Udayavni Special

ಉತ್ತರ ಪಿನಾಕಿನಿ ನದಿಗೆ ಜೀವಕಳೆ ತಂದ ಸ್ವಾತಿ ಮಳೆ


Team Udayavani, Jul 20, 2021, 1:41 PM IST

ಉತ್ತರ ಪಿನಾಕಿನಿ ನದಿಗೆ ಜೀವಕಳೆ ತಂದ ಸ್ವಾತಿ ಮಳೆ

ಗೌರಿಬಿದನೂರು: ತಾಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ಭೂಮಿ ತಂಪಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಿಗೆಹೆಚ್ಚಿನಪ್ರಮಾಣದಲ್ಲಿ ನೀರು ಹರಿದು ಬಂದಿದೆ. ತಾಲೂಕಿನ ಜೀವನಾಡಿ ಉತ್ತರ ಪಿನಾಕಿನಿ ನದಿ ಮೈದುಂಬಿದೆ.

ತಾಲೂಕಿನಲ್ಲಿ ಕೆಲವು ದಿನಗಳಿಂದ ಮೋಡಮುಸುಕಿದ ವಾತಾವರಣ, ಆಗಾಗ ತುಂತುರಾಗಿ ಬೀಳುತ್ತಿದ್ದ ಮಳೆ, ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದು, ಭಾನುವಾರವೂ ಅಲ್ಪ ಸ್ವಲ್ಪ ಬಂದ ಕಾರಣ ಬಹುತೇಕ ಕೆರೆ ಕಟ್ಟೆ, ನದಿ ನಾಲೆ, ಜಲ ಮೂಲಗಳಿಗೆ ಜೀವ ಕಳೆ ಬಂದಿದೆ. ಬಾಡಿ ಬೆಂಡಾಗಿದ್ದ ಗಿಡ ಮರಗಳು ಈಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಶುಭ್ರ ವಾತಾವರಣಕಾಣುತ್ತಿದೆ. ಕೆಲವು ಕಡೆ ಬೆಳೆ ಜಲಾವೃತವಾಗಿ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ವಿವಿಧೆಡೆ ಮಳೆ ಪ್ರಮಾಣಪರಿಶೀಲಿಸಿದರು.

ಎಚ್‌.ಎನ್‌. ವ್ಯಾಲಿ ನೀರಿಗೂ ಸೇರ್ಪಡೆ: ಉತ್ತಮ ಮಳೆಯ ಪರಿಣಾಮ ಮಂಚೇನಹಳ್ಳಿಯವ್ಯಾಪ್ತಿಯಲ್ಲಿ ಉತ್ತರ ಪಿನಾಕಿನಿ ನದಿಗೆ ಅಲ್ಪ ಸ್ವಲ್ಪ ನೀರು ಸೇರಿದ್ದು, ನಂತರ ತುಂಬಿ ಹರಿಯ ತೊಡಗಿದೆ. ಸಮಯ ಕಳೆದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನರು ನೀರನ್ನು ನೋಡಲು ಮುಗಿಬಿದ್ದರು. ನಗರ ಹೊರವಲಯದಲ್ಲಿರುವ ಕಿಂಡಿ ಅಣೆಕಟ್ಟು ಬಳಿ ಸೇರಿದ ನದಿ ನೀರು, ಸ್ವಲ್ಪ ಪ್ರಮಾಣದಲ್ಲಿ ಎಚ್‌.ಎನ್‌. ವ್ಯಾಲಿ ನೀರಿನೊಂದಿಗೆಮರಳೂರು ಕೆರೆಗೆ ಹರಿದರೆ, ಉಳಿದ ನೀರು ನದಿಯ ಮೂಲಕ ನಗರದತ್ತ ಹರಿದಿದೆ.

ದಶಕಗಳ ಬಳಿಕ ಈ ನದಿಯಲ್ಲಿ ನೀರು ಹರಿಯುವುದನ್ನು ನೋಡಲು ನಾಗರಿಕರು ಕಿಂಡಿ ಅಣೆಕಟ್ಟಿನ ಬಳಿ ಜಮಾಯಿಸಿದರು ಇನ್ನೂಕೆಲವರು ನದಿ ನೀರಿಗೆ ಬಾಗಿನ ಅರ್ಪಿಸಿದರು.

ನದಿಗೆ ಜೀವಕಳೆ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್‌. ಎಚ್‌.ಶಿವಶಂಕರರೆಡ್ಡಿ ಮಾತನಾಡಿ, ದಶಕಗಳಿಂದ ಈ ಭಾಗದಲ್ಲಿ ಬರಗಾಲದ ಛಾಯೆ ಆವರಿಸಿದೆ. ಸಮರ್ಪಕ ಮಳೆಯಿಲ್ಲದೆ ನದಿಯಲ್ಲಿ ನೀರು ಹರಿಯುವುದೇ ಕಷ್ಟವಾಗಿತ್ತು. ಮಂಚೇನಹಳ್ಳಿ ಹಾಗೂ ತೊಂಡೇಬಾವಿಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ ಪಿನಾಕಿನಿ ನದಿಗೆ ಜೀವಕಳೆ ಬಂದಿದೆ ಎಂದು ಹೇಳಿದರು.

ಮುಖಂಡ ಕೆ.ಎಚ್‌.ಪುಟ್ಟಸ್ವಾಮಿಗೌಡ ತಮ್ಮ ಬೆಂಬಲಿಗರೊಂದಿಗೆ ಕಿಂಡಿ ಅಣೆಕಟ್ಟು ಬಳಿ ತೆರಳಿ ಉತ್ತರ ಪಿನಾಕಿನಿ ನದಿ ನೀರಿಗೆ ಬಾಗಿನ ಅರ್ಪಿಸಿದರು.

ಟಾಪ್ ನ್ಯೂಸ್

Ramesh

ನಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

Pegasus

ಪೆಗಾಸಸ್‌ ಬೇಹು ನಿಜವಾದಲ್ಲಿ, ಅದು ಗಂಭೀರ ವಿಚಾರ: ಸುಪ್ರೀಂ

drone-rules

ಹೊಸ ಡ್ರೋನ್‌ ನಿಯಮಗಳು ಜಾರಿ

Swiggy

ವಿದ್ಯುಚ್‌ ಚಾಲಿತ ವಾಹನ: ಆರ್‌ಬಿಎಂಎಲ್‌- ಸ್ವಿಗ್ಗಿ ಒಪ್ಪಂದ

Dhriti-Banerjee

ಜೆಡ್‌ಎಸ್‌ಐಗೆ ಮೊದಲ ಮಹಿಳಾ ನಿರ್ದೇಶಕಿ

Prajwal-Revann

ಮೇಕೆದಾಟು ಯೋಜನೆ ರಾಜ್ಯದ ಹಕ್ಕು

american-president-Biden

ಕಾನೂನಾತ್ಮಕ ವಲಸಿಗರಿಗೆ ಸಿಗಲಿದೆಯೇ ಅಮೆರಿಕದ ಪೌರತ್ವ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K-Sudakar

ಗುತ್ತಿಗೆ ಆಧಾರದ ಮೇಲೆ 2 ಸಾವಿರ ವೈದ್ಯರನ್ನು ನೇಮಕ ಮಾಡಲು ಕ್ರಮ

Anganwadi-cente

ಶಿಥಿಲ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ಕುಳಿತ ಉಪ್ಪರಪೇಟ ಗ್ರಾಪಂ ಅಧಿಕಾರಿಗಳು

ರಾಷ್ಟ್ರ ಧ್ವಜಕ್ಕೆ ಅಗೌರವ : ಕಣ್ಣು ಮುಚ್ಚಿ‌ ಕುಳಿತ ಉಪ್ಪರಪೇಟೆ ಗ್ರಾ.ಪಂ. ಅಧಿಕಾರಿಗಳು

euyh

ಕೋವಿಡ್ 3ನೇ ಅಲೆಯ ಭೀತಿ ನಡುವೆಯೂ ಸುರಸದ್ಮಗಿರಿ ಪ್ರವಾಸಿಗರಿಂದ ಫುಲ್  

sadhgdfds

ಕಚೇರಿಗಳಲಿ ಪ್ಲಾಸ್ಟಿಕ್ ಬಾಟಲ್‌ ಬಳಕೆ ನಿಷೇಧಿಸಿ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ವಸತಿ ಯೋಜನೆಗೆ ಹಿಡಿದ ಗ್ರಹಣ 

ವಸತಿ ಯೋಜನೆಗೆ ಹಿಡಿದ ಗ್ರಹಣ 

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಗದ್ದೆಯಂತಾದ ಕನ್ನಡಕುದ್ರು ಸಂಪರ್ಕಿಸುವ ಮುಖ್ಯ ರಸ್ತೆ

ಗದ್ದೆಯಂತಾದ ಕನ್ನಡಕುದ್ರು ಸಂಪರ್ಕಿಸುವ ಮುಖ್ಯ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.