Udayavni Special

ಜಿಲ್ಲೆಯಲ್ಲಿ ಮಾರ್ಷಲ್‌ ಸೈನಿಕರ ನೇಮಕ


Team Udayavani, Oct 28, 2020, 1:44 PM IST

cb-tdy-1

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್ ವೈರಾಣು ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಜಿಲ್ಲೆಯ ಪ್ರತಿಯೊಬ್ಬರೂ ಶ್ರಮಿಸ  ಬೇಕಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಭೌತಿಕ ಅಂತರ ಸೇರಿದಂತೆ ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡಲು ಜಿಲ್ಲಾ ಕೇಂದ್ರದಲ್ಲಿ ಇಂದಿನಿಂದ ಮಾರ್ಷಲ್‌ ಸೈನಿಕರನ್ನು ನೇಮಿಸಲಾ ಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದರು.

ಚಿಕ್ಕಬಳ್ಳಾಪುರ ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಕೋವಿಡ್‌-19 ಸೋಂಕು ತಡೆಗಟ್ಟುವ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾದರೂ ಸಹ ದ್ವಿತೀಯ ಹಂತದಲ್ಲಿ ಸೋಂಕು ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರನ್ನು ಜಾಗೃತಿಗೊಳಿಸುವ ಸಲುವಾಗಿ ಅರಿವು ಮತ್ತು ಜಾಗƒತಿ ಮೂಡಿಸುವ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯ ಮಾಡುವ ನಾಗರಿಕರಿಗೆ ದಂಡ ವಿಧಿಸಲು ವಾರ್ಡ್‌ ಮಟ್ಟದಲ್ಲಿ ಮಾರ್ಷಲ್‌ ಸೈನಿಕರನ್ನು ನೇಮಕ ಮಾಡಲಾಗಿದೆ ಎಂದರು.

ದಂಡ ವಿಧಿಸಲಿದ್ದಾರೆ: ಜಿಲ್ಲೆಯ ಸ್ವಚ್ಛತಾ ಕ್ಯಾಪ್ಟನ್‌ಗಳೇ ಮಾರ್ಷಲ್‌ಗ‌ಳಾಗಿ ಕಾರ್ಯನಿರ್ವಹಿಸಲಿದ್ದು, ಅವರು ಕೋವಿಡ್ ತಡೆಗಟ್ಟುವ ಮತ್ತು ಸ್ವಚ್ಛತೆ ಕಾಪಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಮಾಸ್ಕ್ ಧರಿಸದೆ ಓಡಾಡುವರು ಮತ್ತು ಭೌತಿಕ ಅಂತರ ಪಾಲಿಸದೆ ಇರುವವರಿಗೆ ದಂಡ ವಿಧಿಸಲಿದ್ದಾರೆ ಎಂದು ತಿಳಿಸಿದರು.

ಡಿವೈಎಸ್ಪಿ ರವಿಶಂಕರ್‌, ನಗರಸಭೆ ಪೌರಾಯುಕ್ತ ಲೋಹಿತ್‌ ಕುಮಾರ್‌, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಯಶಶ್ವನಿ ಉಪಸ್ಥಿತರಿದ್ದರು.

ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ :

ಪಾತಪಾಳ್ಯ: ಗ್ರಾಮ ಸ್ವಚ್ಛತೆ, ವೈಯಕ್ತಿಕಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿರೀಶ್‌ ಕಶ್ಯಪ್‌ ತಿಳಿಸಿದರು.

ರಾಶ್ಚೆರವು ಗ್ರಾಮ ಪಂಚಾಯತಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆ ಹಾಗೂ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಮನೆಗಳ ಮುಂದೆ ಹರಿಸುವ ಮಲೀನ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು,ಜನರು ಸ್ವತ್ಛತೆಗೆ ಆದ್ಯತೆ ನೀಡಬೇಕು. ಖಾಲಿ ಇರುವ ಸ್ಥಳದಲ್ಲಿ ಗಿಡಮರಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸಿಕೊಳ್ಳಬೇಕು. ಜ್ವರ, ನೆಗಡಿ, ಕೆಮ್ಮು ಕಂಡ ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್‌ನಿಂದ ದೂರವಿರಲು ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಪಿಡಿಒ ನಾರಾಯಣಸ್ವಾಮಿ ಮಾತನಾಡಿ, ಜನರ ಸಹಭಾಗಿತ್ವವಿದ್ದಾಗ ಮಾತ್ರ ಕೋವಿಡ್ ದಿಂದ ಮುಕ್ತರಾಗಬಹುದು. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದವರಿಗೆ ಗ್ರಾಪಂನಿಂದ ದಂಡ ಹಾಕಲಾಗುವುದು ಎಂದರು. ಕರ ವಸೂಲಿಗಾರ ವಿ.ನಂಜುಂಡಪ್ಪ ಡಿಇಒ ಜಿ.ವಿ.ಮಂಜುನಾಥ, ಸಿಬ್ಬಂದಿ ಸೀನಪ್ಪ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

“ದೆಹಲಿ ಚಲೋ’ ವೇಳೆ ರೈತರು-ಪೊಲೀಸರ ನಡುವೆ ಘರ್ಷಣೆ; ಹರ್ಯಾಣದಲ್ಲಿ ಹೈಡ್ರಾಮಾ

mamata-banerjee

ಬಿಜೆಪಿ ಹೊರಗಿನವರ ಪಕ್ಷ; ಬಿಜೆಪಿಯನ್ನು ಬಂಗಾಳದಲ್ಲಿ ಬೇರೂರಲು ಬಿಡುವುದಿಲ್ಲ ಮಮತಾ ಬ್ಯಾನರ್ಜಿ

ರೌಡಿಶೀಟರ್ ಸುಮಂತ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ರೌಡಿಶೀಟರ್ ಸುಮಂತ್ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

02

ಯೋಗೀಶ್ ಗೌಡ ಹತ್ಯೆ ಪ್ರಕರಣ : ಮತ್ತೆ ವಿನಯ್ ಜಾಮೀನು ಅರ್ಜಿ ಸಲ್ಲಿಕೆ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

“ಜಾತಿ ಗಣತಿ” ವರದಿಗೆ ತಾರ್ಕಿಕ ಅಂತ್ಯ: ಜಯಪ್ರಕಾಶ್‌ ಹೆಗ್ಡೆ ವಿಶ್ವಾಸ

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಚಾರವಿಲ್ಲದೇ ತಾಲೂಕಿನ ಕೆರೆಗಳ ಹರಾಜು: ಆಕ್ರೋಶ

ಪ್ರಚಾರವಿಲ್ಲದೇ ತಾಲೂಕಿನ ಕೆರೆಗಳ ಹರಾಜು: ಆಕ್ರೋಶ

ಜಿಲ್ಲೆಯಲ್ಲಿ 86 ಬಾಲ್ಯವಿವಾಹಕ್ಕೆ ತಡೆ

ಜಿಲ್ಲೆಯಲ್ಲಿ 86 ಬಾಲ್ಯವಿವಾಹಕ್ಕೆ ತಡೆ

ತೋಟಗಾರಿಕೆ ಇಲಾಖೆ ನಿರ್ದೇಶಕಿಯಾಗಿ ಬಿ.ಫೌಝೀಯಾ ತರುನ್ನುಮ್ ನೇಮಕ

ತೋಟಗಾರಿಕೆ ಇಲಾಖೆ ನಿರ್ದೇಶಕಿಯಾಗಿ ಬಿ.ಫೌಝೀಯಾ ತರುನ್ನುಮ್ ನೇಮಕ

CB-TDY-2

ಪಿಎಂಎಸ್‌ವೈಎಂ, ಪಿಂಚಣಿ ಅಭಿಯಾನಕ್ಕೆ ಡೀಸಿ ಚಾಲನೆ

CB-TDY-1

ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ ವಿದ್ಯಾರ್ಥಿಗಳು

MUST WATCH

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

ಹೊಸ ಸೇರ್ಪಡೆ

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

ಹಣದ ವಿಚಾರಕ್ಕೆ ಮಹಿಳೆಯನ್ನು ಕೊಲೆಗೈದಿದ್ದಾತನಿಗೆ ಜೀವಾವಧಿ ಶಿಕ್ಷೆ

IGP

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ IGP ವಿುಲ್ ಕುಮಾರ್

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

ಹುಣಸೂರು: ಆಟೋ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸಾವು

ಹುಣಸೂರು: ಆಟೋ, ಬೈಕ್ ಮುಖಾಮುಖಿ ಡಿಕ್ಕಿ; ಸವಾರ ಸಾವು

ಮoಡ್ಯ: ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಮಹಿಳಾ ಸಂಘಟಕರು

ಮoಡ್ಯ: ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾದ ಮಹಿಳಾ ಸಂಘಟಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.