ನೈಸರ್ಗಿಕ ಸಂಪನೂಲ್ಮ ರಕ್ಷಣೆ ಅಗತ್ಯ

Team Udayavani, Apr 23, 2019, 3:16 AM IST

ಚಿಕ್ಕಬಳ್ಳಾಪುರ: ನೈಸರ್ಗಿಕವಾಗಿ ಸಿಗುತ್ತಿರುವ ಸಂಪನ್ಮೂಲಗಳ ಮಾರಣಹೋಮ ತಡೆಯದಿದ್ದರೆ ಭವಿಷ್ಯದ ದಿನಗಳಲ್ಲಿ ಮನುಷ್ಯನ ಜೀವನ ವಿನಾಶದ ಅಂಚಿಗೆ ಬಂದು ತಲುಪುತ್ತದೆ. ಮನುಷ್ಯನಷ್ಟೇ ಸಕಲ ಜೀವರಾಶಿಗಳಿಗೂ ಭೂಮಿ ಮೇಲೆ ಬದುಕುವ ಹಕ್ಕು ಇದೆ ಎಂಬುದನ್ನು ಮಾನವ ಮನಗಾಣಬೇಕೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ ಹಾಗೂ ಅರಣ್ಯ ಇಲಾಖೆ, ಸಾಮಾಜಿ ಅರಣ್ಯ ವಿಭಾಗ ಮತ್ತು ಪ್ರಾದೇಶಿಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿಯ ಮೇಲೆ ಎಲ್ಲ ಜೀವರಾಶಿಗಳು ಸಮಾನವಾಗಿ ಬದುಕುವ ಹಕ್ಕುನ್ನು ಪಡೆದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ನಗರೀಕರಣದ ಹೆಸರಿನಲ್ಲಿ ಮನುಷ್ಯನ ತನ್ನ ಸ್ವಾರ್ಥ ಸಾಧನೆಗೆ ಪರಿಸರ ಮೇಲೆ ಮಾಡುತ್ತಿರುವ ದೌರ್ಜನ್ಯ, ದಬ್ಟಾಳಿಕೆಯಿಂದ ನೈಸರ್ಗಿಕ ಸಂಪನೂಲ್ಮಗಳ ಮಾರಣ ಹೋಮ ನಡೆಯುತ್ತಿದೆ.

ಇದರಿಂದ ಪರಿಸರ ಅಸಮತೋಲನಕ್ಕೆ ಕಾರಣವಾಗಿ ಆರೋಗ್ಯ, ಕೃಷಿ, ಅಭಿವೃದ್ಧಿ ಮತ್ತಿತರ ಕ್ಷೇತ್ರಗಳಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿದೆ. ಅರಣ್ಯ ಸಂರಕ್ಷಣೆ ಆದರೆ ಮಾತ್ರ ಭೂಮಿ ಸಂರಕ್ಷಣೆ ಸಾಧ್ಯ. ಅತಿಯಾದ ಮಾಲಿನ್ಯದಿಂದ ಇಂದು ದೇಶದಲ್ಲಿ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಜೀವ ಸಂಕುಲ ವಾಸಿಸುವುದು ಕಷ್ಟಕರವಾಗಲಿದೆ ಎಂದರು.

ರಾಸಾಯನಿಕ ಗೊಬ್ಬರ ಬೇಡ: ಭೂಮಿಯ ಸವಕಳಿಯನ್ನು ತಡೆಯಬೇಕು. ಇಂದಿನ ವಿದ್ಯಾರ್ಥಿ, ಯುವ ಸಮಯದಾಯಕ್ಕೆ ಭೂಮಿಯ ಮಹತ್ವವನ್ನೇ ನಾವು ತಿಳಿಸುತ್ತಿಲ್ಲ. ಪ್ರತಿಯೊಬ್ಬರಿಗೂ ಹೆತ್ತ ತಾಯಿ ಎಷ್ಟು ಮುಖ್ಯವೋ ಅಷ್ಟೇ ಭೂಮಿ ತಾಯಿ ಕೂಡ ಮುಖ್ಯ. ದೇಶ ಉಳಿಯಬೇಕಾದರೆ ಭೂಮಿ ಉಳಿಯಬೇಕು. ಜನತೆಗೆ ಆಹಾರ, ನೀರು ಸಿಗಬೇಕಾದರೆ ಭೂಮಿ ಉಳಿಯಬೇಕು. ಹೆಚ್ಚಿನ ಇಳುವರಿ ಆಸೆಗೆ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಬರದು ಎಂದು ಬಿಡಬೇಕೆಂದು ಸಲಹೆ ನೀಡಿದರು.

ತಾಪಂ ಇಒ ಕೆ.ಪಿ.ಸಂಜೀವಪ್ಪ ಮಾತನಾಡಿ, ಭೂಮಿ ಮನುಷ್ಯನ ಜೀವನಕ್ಕೆ ಅಡಿಪಾಯ ಇದ್ದಹಾಗೆ. ಭೂಮಿ ಇಲ್ಲದೇ ನಾವು ಏನು ಮಾಡಲು ಸಾಧ್ಯವಿಲ್ಲ. ಆದರೆ ಇಂದು ಭೂಮಿ ಕೂಡ ಕಲುಷಿತವಾಗಿದೆ. ಇರುವ ಭೂಮಿ ಕೂಡ ಕಣ್ಮರೆಯಾಗಿ ಎಲ್ಲೆಡೆ ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಬದುಕುವುದು ಕಷ್ಟ: ಜಿಲ್ಲಾ ಪ್ರಾದೇಶಿಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮಧುಸೂಧನ್‌ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಮಾನವ ಅತಿಯಾಸೆಯಿಂದ ಔಷಧಿಯ ಸಸ್ಯ ಸೇರಿದಂತೆ ಮಹತ್ವದ ಮರ, ಬಳ್ಳಿಗಳು, ಪ್ರಾಣಿ, ಪಕ್ಷಿ ಸಂಕುಲಗಳನ್ನು ನಾವು ಇಂದು ಕಳೆದುಕೊಂಡಿದ್ದೇವೆ. ಪರಿಸರ ಅಸಮತೋಲ ಆದರೆ ಮನುಷ್ಯನಿಗೆ ಬದುಕುವುದು ಕಷ್ಟವಾಗಲಿದೆ. ಆದ್ದರಿಂದ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಲ್‌.ನಾರಾಯಣಸ್ವಾಮಿ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ದೇವರಾಜ್‌, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ತಮ್ಮೇಗೌಡ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಅರಣ್ಯಾಧಿಕಾರಿ ಪೂರ್ವಿಕ ರಾಣಿ, ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ಅಧಿಕಾರಿಗಳಾದ ರಂಗಸ್ವಾಮಿ, ಸಿ.ಕಲ್ಯಾಣರಾಜು ಉಪಸ್ಥಿತರಿದ್ದರು.

ಭೂ ಅತಿಕ್ರಮಣದಿಂದ ಭೂಮಿಯ ಮೇಲಿನ ಜೀವರಾಶಿಗಳು ಶಾಶ್ವತವಾಗಿ ನಾಶ ಹೊಂದುವ ಹೊಸ್ತಿಲಲ್ಲಿವೆ. ಮಾನವನು ಪ್ರಕೃತಿಯಿಂದ ಬೇಕಾದ ಸೇವೆ ಪಡೆದರೂ ದುರಾಸೆಯಿಂದಾಗಿ ಪ್ರಕೃತಿ ನಾಶಪಡಿಸುತ್ತಿದ್ದನೆ. ಪರಿಸರ ಸಮತೋಲನ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಅಗತ್ಯವಿದೆ.
-ಎಸ್‌.ಎಚ್‌.ಕೋರಡ್ಡಿ, ಜಿಲ್ಲಾ ನ್ಯಾಯಾಧೀಶರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ