ಬಯಲುಸೀಮೆ ಪ್ರದೇಶದಲ್ಲಿ ಸೀಗಡಿ ಕೃಷಿ ಮಾಡಿ ಸೈ ಎಣಿಸಿಕೊಂಡ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ

Team Udayavani, Nov 20, 2020, 10:00 PM IST

ಬಯಲುಸೀಮೆ ಪ್ರದೇಶದಲ್ಲಿ ಸೀಗಡಿ ಕೃಷಿ ಮಾಡಿ ಸೈ ಎಣಿಸಿಕೊಂಡ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ

ಚಿಕ್ಕಬಳ್ಳಾಪುರ: ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೀಮಿತವಾಗಿದ್ದ ಸೀಗಡಿ ಕೃಷಿ ಇದೀಗ ಬಯಲುಸೀಮೆ ಪ್ರದೇಶಕ್ಕೆ ಎಂಟ್ರಿ ಕೊಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಎಂಬುವರು ಸಿಹಿನೀರಿನಲ್ಲಿ ಸೀಗಡಿ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ರಾಜ್ಯದ ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು,ಉತ್ತರ ಕರ್ನಾಟಕದ ಬಳ್ಳಾರಿ,ರಾಯಚೂರು ಜಿಲ್ಲೆ ಹಾಗೂ ನೆರೆಯ ಆಂಧ್ರಪ್ರದೇಶದ,ತಮಿಳುನಾಡು,ಮಹಾರಾಷ್ಟ್ರ ಪ್ರದೇಶದಲ್ಲಿ ಸೀಗಡಿ ಕೃಷಿ ಮಾಡುತ್ತಿದ್ದರು ಆದರೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅದರಲ್ಲೂ ಸಿಹಿ ನೀರಿನಲ್ಲಿ ಸೀಗಡಿ ಕೃಷಿ ಮಾಡುವ ಮೂಲಕ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಸೈ ಎಣಿಸಿಕೊಂಡಿದ್ದಾರೆ ಕೇವಲ 90 ದಿನಗಳಲ್ಲಿ 5-6 ಲಕ್ಷ ರೂಗಳನ್ನು ಬಂಡವಾಳ ಹಾಕಿ ಇದೀಗ ಸುಮಾರು 8 ಲಕ್ಷ ರೂಗಳು ಆದಾಯಗಳಿಸಿ ಮಾದರಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಎಂದರೇ ನೆನಪಾಗುವುದು ಬರಪೀಡಿತ ಜಿಲ್ಲೆ ಎಂದು ಆದರೇ ಮಳೆಯ ನೀರನ್ನು ಆಶ್ರಯಿಸಿಕೊಂಡು ರೇಷ್ಮೆ,ತರಕಾರಿ,ಹಾಲು ಉತ್ಪಾದನೆಯಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ಇದೀಗ ಸೀಗಡಿ ಕೃಷಿ ಪಾದಾರ್ಪಣೆ ಮಾಡಿದ್ದು ಮುಂದಿನ ದಿನಗಳಲ್ಲಿ ಬರಪೀಡಿತ ತಾಲೂಕಿನ ಜನರ ಇದು ವರದಾನವಾಗಬಹುದೆಂದು ನಿರೀಕ್ಷಿಸಲಾಗಿದೆ.

ಮುಕ್ಕಾಲು ಎಕರೆ ಪ್ರದೇಶದಲ್ಲಿ 100 ಅಡಿ ಅಗಲ 300 ಅಡಿ ಉದ್ದ ಹೊಂಡವನ್ನು ನಿರ್ಮಿಸಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಿಂದ 80 ಸಾವಿರ ವೆಚ್ಚ ಮಾಡಿ 2 ಲಕ್ಷ ಮರಿ ತಂದು ಸೀಗಡಿ ಕೃಷಿ ಮಾಡಿದ್ದಾರೆ ಅದಕ್ಕೆ ಮೂರು ತಿಂಗಳ ಅವಧಿಯಲ್ಲಿ 4 ಟನ್ ಫೀಡ್ ನೀಡಿದ್ದಾರೆ ಸೀಗಡಿ ಕೃಷಿ ಮಾಡಲು ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಿ ಮೂರು ತಿಂಗಳಿಗೆ 60 ಸಾವಿರ ರೂಗಳ ಕೂಲಿಯನ್ನು ನೀಡಿರುವ ರೈತ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಅವರಿಗೆ ನಿರೀಕ್ಷೆಗಿಂತಲೂ ಅಧಿಕ ಸೀಗಡಿ ಇಳುವರಿ ಬಂದಿದ್ದು ಮೊದಲ ಪ್ರಯೋಗದಲ್ಲಿ ಯಶಸ್ವಿಯಾದ ಬಳಿಕ ಸಂತಸಗೊಂಡಿದ್ದಾರೆ.

ಮೀನುಗಾರಿಕೆಯಲ್ಲಿ ಪಿಹೆಚ್‍ಡಿ ಮಾಡಿರುವ ಡಾ.ವಿಶ್ವನಾಥ್‍ರೆಡ್ಡಿ ಹಾಗೂ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ತಮ್ಮ ಜಮೀನಿನಲ್ಲಿ ನೀರಿನ ಹೊಂಡವನ್ನು ನಿರ್ಮಿಸಿ ಆಂಧ್ರಪ್ರದೇಶದ ನೆಲ್ಲೂಲು ಜಿಲ್ಲೆಯಿಂದ ಮರಿಗಳನ್ನು ತಂದು ಸಾಕಾಣಿಕೆ ಮಾಡಿ ಆದಾಯಗಳಿಸಿದ್ದೇನೆ ಆಂಧ್ರಪ್ರದೇಶದ ನೆಲ್ಲೂರಿನ ನೆಲ್ಲೂರು ಇಮ್ರಾನ್ ಪಾಷ ಎಂಬುವರಿಗೆ ಒಂದು ಕೆಜಿ 300 ರೂಗಳಂತೆ ನಾಲ್ಕೂವರೆ ಟನ್ ಸೀಗಡಿ ಮಾರಾಟ ಮಾಡಿದ್ದೇನೆ ಒಂದು ಕೆಜಿ 50 ಬಂದರೇ 350 ರೂಗಳ ದರಕ್ಕೆ ಮಾರಾಟವಾಗುವ ಸೀಗಡಿಯನ್ನು ಬೆಳೆಸಲು ಬಯಲುಸೀಮೆ ಜಿಲ್ಲೆಯ ಭಾಗಗಳ ರೈತರು ಪ್ರಯೋಗ ಮಾಡಿ ಆರ್ಥಿಕವಾಗಿ ಅಭಿವೃಧ್ಧಿ ಹೊಂದಬೇಕೆಂದು ಪ್ರಗತಿಪರ ರೈತ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಮನವಿ ಮಾಡಿ ಮುಂದಿನ ದಿನಗಳಲ್ಲಿ 10 ಎಕರೆ ಪ್ರದೇಶದಲ್ಲಿ ಸೀಗಡಿ ಕೃಷಿಯನ್ನು ವಿಸ್ತರಿಸಲು ಯೋಜನೆ ರೂಪಿಸಿ ಅದಕ್ಕಾಗಿ 100 ಸೋಲಾರ್ ದೀಪಗಳನ್ನು ಅಳವಡಿಸಿ ಪೂಲಕುಂಟಹಳ್ಳಿಯಲ್ಲಿ ಸೋಲಾರ್ ಘಟಕವನ್ನು ಆರಂಭಿಸಲು ಚಿಂತನೆ ಮಾಡಿದ್ದೇನೆ ಎಂದು ತಮ್ಮ ಅನುಭವನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ಕರಾವಳಿ ಭಾಗದಲ್ಲಿ ಬಳ್ಳಾರಿ,ರಾಯಚೂರು ಜಿಲ್ಲೆಗಳಲ್ಲಿ ಹಾಗೂ ನೆರೆ ಆಂಧ್ರ,ತಮಿಳುನಾಡು,ಮಹಾರಾಷ್ಟ್ರ, ಪ್ರದೇಶದಲ್ಲಿ ಸೀಗಡಿ ಸಾಕಾಣಿಕೆ ಮಾಡುತ್ತಾರೆ ಉಪ್ಪುನೀರಿನಲ್ಲಿ ಸಾಕಾಣಿಕೆ ಮಾಡುತ್ತಾರೆ ಆದರೇ ಇದೇ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಯೋಗ ಮಾಡಿ ಪೂಲಕುಂಟಹಳ್ಳಿ ರಘುನಾಥ್‍ರೆಡ್ಡಿ ಯಶಸ್ವಿಯಾಗಿದ್ದಾರೆ ಜಿಲ್ಲೆಯ ರೈತರು ಸೀಗಡಿ ಕೃಷಿ ಮಾಡಿ ಲಾಭಗಳಿಸಬಹುದಾಗಿದೆ ಒಂದು ಕೆಜಿ 300 ರೂಗಳಿಗೆ ಮಾರಾಟವಾಗುತ್ತದೆ ಇದರಲ್ಲಿ ಪ್ರೋಟೀನ್ 35% ರಷ್ಟಿದೆ ಮಕ್ಕಳಿಗೆ,ಬಾಣಂತಿಯರಿಗೆ ಬಹಳ ಪೌಷ್ಠಿಕ ಆಹಾರ ಇದನ್ನು ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ಫ್ರೈ ಮಾಡಿ ಮಾರಾಟ ಮಾಡುತ್ತಾರೆ.
ನಾಗೇಂದ್ರ ಮೀನುಗಾರಿಕೆ ಇಲಾಖೆ ಅಧಿಕಾರಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.