Udayavni Special

ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆ


Team Udayavani, Jun 1, 2021, 1:18 PM IST

ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ಗುಡಿಬಂಡೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ಭೂಮಿ ಹಸನು ಮಾಡಿಕೊಂಡಿರುವ ರೈತರು ಸಂಪರ್ಕ ಕೇಂದ್ರಗಳಲ್ಲಿ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಬಹುದಾಗಿದೆ.

ಈ ಕುರಿತುಪತ್ರಿಕಾಹೇಳಿಕೆನೀಡಿರುವಸಹಾಯಕ ಕೃಷಿ ನಿರ್ದೇಶಕಿ ಅನೀಸ್‌ ಸಲ್ಮಾ, ಸರ್ಕಾರ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಪೂರೈಸಿದೆ. ಬೀಜದ ಜೊತೆಗೆ ರಸಗೊಬ್ಬರ ಸಹ ದಾಸ್ತಾನು ಮಾಡಲಾಗಿದೆ. ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಆನ್‌ಲೈನ್‌ ಮೂಲಕ ಮೇ 31ರಿಂದಲೇವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ರೈತರು ಪ್ರಧಾನಮಂತ್ರಿ ಫಸಲ್‌ ಬೀಮಾ ಯೋಜನೆಯಡಿ ತಮ್ಮ ಬೆಳೆಗೆ ವಿಮೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಹೋಬಳಿಯಲ್ಲೇ ಮಾರಾಟ: ಇದೇ ವೇಳೆ ತಾಂತ್ರಿಕ ಕೃಷಿ ಅಧಿಕಾರಿ ಶಂಕರಯ್ಯ ಮಾತನಾಡಿ,ರೈತರಿಗೆ ಅನುಕೂಲವಾಗಲು ಆಯಾ ಹೋಬಳಿ ವ್ಯಾಪ್ತಿಯಲ್ಲೇ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತಿದೆ. ಎಲ್ಲಾ ವರ್ಗದ ರೈತರಿಗೆ ಗರಿಷ್ಠ2.0 ಹೆಕ್ಟೇರ್‌ ಅಥವಾ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತದೆ ಎಂದು ವಿವರಿಸಿದ್ದಾರೆ. ನಿಯಮ ಪಾಲಿಸಿ: ಲಾಕ್‌ಡೌನ್‌ ಜಾರಿಯಲ್ಲಿರುವ ಕಾರಣ ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ಬಿತ್ತನೆ ಬೀಜ ಮಾರಾಟ ಮಾಡಲಿದ್ದು, ರೈತರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಿತ್ತನೆ ಬೀಜ ಖರೀದಿಸಬೇಕು ಎಂದು ಹೇಳಿದರು.

ನೋಂದಣಿಗೆ ಅವಕಾಶ: ಈಗಾಗಲೇ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಸರಾಸರಿ 97.80 ಮಿ.ಮೀ ಮಳೆಯಾಗಬೇಕಿತ್ತು. ಇಲ್ಲಿಯವರೆಗೂ ಶೇ.102ಮಿ.ಮೀ. ಆಗಿದೆ. ಕಸಬಾ ಹೋಬಳಿಯಲ್ಲಿ 99.10, ಸೋಮೇನಹಳ್ಳಿ ಹೋಬಳಿಯಲ್ಲಿ 99.73 ಮಳೆದಾಖಲಾಗಿದೆ. ಕೆಲವು ಗ್ರಾಮಗಳಲ್ಲಿ ಉಳುಮೆಕಾರ್ಯ ಪ್ರಾರಂಭವಾಗಿದೆ.ಬಿತ್ತನೆಬೀಜಪಡೆಯಲು ಪಹಣಿ, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ನೀಡಬೇಕು. ಅಷ್ಟೇ ಅಲ್ಲದೇ, ಫ್ರೊಟ್ಸ್‌ ತಂತ್ರಾಂಶದಲ್ಲೂ ನೋಂದಣಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.

ಬಿತ್ತನೆ ಗುರಿ: ತಾಲೂಕಿನ ಕಸಬಾ ಹಾಗೂ ಸೋಮೇನಹಳ್ಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೆಲಗಡಲೆ, ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದಿ, ತೃಣ ಧಾನ್ಯಗಳ ದಾಸ್ತಾನು ಮಾಡಲಾಗಿದೆ. ತಾಲೂಕಿನ10,025 ಹೆಕ್ಟೇರ್‌ ಮಳೆ ಆಶ್ರಿತ, ನೀರಾವರಿ 1435 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ನೀರಾವರಿ 16 ಹೆಕ್ಟೇರ್‌, ಮಳೆ ಆಶ್ರಿತ5 ಹೆಕ್ಟೇರ್‌ನಲ್ಲಿ ಬಿತ್ತನೆಕಾರ್ಯ ನಡೆದಿದೆ. ತಾಲೂಕಿನ ವಿವಿಧ ಮಳಿಗೆಗಳಲ್ಲಿ ರಸಗೊಬ್ಬರಗಳ ದಾಸ್ತಾನು ಆಗಿದ್ದು, ಯೂರಿಯಾ 92.44, ಡಿ.ಎ.ಪಿ 30.10, ಎಂ.ಒ.ಪಿ 12, ಎಸ್‌.ಎಸ್‌.ಪಿ 11.45, ಕಾಂಪ್ಲೆಕ್ಸ್‌ 156.97 ಒಟ್ಟು 305.28 ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನು ಮಾಡಲಾಗಿದೆ.

ಟಾಪ್ ನ್ಯೂಸ್

02

ರೈಡರ್ ಬಿಡುಗಡೆ ಮುನ್ನವೇ ಮತ್ತೊಂದು ಬಿಗ್ ಸಿನಿಮಾದಲ್ಲಿ ನಿಖಿಲ್

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

shivamogga airport design

ಶಿವಮೊಗ್ಗ ಏರ್ ಪೋರ್ಟ್ ನೀಲ ನಕ್ಷೆ ವಿವಾದ: ಕಾಂಗ್ರೆಸ್ ಟೀಕೆಗೆ ಕಿಡಿಕಾರಿದ ಸಚಿವ ಈಶ್ವರಪ್ಪ

ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ

ಬೆಂಗಳೂರು: ಹಾಡುಹಗಲೇ ಕಚೇರಿ ಮುಂದೆ ಮಾಜಿ ಕಾರ್ಪೊರೇಟರ್ ಭೀಕರ ಹತ್ಯೆ

12ನೇ ತರಗತಿಯ ಫಲಿತಾಂಶಗಳನ್ನು ಜು.31ರೊಳಗೆ ಪ್ರಕಟಿಸಿ: ಸುಪ್ರೀಂ ಕೋರ್ಟ್

12ನೇ ತರಗತಿಯ ಫಲಿತಾಂಶಗಳನ್ನು ಜು.31ರೊಳಗೆ ಪ್ರಕಟಿಸಿ: ಸುಪ್ರೀಂ ಕೋರ್ಟ್

01

‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೆ ಹೊಸ ಡೇಟ್ ?

‘ಯಾವ ಸಭೆಗೂ ನನ್ನನ್ನು ಕರೆಯಲ್ಲ’: ಎಂಎಲ್ ಸಿ ಭೋಜೇಗೌಡ ಏಕಾಂಗಿ ಪ್ರತಿಭಟನೆ

‘ಯಾವ ಸಭೆಗೂ ನನ್ನನ್ನು ಕರೆಯಲ್ಲ’: ಎಂಎಲ್ ಸಿ ಭೋಜೇಗೌಡ ಏಕಾಂಗಿ ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chikkaballapura news

ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಲು ಇನ್ನೂ ಎರಡು ವರ್ಷ ಬೇಕು

chikkaballapura news

ಎಚ್‌.ಎನ್‌.ವ್ಯಾಲಿ ನೀರು ಅಕ್ರಮ ಬಳಕೆ ಮಾಡಿದ್ರೆ ಕ್ರಮ

drone-experiment-successful

ಡ್ರೋಣ್‌ ಪ್ರಯೋಗ ಯಶಸ್ವಿ

07

ರೈತರನ್ನು ಕಡೆಗಣಿಸಿದರೆ ದೇಶ ಉಳಿಯುವುದಿಲ್ಲ: ಬ್ಯಾಲಹಳ್ಳಿ ಬೈರೇಗೌಡ

yoga

ರೋಗದಿಂದ ಮುಕ್ತರಾಗಲು ಯೋಗ ಮಾಡಿ

MUST WATCH

udayavani youtube

‘ಯಾವ ಸಭೆಗೂ ನನ್ನನ್ನು ಕರೆಯಲ್ಲ’: ಎಂಎಲ್ ಸಿ ಭೋಜೇಗೌಡ ಏಕಾಂಗಿ ಪ್ರತಿಭಟನೆ

udayavani youtube

ಒಲಿಂಪಿಕ್ಸ್‌ : ವನಿತಾ ಹಾಕಿಗೆ ರಾಣಿ ರಾಮ್‌ಪಾಲ್‌ ನಾಯಕಿ

udayavani youtube

udayavani youtube

ಪಾಕಿಸ್ತಾನ: ಉಗ್ರ ಹಫೀಜ್ ಸಯೀದ್ ನಿವಾಸದ ಬಳಿ ಸ್ಫೋಟ

udayavani youtube

ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಸಿಐಡಿ ಇನ್ಸ್ ಪೆಕ್ಟರ್ ಸಾವು

ಹೊಸ ಸೇರ್ಪಡೆ

heineken-buys-additional-39-6-million-shares-in-ubl

ಯುಬಿಎಲ್ ನ 39.64 ಮಿಲಿಯನ್ ಷೇರುಗಳು ಹೈನೆಕೆನ್ ಪಾಲು..!

02

ರೈಡರ್ ಬಿಡುಗಡೆ ಮುನ್ನವೇ ಮತ್ತೊಂದು ಬಿಗ್ ಸಿನಿಮಾದಲ್ಲಿ ನಿಖಿಲ್

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹಾರಿದ ತಾಯಿ: ಮೂವರು ಸಾವು

dghhgfdsa

ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ಎಂಬುದು ಮೂರ್ಖತನದ ಹೇಳಿಕೆ : ಈಶ್ವರಪ್ಪ

ಎರ್ಮಾಳು ರೈಲ್ವೇ ಗೇಟು ಲಾಕ್: ಮುಕ್ಕಾಲು ಗಂಟೆ ರಸ್ತೆ ಸಂಚಾರ ಬಂದ್

ಎರ್ಮಾಳು ರೈಲ್ವೇ ಗೇಟು ಲಾಕ್: ಮುಕ್ಕಾಲು ಗಂಟೆ ರಸ್ತೆ ಸಂಚಾರ ಬಂದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.