Udayavni Special

ಮನೆ, ವಾಣಿಜ್ಯ ಮಳಿಗೆಗೆ ಮಳೆ ಕೊಯ್ಲು ಕಡ್ಡಾಯ

ಇಲ್ಲದಿದ್ದರೆ ನೀರು, ವಿದ್ಯುತ್‌ ಸಂಪರ್ಕ ಸಿಗಲ್ಲ •ಮಳೆ ನೀರು ಸದ್ಬಳಕೆ ಮಾಡಿಕೊಳ್ಳಲು ಮಳೆ ಕೊಯ್ಲು ಅನುಷ್ಠಾನ

Team Udayavani, Jul 27, 2019, 11:15 AM IST

cb-tdy-01

ಚಿಕ್ಕಬಳ್ಳಾಪುರ: ಜಿಲ್ಲೆಯ ನಾಗರಿಕರಿಗೆ ನೀವು ಹೊಸದಾಗಿ ಮನೆ ಅಥವಾ ವಾಣಿಜ್ಯ ಮಳಿಗೆ ಅಥವಾ ಇನ್ನಿತರೆ ಯಾವುದೇ ಹೊಸ ಕಟ್ಟಡ ಕಟ್ಟುವ ಆಲೋಚನೆಯಲ್ಲಿದ್ದೀರಾ? ಅಥವಾ ಈಗಾಗಲೇ ಹೊಸದಾಗಿ ಮನೆ ಕಟ್ಟಿದ್ದರೆ ಅದಕ್ಕೆ ನೀವು ತಕ್ಷಣ ಮಳೆ ಕೊಯ್ಲು ಯೋಜನೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಹೊಸದಾಗಿ ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕ ಜಪ್ಪಯ್ಯ ಅಂದ್ರು ಇನ್ಮೇಲೆ ಸಿಗಲ್ಲ.

ಹೌದು, ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆ, ಬೆಳೆೆಯಿಂದ ಎದುರಾಗುತ್ತಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಅಂತರ್ಜಲ ವೃದ್ಧಿಗೊಳಿಸುವ ದಿಸೆಯಲ್ಲಿ ಪಾಳುಬಿದ್ದ ಕಲ್ಯಾಣಿಗಳ ಪುನಶ್ಚೇತನ, ಬಹುಪಯೋಗಿ ಚೆಕ್‌ಡ್ಯಾಂಗಳ ನಿರ್ಮಾಣದ ಮೂಲಕ ಜಿಲ್ಲಾಡಳಿತ ಯಶಸ್ಸು ಕಂಡಿದೆ.

ಇದೀಗ ಮಳೆ ನೀರನ್ನು ಸದ್ಬಳಕೆ ಮಾಡಿಕೊಂಡು ಭೂಮಿಗೆ ಇಂಗಿಸಲು ಮಹತ್ವಕಾಂಕ್ಷಿ ಮಳೆ ಕೊಯ್ಲು ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದ್ದು, ಇನ್ಮೇಲೆ ಮನೆ ಅಥವಾ ವಾಣಿಜ್ಯ ಮಳಿಗೆಗಳಿಗೆ ಮಳೆ ಕೊಯ್ಲು ಯೋಜನೆ ಅನುಷ್ಠಾನಗೊಳಿಸದೇ ಇರುವುದು ಕಂಡು ಬಂದರೆ ನೀರು, ವಿದ್ಯುತ್‌ ಸಂಪರ್ಕ ನೀಡದಿರಲು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಪಾತಾಳಕ್ಕೆ ಕುಸಿದ ಅಂತರ್ಜಲ: ರಾಜ್ಯ ಸರ್ಕಾರ 2012 ರಂದು ಹೊರಡಿಸಿರುವ ಅಧಿಸೂಚಿತ ಪ್ರದೇಶಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕನ್ನು ಹೊರತುಪಡಿಸಿ ಉಳಿದ 05 ತಾಲೂಕುಗಳಾದ ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆ, ಗೌರಿಬಿದನೂರು ತಾಲೂಕುಗಳನ್ನು ಅಂತರ್ಜಲ ಅತೀ ಬಳಕೆ ಪ್ರದೇಶಗಳೆಂದು ಘೋಷಿಸಲಾಗಿದೆ.

ಆಂದೋಲನಾ: ಈಗಾಗಲೇ ಜಿಲ್ಲೆಯ ಅಂತರ್ಜಲ ಮಟ್ಟ 1500, 2000 ಅಡಿಗಳ ಪಾತಳಕ್ಕೆ ಕುಸಿದು ಹನಿ ಹನಿಗೂ ಪರದಾಡುವಂತಾಗಿದೆ. ಜಿಲ್ಲೆಯ ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಬರುವ ಅನುದಾನ ಬರೀ ಕುಡಿಯುವ ನೀರಿಗೆ ಕೋಟಿ ಕೋಟಿ ಅನುದಾನ ಖರ್ಚು ಮಾಡುವಂತಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ವಾರ್ಷಿಕವಾಗಿ 750 ಮಿ.ಮೀ ಮಳೆ ಆಗುತ್ತಿದೆ. ಆದರೆ ಮಳೆ ನೀರು ಸದ್ಬಳಕೆ ವಿಚಾರದಲ್ಲಿ ಹಿಂದೆ ಬಿದ್ದಿರುವುದನ್ನು ಮನಗಂಡಿರುವ ಜಿಲ್ಲಾಡಳಿತ ಇದೀಗ ಮಳೆ ಕೊಯ್ಲು ಯೋಜನೆಯನ್ನು ಬರದ ಜಿಲ್ಲೆಯಲ್ಲಿ ಒಂದು ರೀತಿ ಆಂದೋಲವಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ರೂಪುರೇಷೆಗಳನ್ನು ಸಿದ್ಧಪಡಿಸಿದೆ.

ಇದಕ್ಕೆ ಈ ಹಿಂದೆ ಸರ್ಕಾರವೇ ಘೋಷಿಸಿ ಆದೇಶಿರುವ ಹಲವು ಆದೇಶಗಳನ್ನು ಮುಂದಿಟ್ಟು ಕೊಂಡು ಮಳೆ ಕೊಯ್ಲು ಯೋಜನೆ ಕಡ್ಡಾಯಕ್ಕೆ ಮುಂದಾಗಿದೆ.

ಮಳೆ ಕೊಯ್ಲು ಇದ್ದರೆ ಪರವಾನಿಗೆ: ಜಿಲ್ಲಾಡಳಿತದ ಆದೇಶದ ಪ್ರಕಾರ 100 ಚದರ ಮೀ.ಅಥವಾ ಅದಕ್ಕೂ ಹೆಚ್ಚು ವಿಸ್ತಾರವಿರುವ ಎಲ್ಲಾ ವಾಸ ಸ್ಥಳ, ವಾಣಿಜ್ಯ ಕಟ್ಟಡಗಳಿಗೆ ಕಡ್ಡಾಯವಾಗಿ ಮಳೆ ನೀರು ಕೊಯ್ಲಿನ ಸೂಕ್ತ ರಚನೆಗಳನ್ನು ನಿರ್ಮಿಸಿಕೊಳ್ಳಲು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಸಭೆ ಆದೇಶಿಸಿದೆ.

ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಕಟ್ಟಡದ ನೀಲನಕಾಶೆಯಲ್ಲಿ ಚಾವಣಿಯಲ್ಲಿ ಬೀಳುವ ಮಳೆ ನೀರನ್ನು ಮಳೆ ಕೊಯ್ಲು ಮೂಲಕ ಬಳಸಿಕೊಳ್ಳುವ ಬಗ್ಗೆ ಬೇಕಾದ ನಿರ್ಮಾಣಗಳನ್ನು ಒಳಗೊಂಡಿರ ತಕ್ಕದ್ದು ಎಂಬ ಷರತ್ತಿನ ಮೇಲೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಲು ನಿರ್ಧರಿಸಿದೆ.

ಒಂದು ವೇಳೆ ಸದರಿ ಕಟ್ಟಡಗಳಿಗೆ ಮಳೆ ಕೊಯ್ಲು ಅಳವಡಿಸದ ಬಗ್ಗೆ ಕಂಡು ಬಂದರೆ ಅಂತಹ ಕಟ್ಟಡಗಳಿಗೆ ನೀರು ಮತ್ತು ವಿದ್ಯುತ್‌ ಸಂಪರ್ಕವನ್ನು ಖುದ್ದು ಪರಿಶೀಲಿಸಿ ವರದಿ ಮಾಡಿದ ನಂತರ ಕಾಯಂಗೊಳಿಸಲು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸರ್ಕಾರಿ ಕಟ್ಟಡಗಳಿಗೂ ಕಡ್ಡಾಯ: ಈಗಾಗಲೇ ಜಿಲ್ಲಾದ್ಯಂತ ಮಳೆ ಕೊಯ್ಲು ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ ಕಟ್ಟಡಗಳಿಗೂ ಮಳೆ ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಕೋಟಿ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗ್ರಂಥಾಲಯ, ರಂಗ ಮಂದಿ ಸೇರಿದಂತೆ ದೊಡ್ಡ ದೊಡ್ಡ ಕಟ್ಟಡಗಳಿಗೂ ಮಳೆ ಕೊಯ್ಲು ಯೋಜನೆ ಅಳವಡಿಸಿಲ್ಲ. ಇದೀಗ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮಳೆ ಕೊಯ್ಲು ಯೋಜನೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

 

● ಕಾಗತಿ ನಾಗರಾಜಪ್ಪ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಪತ್ರದ ಊಹಾಪೋಹ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಸೋರಿಕೆಯಾದ ಪತ್ರದ ಗುಟ್ಟು

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ವಿವಾದ!

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

ಫ್ರಾನ್ಸ್ ಚರ್ಚ್ ನೊಳಗೆ ಟೆರರ್ ಅಟ್ಯಾಕ್?: ಮಹಿಳೆಯ ರುಂಡ ಕತ್ತರಿಸಿ ಹತ್ಯೆ, ಆರೋಪಿ ಸೆರೆ

ಫ್ರಾನ್ಸ್ ಚರ್ಚ್ ನೊಳಗೆ ಟೆರರ್ ಅಟ್ಯಾಕ್?: ಮಹಿಳೆಯ ರುಂಡ ಕತ್ತರಿಸಿ ಹತ್ಯೆ, ಆರೋಪಿ ಸೆರೆ

ಗ್ರಾ.ಪಂ. ಚುನಾವಣೆಗೆ194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ

ಗ್ರಾ.ಪಂ. ಚುನಾವಣೆಗೆ 194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಪರಿಸರ ಸ್ನೇಹಿ ಪಟಾಕಿ ಬಳಸಿ, ಆದೇಶ ಉಲ್ಲಂಘಿಸಿದ್ರೆ ಒಂದು ಲಕ್ಷ ರೂ.ದಂಡ: ದೆಹಲಿ ಸರ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cb-tdy-2

ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ

cb-tdy-1

ಜಿಲ್ಲೆಯಲ್ಲಿ ಮಾರ್ಷಲ್‌ ಸೈನಿಕರ ನೇಮಕ

ಕೋವಿಡ್ ನಿಯಮಗಳನ್ನು ಉಲಂಘಿಸಿ ಮೋಜು ಮಸ್ತಿ; ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಎಚ್ಚರಿಕೆ

ಕೋವಿಡ್ ನಿಯಮಗಳನ್ನು ಉಲಂಘಿಸಿ ಮೋಜು ಮಸ್ತಿ; ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಎಚ್ಚರಿಕೆ

ಮೂಲಭೂತ ಹಕ್ಕು, ಕರ್ತವ್ಯ ಅರಿವು ಅಗತ್ಯ

ಮೂಲಭೂತ ಹಕ್ಕು, ಕರ್ತವ್ಯ ಅರಿವು ಅಗತ್ಯ

CB-TDY-1

ಶಿಡ್ಲಘಟ್ಟ ಸಾರ್ವಜನಿಕ ಗ್ರಂಥಾಲಯ ಶಿಥಿಲ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

ಹೊಸ ಸೇರ್ಪಡೆ

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಈ ಗೆಡ್ಡೆಯಲ್ಲಿ ಅತ್ಯಧಿಕ ಫೈಬರ್‌ ಅಂಶವಿದೆ. ಇದು ಜೀರ್ಣ ಕ್ರಿಯೆಗೆ ಅನುಕೂಲ ಮಾಡುತ್ತದೆ

ಕೆಸುವು ಅಂದ್ರೆ ಹಸಿವು

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಪತ್ರದ ಊಹಾಪೋಹ

ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ರಜನಿಕಾಂತ್? ಏನಿದು ಸೋರಿಕೆಯಾದ ಪತ್ರದ ಗುಟ್ಟು

ದಕ್ಷಿಣ ಕನ್ನಡ : ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ 16 ಮಂದಿ ಬಂಧನ, ಸೊತ್ತು ವಶಕ್ಕೆ

ದಕ್ಷಿಣ ಕನ್ನಡ : ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ 16 ಮಂದಿ ಬಂಧನ, ಸೊತ್ತು ವಶಕ್ಕೆ

hula

ಜೇಡುಹುಳು – ಕಾಂಡ ಕೊರಕ ಹುಳುಗಳ ನಿರ್ವಹಣೆಗಾಗಿ ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.