ನಂದಿ️ಹಿಲ್ ನಲ್ಲಿ ಸಾಮಾಜಿಕ ಅಂತರಕ್ಕೆ ಬ್ರೇಕ್‌: ರಸ್ತೆಯಲ್ಲೇ ಮೋಜು ಮಸ್ತಿ, ಮದ್ಯಪಾನ- ಗಲಾಟೆ


Team Udayavani, Oct 4, 2020, 1:24 PM IST

ನಂದಿ️ಹಿಲ್

ಚಿಕ್ಕಬಳ್ಳಾಪುರ: ಕೋವಿಡ್ ಸೋಂಕಿನ ಕಾರಣ ಹಲವು ತಿಂಗಳುಗಳ ಕಾಲ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ದ ವಿಶ್ವ ವಿಖ್ಯಾತ ನಂದಿ️ ಗಿರಿಧಾಮದಲ್ಲಿ ಈಗ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ. ಆದರೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಕೃತಿ ಸೌಂದರ್ಯ ಅನುಭವಿಸುವ ಬದಲು ಕೆಲ ಪ್ರವಾಸಿಗರು ಮೋಜು ಮಸ್ತಿ ಮಾಡಿ ಇನ್ನಿತರೆ ಪ್ರವಾಸಿಗರಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ರವಿವಾರ ನಡೆದಿದೆ.

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ನಂದಿ️ ಗಿರಿಧಾಮಕ್ಕೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದೆಕೊಳ್ಳಬೇಕು ಜೊತೆಗೆ ಸ್ಯಾನಿಟೈಸರ್‌ ಬಳಸಬೇಕೆಂದು ಷರತ್ತುಗಳನ್ನು ವಿಧಿಸಿ ಜಿಲ್ಲಾಡಳಿತ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಿತ್ತು ಆದರೇ ಕೆಲ ಪ್ರವಾಸಿಗರು ಜಿಲ್ಲಾಡಳಿತ ನೀಡಿರುವ ಅವಕಾಶವನ್ನು ದುರುಪಯೋಗ ಮಾಡಿಕೊಂಡು ನಂದಿ️ ಗಿರಿಧಾಮವನ್ನು ಬಾರ್‌ ಮಾಡಿಕೊಂಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ:ನನಗೆ ಆಸ್ತಿಯ ಆಸೆಯಿಲ್ಲ, ಪತ್ನಿಯ ಅರೋಪಗಳಲ್ಲಿ ಹುರುಳಿಲ್ಲ: ಚಿತ್ರ ಸಾಹಿತಿ ಕೆ.ಕಲ್ಯಾಣ್

ಭಾನುವಾರದಂದು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿ️ದ್ದಾರೆ. ಆದರೇ ಕೋವಿಡ್ ಸೋಂಕು ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಪಾಲಿಸಿಲ್ಲ. ಬಹುತೇಕ ಪ್ರವಾಸಿಗರು ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಅಂತು ಇಲ್ಲವೇ ಇಲ್ಲ. ಇದರ ಮಧ್ಯೆ ಕೆಲವರು ರಸ್ತೆಯ ಮಧ್ಯೆ ಕಾರು ನಿಲ್ಲಿಸಿ ಬಾನೆಟ್‌ ಮೇಲೆ ಕುಳಿತು ಮದ್ಯಪಾನ‌ ಮಾಡಿ ಟ್ರಾಫಿಕ್‌ ಜಾಮ್‌ ಮಾಡಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದಾರೆ. ಪೊಲೀಸ್‌ ಇಲಾಖೆಯ ಅಧಿಕಾರಿಗಳು ನಿಯಮಗಳನ್ನು ಉಲಂಘಿಸಿ ಸಾರ್ವಜನಿಕವಾಗಿ ಮದ್ಯಪಾನ ಮಾಡಿ ಮೋಜು ಮಸ್ತಿ ಮಾಡಿರುವ ಪ್ರವಾಸಿಗರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ನಂದಿ️ ಗಿರಿಧಾಮ

ರಜಾ ದಿನವಾದ ಇಂದು ನಂದಿ️ಗಿರಿಧಾಮದಲ್ಲಿ ಪ್ರಕೃತಿಯ ಸೊಬಗು ಸೇವಿಸಲು ಸಹಸ್ರಾರು ಮಂದಿ️ ಪ್ರವಾಸಿಗರು ಬೆಳಿಗ್ಗೆಯಿಂದ ಆಗಮಿಸಿದ್ದಾರೆ. ಆದರೆ ಮುನ್ನೆಚ್ಚರಿಕೆ ಕ್ರಮಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿ️ದ್ದರಿಂದ ಟ್ರಾಫಿಕ್‌ ಜಾಮ್‌ ಆಗಿ ಎಲ್ಲರೂ ಕಿರಿಕಿರಿ ಅನುಭವಿಸುಂತಾಯಿತು. ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಇಲ್ಲಿ ಭದ್ರತೆ ವ್ಯವಸ್ಥೆ ಇಲ್ಲದೇ ಪ್ರವಾಸಿಗರು ಪರದಾಡುವಂತಾಯಿತು.

ನಂದಿ️ಗಿರಿಧಾಮ

ಈ ಕುರಿತು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್‌ ಅವರನ್ನು ಉದಯವಾಣಿ ಸಂಪರ್ಕಿಸಿದಾಗ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಂದಿ️ಗಿರಿಧಾಮದಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ. ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮಾಡುತ್ತಿರುವ ನಾಗರಿಕರಿಗೆ ನ‌ಗರಸಭೆ-ಪುರಸಭೆಯ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ. ಪ್ರವಾಸಿಗರು ಸಹ ತಮ್ಮ ಆರೋಗ್ಯದ ಕುರಿತು ಚಿಂತನೆ ಮಾಡಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಜೊತೆಗೆ ರಸ್ತೆಯಲ್ಲಿ ಕುಳಿತು ಮದ್ಯಪಾನ‌ ಮಾಡಿ ನಿಯಮವ‌ನ್ನು ಉಲಂಘಿಸಿರುವ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸುತ್ತೇವೆ ಎಂದಿ️ದ್ದಾರೆ.

ಟಾಪ್ ನ್ಯೂಸ್

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

1-sss

Hill collapse; ಶಿರಾಡಿ ಘಾಟ್ ನಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ: ನಟ ಚೇತನ್ ಆರೋಪ

MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ‌ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್

4-gudibande

Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು

ಪ್ರದೀಪ್ ಈಶ್ವರ್ ವಿರುದ್ದ ಅಸಮಾಧಾನ; ಗ್ಯಾರೆಂಟಿ ಯೋಜನೆ ಪ್ರಾಧಿಕಾರಕ್ಕೆ ಮುನಿಯಪ್ಪ ರಾಜೀನಾಮೆ

Pradeep Eshwar ವಿರುದ್ದ ಅಸಮಾಧಾನ; ಗ್ಯಾರೆಂಟಿ ಯೋಜನೆ ಪ್ರಾಧಿಕಾರಕ್ಕೆ ಮುನಿಯಪ್ಪ ರಾಜೀನಾಮೆ

3-Chikkaballapur

Chikkaballapur: ಹಾಲಿನ ದರ ಕಡಿತಗೊಳಿಸಿರುವ ಕೋಚಿಮುಲ್ ವಿರುದ್ದ ಉಪವಾಸ ಸತ್ಯಾಗ್ರಹ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

Chintamani: ಒಂದು ವರ್ಷದ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ಮಹಿಳೆ… ದೃಶ್ಯ ಸೆರೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-hardik

Tried our best; 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾರ್ದಿಕ್ ಪಾಂಡ್ಯ

Karadi-savu

Gundlupet: ಸಿಡಿಮದ್ದು ಸಿಡಿದು ಕರಡಿ ಮೃತ್ಯು

police crime

Andhra Pradesh; ಟಿಡಿಪಿ ಕಾರ್ಯಕರ್ತನಿಂದ ವೈಎಸ್‌ಆರ್‌ಸಿಪಿ ಕಾರ್ಯಕರ್ತನ ಬರ್ಬರ ಹತ್ಯೆ

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

Siruguppa ಭಾರೀ ಗಾಳಿ-ಮಳೆಗೆ ನೆಲಕ್ಕುರುಳಿದ ಮೊಬೈಲ್‌ ಟವರ್‌

1-sss

Hill collapse; ಶಿರಾಡಿ ಘಾಟ್ ನಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.