗಿರಿಧಾಮಕ್ಕೆ ಭೇಟಿ ನೀಡಿ
ಯಾವುದೇ ಕಾರಣಕ್ಕೂ ನಂದಿಗಿರಿಧಾಮದ ನಿರ್ವಹಣೆಯನ್ನುತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲುಅವಕಾಶ ನೀಡುವುದಿಲ್ಲ. ಈ ಸಂಬಂಧಮುಖ್ಯಮಂತ್ರಿಗಳೊಂದಿಗೆ ಸಮಾ ಲೋಚನೆ ನಡೆಸುತ್ತೇನೆ ಎಂದುತೋಟಗಾರಿಕೆ ಸಚಿವರು ಭರವಸೆ ನೀಡಿದರು.
7 ಕೋಟಿ ರೂ. ಬಿಡುಗಡೆ:
ತೋಟಗಾರಿಕೆ ಸಚಿವರ ಭರ ವಸೆಯ ನಡುವೆಯೂ ಕೆಲವೊಂದು ಮಾರ್ಪಾಟುಮಾಡಿ ಸರ್ಕಾರ ನಂದಿಗಿರಿಧಾಮದನಿರ್ವಹಣೆ ಯನ್ನು ಪ್ರವಾಸೋದ್ಯಮಇಲಾಖೆಗೆ ವಹಿಸಿದೆ. ಪ್ರವಾಸೋದ್ಯಮದ ಇಲಾಖೆಯಿಂದ ನಂದಿ ಗಿರಿಧಾಮದಅಭಿವೃದ್ಧಿಗಾಗಿ 7 ಕೋಟಿ ರೂ.ಗಳುಮಂಜೂರಾಗಿದೆ. ಅದಕ್ಕಾಗಿ ಜಿಲ್ಲಾಡಳಿತಒಂದು ಕ್ರಿಯಾ ಯೋಜನೆ ಯನ್ನೂತಯಾರಿಸಿದೆ. ಅದನ್ನು ಪರಿಶೀಲಿಸಿ ನಂತರ ನಂದಿಗಿರಿಧಾಮವನ್ನು ವೈಜ್ಞಾನಿಕವಾಗಿಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಮಹಾರಾಜರು ತೋಟಗಾರಿಕೆಗೆ ನೀಡಿದ್ದರು :
1914ರಲ್ಲಿ ಮೈಸೂರು ಮಹಾರಾಜರು ನಂದಿಗಿರಿಧಾಮದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ನೀಡಿದರು.ಅಂದಿನಿಂದ ಇದುವರೆಗೆ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆಅಗತ್ಯ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಇಲಾಖೆ ಶ್ರಮಿಸುತ್ತಿರುವುದು ವಿಶೇಷ. ಜೀವ ವೈವಿಧ್ಯ ಮತ್ತು ಹಲವಾರು ನದಿಗಳ ಉಗಮ ಸ್ಥಾನವಾಗಿರುವ ನಂದಿಗಿರಿಧಾಮ ಅರಣ್ಯ ಸಂಪತ್ತನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಪ್ರವಾಸಿಗರು ಪರಿಸರಮತ್ತು ಆಧ್ಯಾತ್ಮಿಕ ಕೇಂದ್ರಕ್ಕೆ ಧಕ್ಕೆ ಮಾಡದಿರಲು ಕಠಿಣ ನಿಬಂಧನೆಗಳನ್ನು ಜಾರಿಗೊಳಿಸ ಬೇಕೆಂದು ಒತ್ತಾಯ ಸಹ ಕೇಳಿ ಬಂದಿದೆ.
ರಾಜ್ಯ ಸರ್ಕಾರ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ನಿರ್ವಹಣೆ ಜವಾಬ್ದಾರಿ ನೀಡಿದೆ. ಪಾರಂಪರಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರವೂ ಹೌದು.ಇಲ್ಲಿನ ಜೀವ ವೈವಿಧ್ಯತೆ ಮತ್ತು ಅರಣ್ಯ ಸಂಪತ್ತು ಸಂರಕ್ಷಣೆಗೆ ಕಠಿಣ ನಿಬಂಧನೆಗಳನ್ನು ಪ್ರವಾಸೋದ್ಯಮಇಲಾಖೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. –ಆಂಜನೇಯ ರೆಡ್ಡಿ, ಪರಿಸರ ಪ್ರೇಮಿ, ಚಿಕ್ಕಬಳ್ಳಾಪುರ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444